22 Nov 2026, 06:12:28 PM|
Gold₹12413/gGold24K ₹12,413/g - 22K ₹11,369/gTap for full details
Press ID & Credential Portal
Apply / Verify  ➔
LIVE TV StateNationalPoliticsCrimeEntertainmentSportsEducationFINANCE & TAXATION
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Districts

ಭೌತಿಕ ಆಸ್ತಿಗಿಂತ ಬೌದ್ಧಿಕ ಆಸ್ತಿಗಳ ಕೊಡುಗೆ: ಪ್ರೊ.ದಳವಾಯಿ

ವಿಎಸ್‌ಕೆ ವಿವಿ: ಡಾ.ಬಿ.ಆರ್ ಅಂಬೇಡ್ಕರ್ 135ನೇ ಜಯಂತಿ
ಬಳ್ಳಾರಿ : ಬುದ್ಧನ ಪಂಚಶೀಲತತ್ವಗಳು, ವಿಸರಣಗಳನ್ನು ಸದಾಕಾಲ ಆರಾಧಿಸಿದ ಬಾಬಾ ಸಾಹೇಬ ಡಾ.ಬಿ.ಆರ್ ಅಂಬೇಡ್ಕರ್‌ರವರು ದೇಶದ ದಮನಿತರ ಏಳ್ಗೆಗೆ ಹಗಲು ರಾತ್ರಿ ತಮ್ಮ ಜೀವನ ಮುಡಿಪಾಗಿಟ್ಟಿದ್ದರು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ವೆಂಕಟಗಿರಿ ದಳವಾಯಿ ಅವರು ಹೇಳಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಬಾಬಾ ಸಾಹೇಬ್ ಡಾ.

ಬಿ.ಆರ್ ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಸಂವಿಧಾನ ಶಿಲ್ಪಿಯ ಆಚಾರ-ವಿಚಾರಗಳನ್ನು ದೇಶದ ಬುದ್ಧಿಜೀವಿಗಳು ಸರಿಯಾಗಿ ತಿಳಿದುಕೊಳ್ಳದೆ ಕೇವಲ ಸಂವಿಧಾನಕ್ಕೆ ಮತ್ತು ಒಂದು ವರ್ಗಕ್ಕೆ ಅವರನ್ನು ಸೀಮಿತಗೊಳಿಸಿ ಒಬ್ಬ ಗುಣವಾಚಕರನ್ನಾಗಿ ಅಂಬೇಡ್ಕರ್‌ರನ್ನು ಬಿಂಬಿಸಲಾಗಿದೆ. ಅಪಾರ ದೂರದೃಷ್ಟಿ ಹೊಂದಿದ್ದ ಇವರು ಹಣಕಾಸು, ಶಿಕ್ಷಣ, ಕೃಷಿ, ನೀರಾವರಿ, ವಿದೇಶಾಂಗ ನೀತಿ ಆಲೋಚನೆಗಳನ್ನು ಬಿತ್ತಿದವರು ಎಂದರು.
ಭೌತಿಕ ಆಸ್ತಿಗಿಂತ ಬೌದ್ಧಿಕ ಆಸ್ತಿಗಳ ಕೊಡುಗೆಯನ್ನು ಅಂಬೇಡ್ಕರ್ ಅವರು ದೇಶಕ್ಕೆ ಕೊಡುಗೆ ನೀಡಿದವರು. ಅಂತರಾಷ್ಟ್ರೀಯ ದುಂಡು ಮೇಜಿನ ಸಮ್ಮೇಳನದಲ್ಲಿ ದೇಶದ ಶೋಷಿತ ವರ್ಗದ ಜನತೆಗೆ ಆಹಾರ, ವಸತಿ ಜೊತೆಗೆ ಶಿಕ್ಷಣದ ಅವಶ್ಯಕತೆ ಕುರಿತು ಪ್ರಸ್ತಾಪಿಸಿದ್ದರು. ಜಾತಿ ವ್ಯವಸ್ಥೆö, ವರ್ಣಬೇಧ ನೀತಿ ವಿರುದ್ದ ಹೋರಾಡಿ ಸಾಮಾಜಿಕ ನ್ಯಾಯ, ಭ್ರಾತೃತ್ವ ಎಲ್ಲರಿಗೂ ಸಮಾನವಾಗಿರಬೇಕು ಎಂದು ಪ್ರತಿಪಾದಿಸಿದರು.
ಬಾಲ್ಯದಿಂದಲೇ ಶಿಕ್ಷಣ ಪಡೆಯಲು ಅಂಬೇಡ್ಕರ್ ಅವರು ಪಟ್ಟಿದ್ದ ಕಷ್ಟವನ್ನು ಇತರರು ಅನುಭವಿಸದಿರಲಿ ಹಾಗೂ ಉನ್ನತ ಶಿಕ್ಷಣದ ಕನಸು ದೇಶದ ಎಲ್ಲ ಸಮುದಾಯದವರಿಗೆ ಒದಗುವಂತಾಗಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ವಿಶ್ವವಿದ್ಯಾಲಯಗಳು ಬಾಬಾಸಾಹೇಬರ ಸಮಾಜ ಸುಧಾರಣೆಯ ತತ್ವ, ಅವರಲ್ಲಿದ್ದ ಪಾಂಡಿತ್ಯದ ನೋಟಗಳನ್ನು ವಿವಿಧ ಆಯಾಮಗಳಲ್ಲಿ ಪರಾಮರ್ಶಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಇವುಗಳ ಕುರಿತು ಚರ್ಚೆ ನಡೆಸಬೇಕು ಎಂದು ಹೇಳಿದರು.
ಅಂಬೇಡ್ಕರ್ ಅವರ ತತ್ವಗಳನ್ನು ದೇಶದ ಹಲವು ಮೇಲ್ಜಾತಿಯ ವಿಚಾರವಂತರು ಅವರನ್ನು ಬೆಂಬಲಿಸಿದ್ದರು.  ಸ್ವಾತಂತ್ರ್ಯ ಪೂರ್ವದಿಂದಲೂ, ಸ್ವಾತಂತ್ರ್ಯ ನಂತರವೂ ಬಾಬಾ ಸಾಹೇಬರ ಆಧುನಿಕತೆಯ ಪರಿಭಾಷೆ ಎಂದಿಗೂ ಬದಲಾಗಲಿಲ್ಲ. ದೇಶ-ವಿದೇಶಗಳಲ್ಲಿ ಅನೇಕ ಉನ್ನತ ಸ್ಥಾನಮಾನಗಳನ್ನು ಅಂಬೇಡ್ಕರ್ ಅವರು ಪಡೆದರೂ ಕೊನೆಯಲ್ಲಿ ಅವರು 22 ಲಕ್ಷ ರೂ. ಸಾಲವನ್ನು ಹೊತ್ತಿದ್ದರು. ಇದರಲ್ಲಿ 11 ಲಕ್ಷ ಪುಸ್ತಕಗಳ ವೆಚ್ಚವು ಇತ್ತೆಂದು ತಿಳಿಸಿದರು.

