22 Nov 2026, 06:18:58 PM|
Gold₹12413/gGold24K ₹12,413/g - 22K ₹11,369/gTap for full details
Press ID & Credential Portal
Apply / Verify  ➔
LIVE TV StateNationalPoliticsCrimeEntertainmentSportsEducationFINANCE & TAXATION
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Districts

ಜ. 31 ರಂದು ಶೃಂಗೇರಿ ಶ್ರೀಗಳಿಂದ ಆಶೀರ್ಚನ

ವಿವೇಕದೀಪ್ತಿ- ದಕ್ಷಿಣಾಸ್ಯದರ್ಶಿನೀ ಸಮಾವೇಶಕ್ಕೆ ಜ. 29 ರಂದು ಇಸ್ರೋ  ಮಾಜಿ ಮುಖ್ಯಸ್ಥ ಡಾ|| ಎಸ್. ಸೋಮನಾಥ್ ಚಾಲನೆ

ಬೆಂಗಳೂರು :  ಆಧುನಿಕ ವಿಜ್ಞಾನವನ್ನು ಆಧರಿಸಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ತಂತ್ರಜ್ಞಾನ ಮುಂತಾದ ಪ್ರಯೋಗಗಳ ಮೂಲಕ ದಕ್ಷಿಣಾಮೂರ್ತಿ ಅಷ್ಟಕದಲ್ಲಿ ತಿಳಿಸಿದ ವಿಚಾರಗಳನ್ನು ಯುವ ಸಮೂಹಕ್ಕೆ ಮನಮುಟ್ಟುವಂತೆ ಪ್ರಸ್ತುತಪಡಿಸುವ ನಿಟ್ಟಿನಲ್ಲಿ ವೇದಾಂತ ಭಾರತಿ ಹಾಗೂ ಪರಮ್ ಫೌಂಡೇಶನ್ ನಿಂದ ಬೆಂಗಳೂರು ಅರಮನೆ ಮೈದಾನದಲ್ಲಿ ಜ.29 ರಿಂದ ಫೆ. 1ರ ವರೆಗೆ ರಾಷ್ಟ್ರಮಟ್ಟದ ಬೃಹತ್ “ವಿವೇಕ ದೀಪ್ತಿ” ಸಮಾವೇಶ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ವೇದಾಂತ ಭಾರತಿ ಟ್ರಸ್ಟಿ ಹಾಗೂ ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಎಸ್.ಎಸ್. ನಾಗಾನಂದ, ಈ ದಕ್ಷಿಣಾಮೂರ್ತಿ ಅಷ್ಟಕದ ತತ್ತ್ವವನ್ನು ವಿದ್ಯಾರ್ಥಿಗಳಿಗೆ ಹಾಗೂ ಇಂದಿನ ಯುವಸಮುದಾಯಕ್ಕೆ ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ಅರಮನೆ ಮೈದಾನ ತ್ರಿಪುರವಾಸಿನಿಯಲ್ಲಿ ‘ದಕ್ಷಿಣಾಸ್ಯದರ್ಶಿನೀ’ ಎನ್ನುವ ಪ್ರದರ್ಶನ ಏರ್ಪಡಿಸಲಾಗಿದೆ.  ಭಾರತೀಯ ಜ್ಞಾನ ಪರಂಪರೆಯನ್ನು ಆಧುನಿಕ ವಿಜ್ಞಾನದೊಂದಿಗೆ ಬೆಸೆಯುವ ವಿಶಿಷ್ಟ ಪ್ರಯತ್ನ ಇದಾಗಿದೆ. ಈ ಎಲ್ಲ ಪ್ರಯೋಗಗಳನ್ನು ಮುಖ್ಯವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಪ್ರಸ್ತುತಪಡಿಸಲಿದ್ದಾರೆ ಎಂದರು.



