LIVE TV StateNationalPoliticsCrimeEntertainmentSportsEducationFINANCE & TAXATION
Entertainment News

ಭಕ್ತಿಗೀತೆಯ ಆಲ್ಬಮ್ ಸಾಂಗ್ ಶೀಘ್ರ ಬಿಡುಗಡೆ

ಬೆಂಗಳೂರು : ಸಾಲು ಸಾಲು ಹಬ್ಬದ ಸಂಭ್ರಮದ ಪ್ರಯುಕ್ತ  ಕೀರ್ತನ ಮೂವಿ ಮೇಕರ್ಸ್ ವತಿಯಿಂದ ನಾಡಿನ ಸಮಸ್ತ ಜನತೆಗೆ ಮೂರು ಮಹಾ ತಾಯಂದಿರ ಭಕ್ತಿಭಾವ ತುಂಬಿದ ವಿಶೇಷ ವಿಡಿಯೋ ಆಲ್ಬಮ್‌ಸಾಂಗ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಶ್ರೀದೇವಿ ಎಲ್ಲಮ್ಮ, ಶ್ರೀದೇವಿ ಲಕ್ಷ್ಮಿ ಹಾಗೂ ಶ್ರೀದೇವಿ ದುರ್ಗೆ — ಈ ಮೂರು ಮಹಾ ತಾಯಂದಿರ ಮಹಿಮೆ, ಶಕ್ತಿ ಹಾಗೂ ಭಕ್ತಿಭಾವವನ್ನು ಸಾರುವ ವಿಶೇಷ ಹಾಡುಗಳನ್ನು ಬೆಂಗಳೂರಿನ ಸುತ್ತಮುತ್ತಲಿನ ವಿವಿಧ ಪ್ರದೇಶಗಳಲ್ಲಿ ಸತತ ಐದು ದಿನಗಳ ಚಿತ್ರೀಕರಣ ನಡೆಸಲಾಗಿದ್ದು ಮೂರು ದೇವತೆಗಳ ಪಾತ್ರಗಳಲ್ಲಿ ಕಿರುತೆರೆ ಮತ್ತು ಚಲನಚಿತ್ರ ಕಲಾವಿದೆ ಸುನಂದಾ ಕಲ್ಬುರ್ಗಿ, ನಮೃತ.ಎನ್. ಕುಲಕರ್ಣಿ ಹಾಗೂ ಶ್ರೀಮತಿ ಗೀತಾ ವೆಂಕಟೇಶ್ ಅವರುಗಳು ಅಭಿನಯಿಸಿದ್ದಾರೆ.

ಛಾಯಾಗ್ರಹಣ ಬೆಟ್ಟೇಗೌಡ ಕಿಲಾರ, ಸಾಹಿತ್ಯ ಲೋಕೇಶ್ ವಿದ್ಯಾಧರ, ನಾರಾಯಣ್, ಸಂಗೀತ ಎಸ್.ಕೆ. ಸಾಯಿ ಶ್ಯಾಮ್ (ರಿದಂ ಕುಟ್ಟಿ), ಅನಿತಾ ನಾರಾಯಣ ಕುಲಕರ್ಣಿ ಹಿನ್ನೆಲೆ ಗಾಯನ, ನೃತ್ಯ ಸಂಯೋಜನೆ ಶ್ರೀಮತಿ ಶಾಂತಿ ಹಾಗೂ ದೀಪಾ, ವರ್ಣಾಲಂಕಾರ,  ಕೇಶಾಲಂಕಾರ :ಪಲ್ಲವಿ ಸಹಾಯ ಭಾಗ್ಯಮ್ಮ, ವಸ್ತ್ರಾಲಂಕಾರ ರೋಹಿತ್, ಸಂಕಲನ ಯುವರಾಜ್, ಡಿ.ಐ ಜೀವನ್, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಿಗಿ, ನಿರ್ದೇಶನ ಹಾಗೂ ನಿರ್ಮಾಣದ ಹೊಣೆ ಚಲನಚಿತ್ರ ನಿರ್ದೇಶಕ,ನಿರ್ಮಾಪಕ ಲೋಕೇಶ್ ವಿದ್ಯಾಧರ  ಹೊತ್ತಿದ್ದಾರೆ.

ನಾಡಿನ ಸಂಸ್ಕೃತಿ ಮತ್ತು ಭಕ್ತಿಯ ಸೊಗಡನ್ನು ಜನಮನಗಳಿಗೆ ತಲುಪಿಸುವ ಉದ್ದೇಶದಿಂದ ಮೂಡಿಬರುತ್ತಿರುವ ಈ ವಿಶೇಷ ವಿಡಿಯೋ ಆಲ್ಬಮ್ ಸಾಂಗ್ ಸದ್ಯದಲ್ಲೇ ಬಿಡುಗಡೆಯಾಗಲಿದ್ದು ನಾಡಿನ ಸಮಸ್ತ ಜನರ ಆಶೀರ್ವಾದ, ಪ್ರೋತ್ಸಾಹ ಹಾಗೂ ಬೆಂಬಲವನ್ನು ಕೀರ್ತನ ಮೂವಿ ಮೇಕರ್ಸ್ ಕೋರಿದೆ.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯ ದಶಮಿಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ದಸರಾ ಹಾಗೂ ಆಯುಧ ಪೂಜೆಜಾತಿಭೇದವಿಲ್ಲದೆ ದಲಿತರ ಮನೆಯಲ್ಲಿ ಊಟ ಸವಿದ ಡಾ. ಬಿ. ಯೋಗೇಶ್ ಡಿಸ್ಕವರಿ ವಾಹಿನಿಯಲ್ಲಿ ಕೆಐಐಟಿ ಸಾಧನೆ ಬಣ್ಣನೆ ಕನ್ನಡಿಗರು ವಿಶಾಲತೆ, ಸಾಮರಸ್ಯ ಉಳ್ಳವರಾಗಿರುವುದರಿಂದಲೇ ಕನ್ನಡಕ್ಕೆ ಕಂಟಕ!ಹಾಡಿನ ಚಿತ್ರೀಕರಣದೊಂದಿಗೆ ‘ಚಂದ್ರಗಿರಿ’ ಚಿತ್ರೀಕರಣ ಮುಕ್ತಾಯಸರ್ವೋದಯ ಮಹಾವಿದ್ಯಾಲಯದ ಸೌಕರ್ಯ, ಶೈಕ್ಷಣಿಕ ಸಾಧನೆಗೆ ದಾವಣಗೆರೆ ವಿವಿ ಉಪಕುಲಪತಿ ಮೆಚ್ಚುಗೆಬಡತನ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನಾಚರಣೆ ಬೆಂಗಳೂರಿನಲ್ಲಿ ಐಸಿಎಸ್ಐ ಇನ್ವೆಸ್ಟ್ ಇಂಡಿಯಾ ಶೃಂಗಸಭೆ ಆಯೋಜನೆಎಚ್.ಡಿ. ಕುಮಾರಸ್ವಾಮಿ ವಿವಾದಾತ್ಮಕ ಮಾತುಗಳಿಗೆ ಖಂಡನೆ, ಕ್ಷಮೆಯಾಚನೆಗೆ ಆಗ್ರಹ: ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಅರ್ಜುನ್ ಗೋಪಾಲಯ್ಯ