24 ಸಾವಿರ ಪುಟಗಳ ಸಂವಿಧಾನ ರಚಿಸಿ ಲಕ್ಷಾಂತರ ಪುಸ್ತಕಗಳನ್ನು ಓದಿದ್ದ ಅಂಬೇಡ್ಕರ್ ಅವರ ಕುರಿತು ಇಂದಿನ ಯುವಜನತೆ ಓದಲೇಬೇಕು ಎಂದರು.


ಕುಲಸಚಿವ ಪ್ರೊ.ಎನ್.ಎಂ ಸಾಲಿ ಅವರು ಮಾತನಾಡಿ, ಅಂಬೇಡ್ಕರ್ ಅವರ ಜಯಂತಿಯನ್ನು ಶಿಕ್ಷಕವರ್ಗದವರು ಆತ್ಮಾವಲೋಕನ ಮಾಡಿಕೊಳ್ಳುವ ದಿನವಾಗಿ ಆಚರಿಸಬೇಕು. ಅಧಿಕಾರ, ಸ್ಥಾನಮಾನ ದೊರೆತಾಗ ಸಮಾಜದ ಸಮುದಾಯದ ಅಭಿವೃದ್ಧಿಗಾಗಿ ಬಳಕೆ ಮಾಡಿಕೊಳ್ಳಬೇಕು. ಅಂಬೇಡ್ಕರ್ ಅವರಂತೆ ಸ್ವಾಭಿಮಾನ ಹಾಗೂ ವ್ಯಕ್ತಿ ಗೌರವವನ್ನು ಪ್ರತಿಯೊಬ್ಬರು ಹೊಂದಬೇಕು ಎಂದು ಕರೆ ನೀಡಿದರು.