ಇದಕ್ಕೆ ಪೂರಕವಾಗಿ ವೇದಾಂತವನ್ನು ಅಭ್ಯಾಸ ಮಾಡಿದ ಸಂಸ್ಕೃತ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು, ವಿದ್ವಾಂಸರು ಆಯಾ ಪ್ರಯೋಗಕ್ಕೆ ಸಂಬಂಧಿಸಿದಂತೆ ಆಧ್ಯಾತ್ಮಿಕ ಅಂಶಗಳ ವಿವರಣೆ ನೀಡಲಿದ್ದಾರೆ. ಬೇರೆ ಬೇರೆ ಕಾಲೇಜು ಹಾಗೂ ಸಂಸ್ಥೆಗಳಿಂದ 50ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳು ಅನಾವರಣಗೊಳ್ಳಲಿವೆ. ಪ್ರತಿದಿನ ಬೆಳಿಗ್ಗೆ 10ಗಂಟೆಯಿಂದ ಸಂಜೆ 7.30ರವರೆಗೆ ಶಾಲಾಕಾಲೇಜಿನ ವಿದ್ಯಾರ್ಥಿಗಳು, ಯುವ ಸಮೂಹ  ಹಾಗೂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಜ. 31 ರಂದು  ಅರಮನೆ ಮೈದಾನ ಕೃಷ್ಣವಿಹಾರದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ಶೃಂಗೇರಿ ಶಾರದಾಪೀಠದ ಜಗದ್ಗುರು ವಿಧುಶೇಖರಭಾರತೀ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ ಎಂದರು.

ಜ.29 ರಂದು ಇಸ್ರೋ ಮಾಜಿ ಅಧ್ಯಕ್ಷ ಹಾಗೂ ಚಾಣಕ್ಯ ವಿ.ವಿ.ಯ ಕುಲಪತಿ ಡಾ|| ಎಸ್. ಸೋಮನಾಥ್ ದಕ್ಷಿಣಾಸ್ಯದರ್ಶಿನಿಯ ಉದ್ಘಾಟನೆ ನೆರವೇರಿಸಲಿದ್ದಾರೆ. ಪ್ರಸಿದ್ಧ ಇತಿಹಾಸ ತಜ್ಞ ಡಾ|| ವಿಕ್ರಮ್ ಸಂಪತ್ ಭಾಗವಹಿಸಲಿದ್ದಾರೆ. ಫೆ.1 ರ ಸಮಾರೋಪ ಸಮಾರಂಭದಲ್ಲಿ ಡಾ|| ಎಸ್. ಸೋಮನಾಥ್ ಹಾಗೂ ಡಿ.ಆರ್.ಡಿ.ಓ. ಮಾಜಿ ನಿರ್ದೇಶಕರಾದ ಪ್ರದ್ಮಶ್ರೀ ಪುರಸ್ಕೃತ ಪ್ರಹ್ಲಾದ್ ರಾವ್ ಭಾಗವಹಿಸಲಿದ್ದಾರೆ. ಅತ್ಯುತ್ತಮ ಪ್ರದರ್ಶನಕ್ಕೆ ಬಹುಮಾನ ನೀಡಿ ಗೌರವಿಸಲಾಗುವುದು ಎಂದರು.

ಪ್ರದರ್ಶನ ದರ್ಶಿನಿ ಮುಖ್ಯಸ್ಥ ಹಾಗೂ ಕೃತಕ ಬುದ್ದಿಮತ್ತೆ ತಂತ್ರಜ್ಞ ಡಾ. ಅಶೂತೋಶ್ ಸಿಂಹ ಮಾತನಾಡಿ, ಈ ನವೀನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವೇದಾಂತದ 'ಮಾಯೆ', 'ಚೈತನ್ಯ'ದಂತಹ ದಾರ್ಶನಿಕ ವಿಚಾರಗಳನ್ನು ದೃಷ್ಟಿ, ಭ್ರಮೆ ಅಥವಾ ನರವಿಜ್ಞಾನದಂತಹ ಆಧುನಿಕ ತಂತ್ರಜ್ಞಾನದೊಂದಿಗೆ ಜೋಡಿಸಿ, ಸಂವಾದಾತ್ಮಕ ಪ್ರದರ್ಶಿಕೆಗಳನ್ನು ಸಿದ್ಧಪಡಿಸಲಿದ್ದಾರೆ ಎಂದರು.

