LIVE TV StateNationalPoliticsCrimeEntertainmentSportsEducationFINANCE & TAXATION
Districts Koppal

ಕೊಪ್ಪಳ ; ಎಸ್.ಐ.ಆರ್ ರದ್ದುಪಡಿಸಲು ಆಗ್ರಹಿಸಿ ಬೃಹತ್ ಪ್ರತಿರೋಧ ‘ತಿರಂಗಾ ಯಾತ್ರೆ’

ಜ್ಞಾನೇಶ್ ಕುಮಾರ್ ಬಂಧನ ಹಾಗೂ ಬ್ಯಾಲೆಟ್ ಪೇಪರ್ ಪದ್ಧತಿ ಜಾರಿಗೆ ಪ್ರತಿಭಟನಾಕಾರರ ಪಟ್ಟು.

ಕೊಪ್ಪಳ:ಅ.23. "ನಮ್ಮ ಚಳವಳಿಗೆ ಸುದೀರ್ಘ ಇತಿಹಾಸವಿದೆ. ಬ್ರಿಟಿಷರ ವಿರುದ್ಧ ಹೋರಾಡಿದ ಚರಿತ್ರೆ ಇಲ್ಲದವರು ಇಂದು ಚಳವಳಿಯ ಜ್ಞಾನವಿಲ್ಲದೆ ಮಾತನಾಡುತ್ತಿದ್ದಾರೆ. ದೆಹಲಿಯಲ್ಲಿ ಶಾಂತಿಯುತವಾಗಿ ನಡೆಯುತ್ತಿರುವ ಚಳವಳಿಯನ್ನು ಸರ್ಕಾರ ಗೂಂಡಾಗಳನ್ನು ಬಿಟ್ಟು ಹತ್ತಿಕ್ಕಲು ಹೊರಟಿರುವುದು ಖಂಡನೀಯ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್, ಹೇಳಿದರು.

 news_1792776326_1_152.webp

 

    ಕೇಂದ್ರ ಸರ್ಕಾರದ ಗೂಂಡಾಗಿರಿ, ಪ್ರಜಾಸತ್ತಾತ್ಮಕ ಚಳವಳಿಗಳ ದಮನಕಾರಿ ನೀತಿ ಹಾಗೂ ಲೋಪದೋಷಗಳಿಂದ ಕೂಡಿದ ಎಸ್.ಐ.ಆರ್ (SIR) ಯೋಜನೆಯನ್ನು ತಕ್ಷಣವೇ ಕೈಬಿಡಬೇಕೆಂದು ಆಗ್ರಹಿಸಿ, 'ಹರ್ ಹಾತ್ ಮೇ ತಿರಂಗಾ, ಹರ್ ಗಲಿ ಗಲಿ ಮೇ ಜಂತರ್ ಮಂತರ್' ಅಭಿಯಾನದ ಭಾಗವಾಗಿ ನಗರದ ಶುಕ್ರವಾರ ಕನಕದಾಸ ವೃತ್ತದಿಂದ ಬೃಹತ್ ‘ಪ್ರತಿರೋಧ ತಿರಂಗಾ ಯಾತ್ರೆ’ ಹಾಗೂ ಪ್ರತಿಭಟನಾ ಸಮಾವೇಶದಲ್ಲಿ ಬಸವರಾಜ್ ಶೀಲವಂತರ್ ಮುಂದುವರೆದು ಮಾತನಾಡಿ

 ಎಸ್.ಐ.ಆರ್ ದುರುಪಯೋಗಕ್ಕೆ ಮುಖ್ಯ ಕಾರಣರಾಗಿರುವ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು," ಎಂದು ಉಗ್ರವಾಗಿ ಆಗ್ರಹಿಸಿದರು.

