LIVE TV StateNationalPoliticsCrimeEntertainmentSportsEducationFINANCE & TAXATION
Districts Bellary

ಜನ್ಮ ದಿನದ ಅದ್ಧೂರಿ ಆಚರಣೆ ಬೇಡ: ಶಾಸಕ ನಾರಾ ಭರತ್ ರೆಡ್ಡಿ

ಬಳ್ಳಾರಿ : ಈ ಸಲ ನಾನು ನನ್ನ ಜನ್ಮ ದಿನ ಆಚರಣೆ ಮಾಡುವುದಿಲ್ಲ ಎಂದು  ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ತಿಳಿಸಿದ್ದಾರೆ.

ಈ ಕುರಿತು ರವಿವಾರ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಅಕ್ಟೋಬರ್ 25 ಅವರ ಜನ್ಮ ದಿನ ಆಗಿದ್ದು, ಪ್ರತಿ ವರ್ಷ ನನ್ನ ಹುಟ್ಟುಹಬ್ಬದಂದು ಸುಮಾರು 50 ರಿಂದ 60 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಿ ಸಂತೋಷ ಹಂಚಿಕೊಳ್ಳುತ್ತಿದ್ದೆವು. ಆದರೆ ಈ ಬಾರಿ ಮಹರ್ಷಿ ವಾಲ್ಮೀಕಿ ಅವರ ಪವಿತ್ರ ಪ್ರತಿಮೆಯ ಉದ್ಘಾಟನೆ ಇನ್ನೂ ಬಾಕಿ ಇರುವುದರಿಂದ, ಭೋಜನಕೂಟ ಕಾರ್ಯಕ್ರಮವೂ ಸೇರಿದಂತೆ ಎಲ್ಲಾ ಆಚರಣೆಗಳನ್ನು ಮುಂದೂಡುವಂತೆ ತಮ್ಮ ಮಿತ್ರರು ಹಾಗೂ ಕಾರ್ಯಕರ್ತರಿಗೆ ವಿನಂತಿಸಿಕೊಂಡಿದ್ದಾರೆ.

ಮಹಾನ್ ಋಷಿ ವಾಲ್ಮೀಕಿ ಅವರ ಪ್ರತಿಮೆ ಉದ್ಘಾಟನೆಯಾಗದೇ ಇರುವಾಗ ತಮ್ಮ ಹುಟ್ಟುಹಬ್ಬವನ್ನು ಆಚರಿಸುವುದು ತಮಗೆ ಸರಿಯೆನಿಸುವುದಿಲ್ಲ. ಆ ಮಹಾನ್ ಋಷಿಯ ಪ್ರತಿಮೆ ಉದ್ಘಾಟನೆಯಾಗುವವರೆಗೆ ಯಾವುದೇ ರೀತಿಯಲ್ಲಿ ನನಗೆ ಸಂಬಂಧಿಸಿದ ಶುಭಾಶಯ ಕಾರ್ಯಕ್ರಮ ಅಥವಾ ಇತರ ಯಾವುದೇ ರೀತಿಯ ಆಚರಣೆಗಳನ್ನು ಮಾಡದಂತೆ ಎಲ್ಲರಿಗೂ ವಿನಂತಿಸಿದ್ದಾರೆ.

 

ಸಾರ್ವಜನಿಕ ಕಾರ್ಯಕ್ಕೆ ಆದ್ಯತೆ ನೀಡುವುದೇ ತಮ್ಮ ಆಶಯ. ವಾಲ್ಮೀಕಿ ಪ್ರತಿಮೆಯ ಉದ್ಘಾಟನೆಯ ನಂತರ ಸೂಕ್ತ ಸಮಯದಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸುವುದು ಉತ್ತಮವೆಂದು ಅಭಿಪ್ರಾಯಪಟ್ಟಿರುವ ಶಾಸಕ ನಾರಾ ಭರತ್ ರೆಡ್ಡಿ, ತಮ್ಮ ಈ ವಿನಯಪೂರ್ಣ ವಿನಂತಿಯನ್ನು ಎಲ್ಲರೂ ಅರ್ಥಮಾಡಿಕೊಂಡು ಪಾಲಿಸಬೇಕೆಂದು ಮನವಿ ಮಾಡಿದ್ದಾರೆ.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯ ದಶಮಿಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ದಸರಾ ಹಾಗೂ ಆಯುಧ ಪೂಜೆಜಾತಿಭೇದವಿಲ್ಲದೆ ದಲಿತರ ಮನೆಯಲ್ಲಿ ಊಟ ಸವಿದ ಡಾ. ಬಿ. ಯೋಗೇಶ್ ಡಿಸ್ಕವರಿ ವಾಹಿನಿಯಲ್ಲಿ ಕೆಐಐಟಿ ಸಾಧನೆ ಬಣ್ಣನೆ ಕನ್ನಡಿಗರು ವಿಶಾಲತೆ, ಸಾಮರಸ್ಯ ಉಳ್ಳವರಾಗಿರುವುದರಿಂದಲೇ ಕನ್ನಡಕ್ಕೆ ಕಂಟಕ!ಹಾಡಿನ ಚಿತ್ರೀಕರಣದೊಂದಿಗೆ ‘ಚಂದ್ರಗಿರಿ’ ಚಿತ್ರೀಕರಣ ಮುಕ್ತಾಯಸರ್ವೋದಯ ಮಹಾವಿದ್ಯಾಲಯದ ಸೌಕರ್ಯ, ಶೈಕ್ಷಣಿಕ ಸಾಧನೆಗೆ ದಾವಣಗೆರೆ ವಿವಿ ಉಪಕುಲಪತಿ ಮೆಚ್ಚುಗೆಬಡತನ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನಾಚರಣೆ ಬೆಂಗಳೂರಿನಲ್ಲಿ ಐಸಿಎಸ್ಐ ಇನ್ವೆಸ್ಟ್ ಇಂಡಿಯಾ ಶೃಂಗಸಭೆ ಆಯೋಜನೆಎಚ್.ಡಿ. ಕುಮಾರಸ್ವಾಮಿ ವಿವಾದಾತ್ಮಕ ಮಾತುಗಳಿಗೆ ಖಂಡನೆ, ಕ್ಷಮೆಯಾಚನೆಗೆ ಆಗ್ರಹ: ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಅರ್ಜುನ್ ಗೋಪಾಲಯ್ಯ