LIVE TV StateNationalPoliticsCrimeEntertainmentSportsEducationFINANCE & TAXATION
Districts

ರೈತ ಹುತಾತ್ಮ ದಿನಾಚರಣೆ : ಬಸವಣ್ಣನವರಿಗೆ ಮಾಲಾರ್ಪಣೆ

ಬಳ್ಳಾರಿ: 1983 ರಲ್ಲಿ ಮಹದಾಯಿ ನೀರಾವರಿ ಹೋರಾಟಕ್ಕಾಗಿ ನರಗುಂದ, ನವಲಗುಂದ ಭಾಗದಲ್ಲಿ ಆರಂಭಗೊಂಡ ರೈತ ಹೋರಾಟ ಹತ್ತಿಕ್ಕಲು ಅಂದಿನ ಸರ್ಕಾರ ಗೋಲಿಬಾರ್ ನಡೆಸಿದ್ದರಿಂದ ಅನೇಕ ರೈತರು ಹುತಾತ್ಮರಾಗಿದ್ದರು. ಈ ಹಿನ್ನೆಲೆಯಲ್ಲಿ ರೈತ ಹುತಾತ್ಮ ದಿನಾಚರಣೆಯನ್ನು ಬಳ್ಳಾರಿಯಲ್ಲಿ ಆಚರಿಸಲಾಗಿದ್ದು ತುಂಗಭದ್ರಾ ರೈತ ಸಂಘಟನೆಯಿAದ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಹಾಕಿ ಹುತಾತ್ಮ ರೈತರ ತ್ಯಾಗ, ಬಲಿದಾನವನ್ನು ಸ್ಮರಿಸಲಾಯಿತು.

ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಡಾ.ಪುರುಷೋತ್ತಮಗೌಡ ಅವರು ಈವೇಳೆ ಮಾತನಾಡಿ, ಬರಗಾಲ ಪೀಡಿತ ರೈತರಲ್ಲಿ ಕರವಸೂಲಿ, ಬ್ಯಾಂಕುಗಳ ಸಾಲ ಮರುಪಾವತಿಗೆ ಒತ್ತಾಯ, ಕರೆಂಟ್ ಮೀಟರ್ ಜಾರ್ಜ್ ಗಳಿಗೆ ಒತ್ತಾಯ, ರೈತರ ದನ ಕರುಗಳು, ದವಸ ಧಾನ್ಯಗಳ ಜಫ್ತಿ... ಈ ರೀತಿಯಾಗಿ ಸರ್ಕಾರವು ರೈತರ ಮೇಲೆ ದೌರ್ಜನ್ಯ ನಡೆಸಿತ್ತು. ಇದನ್ನು ಖಂಡಿಸಿ 1983 ರಲ್ಲಿ ಸರ್ಕಾರದ ವಿರುದ್ಧ ರೈತರು ಉಗ್ರ ಹೋರಾಟವನ್ನು ಆರಂಭಿಸಿದ್ದರು. ರೈತರ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಗೋಲಿಬಾರ್ ಮಾಡಿದಾಗ, ಅನೇಕ ರೈತರು ಗೋಲಿಬಾರಿಗೆ ಬಲಿಯಾಗಿ ಪ್ರಾಣ ಕಳೆದುಕೊಂಡಿದ್ದರು. ಹುತಾತ್ಮ ರೈತರ ಆತ್ಮಕ್ಕೆ ಶಾಂತಿ ಕೋರುವುದಕ್ಕಾಗಿ ಈ ದಿನ ಬಳ್ಳಾರಿ ನಗರದ ಮೋತಿ ಸರ್ಕಲ್ ನಲ್ಲಿರುವ ಬಸವಣ್ಣಪುತ್ಥಳಿಗೆ ಹಸಿರು ಶಾಲು ಹಾಕಿ, ಮಾಲಾರ್ಪಣೆ ಮಾಡಿ ಹುತಾತ್ಮ ರೈತರ ಸ್ಮರಣೆ ಮಾಡಿ ಗೌರವ ಸಲ್ಲಿಸಲಾಯಿತು ಎಂದರು.



ಈ ಸಂದರ್ಭದಲ್ಲಿ ಧುರೀಣರಾದ ಆರ್.ಎಚ್.ಎಂ. ಚನ್ನಬಸವಸ್ವಾಮಿ, ಕೆ.ಎಂ. ಮಹೇಶ್ವರ ಸ್ವಾಮಿ, ಕೊಳೂರು ಚಂದ್ರಶೇಖರ ಗೌಡ, ಗೌರಿಶಂಕರ ಸ್ವಾಮಿ, ಎಣ್ಣೆ ಎರಿಸ್ವಾಮಿ, ಬಂಡೆಗೌಡ, ನಾಗರಾಜ ಸ್ವಾಮಿ, ಶಿವಶಂಕರಗೌಡ, ವೀರಭದ್ರಯ್ಯ ಸ್ವಾಮಿ ಹಾಗೂ ಇತರೆ ರೈತರು ಇದ್ದರು. 

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