ವಿವಿಯ ವಿತ್ತಾಧಿಕಾರಿ ಸ್ಫೂರ್ತಿ ಕೆ.ಜಿ ಅವರು ಮಾತನಾಡಿ, ದೇಶದ ಆರ್ಥಿಕತೆ, ಆರ್ಥಿಕ ನೀತಿಗಳ ರಚನೆಯಲ್ಲಿ ಅಂಬೇಡ್ಕರ್ ಅವರು ಮುಖ್ಯಪಾತ್ರ ವಹಿಸಿದ್ದರು. ಬ್ಯಾಂಕಿಂಗ್, ಫೈನಾನ್ಸ್ ಮತ್ತು ರೂಪಾಯಿ ವ್ಯವಸ್ಥೆ, ಕಾರ್ಮಿಕ ಸೇವಾ ಅವಧಿ, ಕಾರ್ಮಿಕ ನಿಧಿ, ಸೇವಾ ಅವಧಿಯನ್ನು ಶಾಶ್ವತಗೊಳಿಸುವಲ್ಲಿ ಅಂಬೇಡ್ಕರ್ ಅವರ ಪಾತ್ರ ನಿರ್ಣಾಯಕವಾಗಿತ್ತು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಅವರು, ಸಂವಿಧಾನದಲ್ಲಿರುವ ಪ್ರತಿಯೊಂದು ಶಬ್ದದ ಹಿಂದೆ ಬಾಬಾ ಸಾಹೇಬರ ಅಪಾರ ಸಂಶೋಧನೆ ಇದೆ. ಸಂವಿಧಾನದ ಪ್ರತಿಯೊಂದು ಪುಟಗಳ ಕುರಿತು ಅಧ್ಯಯನ ನಡೆಸಿದರೆ ವರ್ಷಪೂರ್ತಿ ವಿಚಾರ ಸಂಕಿರಣಗಳನ್ನು ನಡೆಸಬಹುದು. ಅಂಬೇಡ್ಕರ್ ಅವರ ಕುರಿತು ಉತ್ತಮ ಸಂಶೋಧನಾ ಪ್ರಬಂಧಕ್ಕೆ ವಿವಿ ವತಿಯಿಂದ 10 ಸಾವಿರ ರೂ ನಗದು ಬಹುಮಾನ ನೀಡುವುದಾಗಿ ಘೋಷಿಸಿದರು.
ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕರು ಮತ್ತು ಕಾರ್ಯಕ್ರಮದ ಸಂಚಾಲಕರಾದ ಪ್ರೊ.ಗೌರಿ ಮಾಣಿಕ ಮಾನಸ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.
ಕಾರ್ಯಕ್ರಮ ಆರಂಭಕ್ಕೂ ಮೊದಲು ವಿವಿಯ ಆವರಣದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿ ಮೆರವಣಿಗೆ ನಡೆಸಲಾಯಿತು.


ಡಾ.ಚಲವಾದಿ ಸಿ.ಐ ನಿರೂಪಿಸಿದರು. ಡಾ.ಕವಿತಾ ಸಾಗರ್ ವಂದಿಸಿದರು. ಡಾ.ಅಣ್ಣಾಜಿ ಕೃಷ್ಣರೆಡ್ಡಿ ಮತ್ತು ತಂಡದವರಿಂದ ಕ್ರಾಂತಿಗೀತೆಗಳನ್ನು ಹಾಡಿದರು.
ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೀಪಗಳ ಹಬ್ಬದ ಮಹತ್ವ, ಆಚರಣೆಯ ವಿಧಿ ವಿಧಾನ ಇಲ್ಲಿದೆಕೋಡಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಇಟಲಿಯ ಹೈಡ್ರೋನಿಕ್' ಸಂಸ್ಥೆ ಹಾಗೂ 'ಲಿಫ್ಟ್ ಎಕ್ಸ್ಪೋಗೆ' ಡಾ. ಬಿ.ಎಂ. ಉಮೇಶ್ ಕುಮಾರ್ ಭೇಟಿಮಕ್ಕಳನ್ನು ಮೊಬೈಲ್ನಿಂದ ದೂರವಿಟ್ಟು ಕ್ರೀಡೆಗಳಲ್ಲಿ ತೊಡಗಿಸಿ: ಬಸವರಾಜ್ ಶೀಲವಂತರ್ ಕರೆನಕಲಿ ಮತದಾರರಿಗೆ ರಕ್ಷಣೆ ನೀಡುವುದೇ ಎಸ್ಐಆರ್ ವಿರೋಧಿಗಳ ಅಜೆಂಡಾ ಅಲ್ಲವೇ?” – ಪ್ರಭಾಕರ್ ರಾಗಿ ಅಂಗಡಿಗೆ ಬಂದವರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆಹಳ್ಳಿ-ಹಳ್ಳಿಗೆ ತೆರಳಿ ಕಾಂಗ್ರೆಸ್ ಭದ್ರಕೋಟೆ ನಿರ್ಮಿಸುತ್ತಿರುವ ಡಾ. ಯೋಗೇಶ್ ಬಾಬುವಾಲ್ಮೀಕಿನಾಯಕ ಸಮಾಜದವರು ಖಡ್ಗದ ಬದಲಾಗಿ ಶಿಕ್ಷಣದ ಅಸ್ತ್ರಹಿಡಿಯಿರಿಚಲನಚಿತ್ರ ನಟ, ನಿರ್ದೇಶಕ ಚಂದ್ರಹಾಸ ಆಳ್ವರಿಗೆ ಸನ್ಮಾನಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾದಲ್ಲಿ ಫ್ರೆಷರ್ಸ್ ಡೇ ಹಾಗೂ ಕನ್ನಡ ರಾಜ್ಯೋತ್ಸವ