 

   ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್ ಮಾತನಾಡಿ, "ಹಿಂದೆ ‘ಹರ್ ಘರ್ ತಿರಂಗಾ’ ಎಂದು ಕರೆ ನೀಡಿದ್ದ ಸರ್ಕಾರ, ಇಂದು ದೆಹಲಿಯಲ್ಲಿ ಸಿಜೆಪಿ ನಾಯಕರು ನಡೆಸುತ್ತಿದ್ದ ತಿರಂಗಾ ಯಾತ್ರೆಯ ಮೇಲೆಯೇ ಪೋಲಿಸರನ್ನು ಬಿಟ್ಟು ರಾಷ್ಟ್ರಧ್ವಜಕ್ಕೆ ಅಪಮಾನ ಎಸಗಿದೆ. ಇಂತಹ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ಮುಂಬರುವ ದಿನಗಳಲ್ಲಿ ದೇಶದ ಪ್ರತಿಯೊಂದು ಹಳ್ಳಿ-ಹಳ್ಳಿಗಳಲ್ಲೂ ತಿರಂಗಾ ಯಾತ್ರೆಯನ್ನು ತೀವ್ರಗೊಳಿಸಿ ಹೋರಾಟ ರೂಪಿಸಲಾಗುವುದು," ಎಂದು ಎಚ್ಚರಿಸಿದರು.

 

   ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್ ಮಾತನಾಡಿ, "ರಾಷ್ಟ್ರೀಯ ಕರೆಯ ಮೇರೆಗೆ ಕೊಪ್ಪಳದಲ್ಲೂ ಈ ಬೃಹತ್ ಬೆಂಬಲ ಯಾತ್ರೆ ಹಮ್ಮಿಕೊಳ್ಳಲಾಗಿದೆ. ವೋಟ್ ಚೋರಿ ಮೂಲಕ ಅಧಿಕಾರಕ್ಕೆ ಬಂದಿರುವ ಕೇಂದ್ರ ಸರ್ಕಾರವನ್ನು ವಜಾಗೊಳಿಸಿ, ಮುಂದಿನ ಚುನಾವಣೆಗಳಲ್ಲಿ ಮತ್ತೆ ಬ್ಯಾಲೆಟ್ ಪೇಪರ್ ಪದ್ಧತಿಯನ್ನು ಜಾರಿಗೆ ತರಬೇಕು. 2026ರ ಜನವರಿ 12ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ಅರೆಬರೆಯಾಗಿ ಮ್ಯಾಪಿಂಗ್ ನಡೆಸಿದ್ದ ಬಿಎಲ್‌ಒ (BLO) ಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿತ್ತು. ಸಂಘಟನೆಯ ರಾಜ್ಯ ನಾಯಕರ ಸಮಯೋಚಿತ ಎಚ್ಚರಿಕೆಯಿಂದಾಗಿ ಕರ್ನಾಟಕದಲ್ಲಿ ಲೋಪಗಳು ಕಡಿಮೆಯಾಗಿವೆ," ಇದೇ ತಿಂಗಳು ಇಪ್ಪತ್ತೇಳು ರಂದು ಮತದಾರರ ಪಟ್ಟಿ ಪ್ರಕಟಿಸಲಿದ್ದು ಎಲ್ಲರೂ ತಮ್ಮ ಹೆಸರುಗಳನ್ನು ಪರಿಶೀಲಿಸಿ ಕೊಳ್ಳಬೇಕು ಎಂದು ತಿಳಿಸಿದರು.

 

  ಮುಖಂಡ ಮುಸ್ತಫಾ ಕುದುರಿಮೂತಿ ಮಾತನಾಡಿ, "ಪ್ರತಿಯೊಬ್ಬ ನಾಗರಿಕನೂ ತನ್ನ ಹಕ್ಕು ಹಾಗೂ ಮತವನ್ನು ಉಳಿಸಿಕೊಳ್ಳಲು ಈ ಹೋರಾಟಕ್ಕೆ ಬೆಂಬಲ ನೀಡಬೇಕು," ಎಂದು ಕರೆ ನೀಡಿದರು.

 

  ಎಸ್.ಯು.ಸಿ.ಐ. (SUCI) ಜಿಲ್ಲಾ ಮುಖಂಡ ಶರಣು ಗಡ್ಡಿ ಅವರು ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದರು.