ಟ್ರಸ್ಟಿ ಗೋಪಾಲ ಕೃಷ್ಣ ಮಾತನಾಡಿ. ದಕ್ಷಿಣಾಮೂರ್ತಿ ಅಷ್ಟಕದಲ್ಲಿ ತಿಳಿಸಿರುವ ಸಾರ್ವಕಾಲಿಕ ವಿಚಾರಗಳನ್ನು ಆಧರಿಸಿ ಯುವಜನಾಂಗದ ಅಂತಃಕರಣದಲ್ಲಿ ಸತ್ಯಾಸತ್ಯತೆಯ ವಿವೇಚನೆಯನ್ನು ಮೂಡಿಸಿ, ಜೀವನವನ್ನು ಸುಗಮವಾಗಿ ಸಾಗಿಸುವ ಮಾರ್ಗವನ್ನು ತೋರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಅತ್ಯಂತ ಮಹತ್ವದ್ದಾಗಿದೆ ಎಂದರು.

ಟ್ರಸ್ಟಿ ಎಚ್.ಎಲ್.ಎನ್ ಸಿಂಹ ಮಾತನಾಡಿ, ದಕ್ಷಿಣಾಮೂರ್ತಿ ಅಷ್ಟಕದ ಪಠಣ ಹಾಗೂ ಚಿಂತನೆಯು ಯುವಮನಸ್ಸುಗಳಲ್ಲಿ ಮೂಡುವ ಗೊಂದಲಗಳನ್ನು ನಿವಾರಿಸಿ, ವಿವೇಕವನ್ನು ಜಾಗೃತಗೊಳಿಸಿ, ವ್ಯಕ್ತಿತ್ವವನ್ನು ಉನ್ನತಗೊಳಿಸಿ, ಸದುದ್ದೇಶ ಸಮರಸಗಳಿಂದ ಕೂಡುವಂತೆ ಮಾಡುತ್ತದೆ ಎಂದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೀಪಗಳ ಹಬ್ಬದ ಮಹತ್ವ, ಆಚರಣೆಯ ವಿಧಿ ವಿಧಾನ ಇಲ್ಲಿದೆಕೋಡಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಇಟಲಿಯ ಹೈಡ್ರೋನಿಕ್' ಸಂಸ್ಥೆ ಹಾಗೂ 'ಲಿಫ್ಟ್ ಎಕ್ಸ್ಪೋಗೆ' ಡಾ. ಬಿ.ಎಂ. ಉಮೇಶ್ ಕುಮಾರ್ ಭೇಟಿಮಕ್ಕಳನ್ನು ಮೊಬೈಲ್ನಿಂದ ದೂರವಿಟ್ಟು ಕ್ರೀಡೆಗಳಲ್ಲಿ ತೊಡಗಿಸಿ: ಬಸವರಾಜ್ ಶೀಲವಂತರ್ ಕರೆನಕಲಿ ಮತದಾರರಿಗೆ ರಕ್ಷಣೆ ನೀಡುವುದೇ ಎಸ್ಐಆರ್ ವಿರೋಧಿಗಳ ಅಜೆಂಡಾ ಅಲ್ಲವೇ?” – ಪ್ರಭಾಕರ್ ರಾಗಿ ಅಂಗಡಿಗೆ ಬಂದವರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆಹಳ್ಳಿ-ಹಳ್ಳಿಗೆ ತೆರಳಿ ಕಾಂಗ್ರೆಸ್ ಭದ್ರಕೋಟೆ ನಿರ್ಮಿಸುತ್ತಿರುವ ಡಾ. ಯೋಗೇಶ್ ಬಾಬುವಾಲ್ಮೀಕಿನಾಯಕ ಸಮಾಜದವರು ಖಡ್ಗದ ಬದಲಾಗಿ ಶಿಕ್ಷಣದ ಅಸ್ತ್ರಹಿಡಿಯಿರಿಚಲನಚಿತ್ರ ನಟ, ನಿರ್ದೇಶಕ ಚಂದ್ರಹಾಸ ಆಳ್ವರಿಗೆ ಸನ್ಮಾನಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾದಲ್ಲಿ ಫ್ರೆಷರ್ಸ್ ಡೇ ಹಾಗೂ ಕನ್ನಡ ರಾಜ್ಯೋತ್ಸವ