ಮರಿಯಮ್ಮನಹಳ್ಳಿ: ಪಟ್ಟಣದ ನಾಡ ಕಾರ್ಯಾಲಯದಲ್ಲಿ ವಿವಿಧ ಸೇವೆಗಳ ನಿರ್ವಹಣೆಗೆ ಸಿಬ್ಬಂದಿಗಳ ಕೊರತೆಯಿಂದ ಜನ ಸಂದಣಿ ಹೆಚ್ಚಾಗುತ್ತಿದೆ. ಕೂಡಲೇ ಸಿಬ್ಬಂದಿಯ ನೇಮಿಸಲು ಸರ್ಕಾರಕ್ಕೆ ಪತ್ರಬರೆಯಲಾಗಿದೆ ಎಂದು ಹೊಸಪೇಟೆ ತಾಲ್ಲೂಕು ತಹಶಿಲ್ದಾರ್ ಶೃತಿ ಎಂ.ಮಳ್ಳಪ್ಪಗೌಡರ್ ಹೇಳಿದರು. ಅವರು ಪಟ್ಟಣದಲ್ಲಿ ಎಸ್.ಎಲ್.ಆರ್. ಮೆಟಾಲಿಕ್ಸ್ ಕಂಪನಿಯು ಸಿ.ಎಸ್.ಆರ್ ಯೋಜನೆಯಲ್ಲಿ ಪಟ್ಟದ ನಾಡಕಾರ್ಯಾಲಯಕ್ಕೆ ನೂತನವಾಗಿನಿ ರ್ಮಿಸಿದ ಕಾಂಪೌಂಡ್ಅನ್ನುಉದ್ಘಾಟಿಸಿ ಮಾತನಾಡಿದರು, ಹೊಸಪೇಟೆ ತಾಲೂಕಿನ ಮೂರು ಕಡೆ ಪ್ರಜಾಸೇವೆ ಮಾಡಲಾಗಿದೆ. ಕಮಲಾಪುರ ಹೋಬಳಿ, ವೆಂಕಟಾಪುರ, ಹೊಸಪೇಟೆ ಮೂರು ಕಡೆ ನಡೆಸಲಾಗಿದೆ. ಮೂರುಕಡೆ ಉತ್ತಮ ಸ್ಪಂದನೆ ಇತ್ತು. ಇದರಲ್ಲಿ ಬಹುತೇಕ ಅರ್ಜಿಗಳು ನಿವೇಶನಕೋರಿ ಅರ್ಜಿಗಳು ಬಂದಿವೆ. ಈ ಬಗ್ಗೆ ಕ್ರಮವಹಿಸಲು ಸರ್ಕಾರದ ಮಟ್ಟಕ್ಕೆ ಪತ್ರಬರೆಯಲಾಗಿದೆ. ಈಗಾಗಲೇ ಪ್ರತಿ ಗ್ರಾಮಪಂಚಾಯ ಮಟ್ಟದಲ್ಲಿ 2.5 ಎಕರೆ ಸರ್ಕಾರಿ ಭೂಮಿ ಗುರುತಿಸಲು ಸೂಚಿಸಲಾಗಿದೆ. ಅಲ್ಲದೇ ನಾಣಿಕೇರಿಯಿಂದ ಬಂದು ಪಟ್ಟಣದಲ್ಲಿ ನೆಲೆಸಿರುವವರಿಗೆ ನಿವೇಶನಗಳಿಗೆ ದಾಖಲೆ ನೀಡುವ ಕುರಿತು ಪರಿಶೀಲಿಸಲಾಗುವುದೆಂದರು.
ಈ ಸಂಧರ್ಭದಲ್ಲಿ ಉಪತಹಶಿಲ್ದಾರ ಶ್ರೀಧರ, ಎಸ್.ಎಲ್.ಆರ್.ಕಂಪನಿಯ ಅಧಿಕಾರಿಗಳಾದ ಮಾರುತಿಗೋಸಿ, ಭುಜಂಗರಾವ್, ಗುತ್ತಿಗೆದಾರರಾದ ಲಕ್ಷ್ಮೀ ದೇವಿ ಅಂಬರೀಷ್, ಗ್ರಾಮಲೆಕ್ಕಿಗರಾದ ಅನಿತ, ಮಣಿಕಂಠ, ರಾಘವೇಂದ್ರ, ಕೊಟ್ರೇಶ್ , ಸುರೇಶ್ ಇತರರಿದ್ದರು.