 

ಪ್ರತಿಭಟನೆಯಲ್ಲಿ ಪ್ರತಿರೋಧ ತಿರಂಗಾ ಯಾತ್ರೆಯಲ್ಲಿ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ಗವಿಸಿದ್ದಪ್ಪ ಹಲಗಿ, ದಲಿತ ಯುವ ವೇದಿಕೆಯ ಸಂಚಾಲಕ ಸುಂಕಪ್ಪ ಮೀಸಿ, ಕರ್ನಾಟಕ ರಾಜ್ಯ ಚನ್ನದಾಸರ್ ಕ್ಷೇಮಾಭಿವೃದ್ಧಿ ಸಂಘದ ಡಿ. ಮುದ್ದುರಾಜ್, ಸಿಐಟಿಯು (CITU) ಜಿಲ್ಲಾ ಮುಖಂಡ ಖಾಸೀಮ್ ಸರ್ದಾರ್, ಸಿದ್ದಲಿಂಗ ರೆಡ್ಡಿ, ರಂಗಪ್ಪ ಘೋರ್ಪಡೆ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಶಾರದಾ ಗಡ್ಡಿ, ಮತ ಕಾವಲು ಸಮಿತಿಯ ಸುಭಾನ್ ಸಾಬ್, ಕೆ.ವಿ.ಎಸ್. (KVS) ಮುಖಂಡರಾದ ಉಮೇಶ್ ಬಡಿಗೇರ, ಫೈಯಾಜ್ ಅಹ್ಮದ್, ಕರ್ನಾಟಕ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಶಾಹಿದ್ ಹುಸೇನ್ ತಹಶೀಲ್ದಾರ್, ರಾಜಾಬಕ್ಷಿ ಹೆಚ್.ವಿ.ಕರಾಟೆ, ಮಖಬೂಲ್ ರಾಯಚೂರು, ಎಸ್ಡಿಪಿಐ ಮುಖಂಡ ನಿಜಾಮುದ್ದೀನ್ ಎಸ್. ಮಾಳೆಕೊಪ್ಪ.ಜಾಫರ್ ಕುರಿ ಸೇರಿದಂತೆ ವಿವಿಧ ಜನಪರ ಹಾಗೂ ಪ್ರಗತಿಪರ.ದಲಿತಪರ ಸಂಘಟನೆಗಳ ಅನೇಕ ಮುಖಂಡರು ಭಾಗವಹಿಸಿದ್ದರು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೊಪ್ಪಳ ; ಎಸ್.ಐ.ಆರ್ ರದ್ದುಪಡಿಸಲು ಆಗ್ರಹಿಸಿ ಬೃಹತ್ ಪ್ರತಿರೋಧ ‘ತಿರಂಗಾ ಯಾತ್ರೆ’ಡಂಬಳ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ನವರ ಜಯಂತಿ ಆಚರಣೆನಾಳೆ ನಡೆಯುವ ಪ್ರತಿಭಟನೆಗೆ ಪಕ್ಷಾತೀತವಾಗಿ ಬಾಗವಹಿಸಿ : ಮಲ್ಲು ಚಾನಕೋಟಿರಕ್ತದಾನ ಮತ್ತು ರಕ್ತದ ಗುಂಪು ತಪಾಸಣೆಯ ಮಹತ್ವಪದವೀಧರರು ಪ್ರಜಾಪ್ರಭುತ್ವದ ಬಲವರ್ಧನೆಗೆ ಕೈಜೋಡಿಸಬೇಕು: ಆನಂದ್ ಎನ್.ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ರಾಣಿ ಬೆಳವಡಿ ಮಲ್ಲಮ್ಮ ಸ್ಮರಣಾರ್ಥ ಭಾರತಿದರ್ಶ ಫೌಂಡೇಶನ್ನಿಂದ 100 ಉಚಿತ ಕುಡಿಯುವ ನೀರಿನ ಸೇವೆಪ್ರಣಿತಾ ಪಿ. ರಂಗಪ್ರವೇಶ — ನೃತ್ಯ ವೈಭವದ ಅನನ್ಯ ಅನಾವರಣಮಾನಸಿಕ ಆರೋಗ್ಯ ಸೇವೆಯನ್ನು ಪಡೆಯಲು ಯಾರು ಹಿಂದೇಟು ಹಾಕಬಾರದು. :ಡಾ ನಂದಿತಾ ಎಮ್ ಎನ್. ನಾಡಕಾರ್ಯಾಲಯಕ್ಕೆ ನಿರ್ಮಿಸಿದ ಕಾಂಪೌಂಡ್ನ ಉದ್ಘಾಟನೆಚಿತ್ರ ಸಾಹಿತಿ ವಿ.ನಾಗೇಂದ್ರಪ್ರಸಾದ ನಿರ್ದೇಶನದ ‘ಶುಭಲಾಭ’ ಚಲನಚಿತ್ರಕ್ಕೆ ಮುಹೂರ್ತ