ಸುರಪುರ : ನಾರಾಯಣಪುರ ಜಲಾಶಯದಿಂದ ವಾರಾಬಂಧಿ ನೀತಿ ವಿರೋಧಿಸಿ ಮಾಜಿ ಸಚಿವರಾದ ನರಸಿಂಹ ನಾಯಕ (ರಾಜುಗೌಡ) ರ ನೇತೃತ್ವದಲ್ಲಿ ಬೀದರ್ ನಿಂದ ಶ್ರೀರಂಗಪಟ್ಟಣ ಕ್ಕೆ ಸಂಪರ್ಕ ಕಲ್ಪಿಸುವ ದೇವಾಪುರ ಕ್ರಾಸ್ ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಪಕ್ಷಾತೀತವಾಗಿ ಬಾಗವಹಿಸುವಂತೆ ಯುವ ಮುಖಂಡ ಮಲ್ಲು ಚಾನಕೋಟಿ ಆಗ್ರಹಿಸಿದ್ದಾರೆ.
ವಾರಾಬಂಧಿ ನೀತಿಯಿಂದ ಕಾಲುವೆಯ ಕೊನೆಯ ಭಾಗದ ರೈತರ ಜಮೀನಿಗಳಿಗೆ ಇನ್ನೂ ಕೂಡ ನೀರು ತಲುಪುತ್ತಿಲ್ಲ, ಹೀಗಾಗಿ ಅಕ್ಟೋಬರ್ 30 ರವರೆಗೆ ವಾರಾಬಂಧಿ ನೀತಿ ಅನುಸರಿಸದೇ ಸತತವಾಗಿ ನೀರು ಹರಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಈ ಬೃಹತ್ ಪ್ರತಿಭಟನೆಯಲ್ಲಿ ಸುರಪುರ, ಶಹಾಪುರ, ಹುಣಸಗಿ, ಯಾದಗಿರಿ, ಶಹಾಪುರ ಮತ್ತು ಜೇವರ್ಗಿ ತಾಲ್ಲೂಕಿನ ಜನತೆ ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವಂತೆ ಮನವಿ ಮಾಡಿದ್ದಾರೆ.