22 Nov 2026, 06:18:54 PM|
Gold₹12413/gGold24K ₹12,413/g - 22K ₹11,369/gTap for full details
Press ID & Credential Portal
Apply / Verify  ➔
LIVE TV StateNationalPoliticsCrimeEntertainmentSportsEducationFINANCE & TAXATION
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Districts

ಡಿ 27 ರಿಂದ ಜನವರಿ 4, ರವರೆಗೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅವರೇಬೇಳೆ ಮೇಳ

ಬೆಂಗಳೂರು :  ಶ್ರೀ ವಾಸವಿ ಕಾಂಡಿಮೆಂಟ್ಸ್, ನಿಂದ ಬೆಂಗಳೂರು ನಗರದ ಆಹಾರ ಸಾಂಸ್ಕೃತಿಕ ಮತ್ತು ಪಾರಂಪರೆಯ ಪ್ರತೀಕವಾಗಿರುವ 26ನೇ ಆವೃತ್ತಿಯ "ಅವರೇಬೇಳೆ ಮೇಳ"ವನ್ನು ಈ ಬಾರಿ ಇನ್ನಷ್ಟು ವೈಭವದಿಂದ ಡಿಸೆಂಬರ್ 27, 2025 ರಿಂದ ಜನವರಿ 4,2026 ರವರೆಗೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಕಳೆದ 25 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಅವರೇಬೇಳೆ ಮೇಳದಲ್ಲಿ ರೈತರು ಬೆಳೆದ ಅವರೇಕಾಯಿಯನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಜೊತೆಗೆ ಅವರೇಕಾಯಿಯಿಂದ ತಯಾರಿಸಲಾದ ವೈವಿದ್ಯಮಯ ಹಾಗು ವಿಶಿಷ್ಟ ಆಹಾರ ಪದಾರ್ಥಗಳ ಮೂಲಕ ಆಹಾರ ಪ್ರಿಯರ ಮನಗೆದ್ದಿದೆ.



ಮೊದಲ ಬಾರಿಗೆ ಈ ವರ್ಷದ ವಿಶೇಷ ಆಕರ್ಷಣೆಗಳು

1) ನೀರುದೋಸೆ ಅವರೇಬೇಳೆ ಸಾಂಬಾರ

2) ಅವರೇಕಾಯಿ ಮೊಮೋಸ್

3) ಅವರೇಬೇಳೆ ಗುಲಾಬ್ ಜಾಮೂನ್, ಐಸ್ಕ್ರೀಂ ಜೊತೆಗೆ

4) ಅವರೇಕಾಯಿ ಪೂರಿ, ಹೋಳಿಗೆ ಹಾಗು ಹಲ್ವ

ಇವು ಆಹಾರ ಪ್ರಿಯರಿಗೆ ವಿಶೇಷ ರುಚಿ ಅನುಭವವನ್ನು ನೀಡಲಿದೆ. ಆಹಾರ ಮಾತ್ರವಲ್ಲದೆ ಮತ್ತೊಂದು ಪ್ರಮುಖ ಆಕರ್ಷಣೆಯಾಗಿ,

5ಡಿ ಥಿಯೇಟರ್: 360 ಡಿಗ್ರಿ ಸಿನಿಮಾ ಅನುಭವವನ್ನು ಮೊದಲ ಬಾರಿಗೆ ಪರಿಚಯಸಲಾಗುತ್ತಿದೆ. ಇದು ಮಕ್ಕಳ ಹಾಗು ಯುವ ಜನತೆಗೆ ವಿಭಿನ್ನ ಮನರಂಜನ ಅನುಭವವನ್ನು ನೀಡಲಿದೆ. ಮಕ್ಕಳು ಹಾಗು ಕುಟುಂಬಗಳಿಗಾಗಿ ವಿಶೇಷ ವ್ಯವಸ್ಥೆಗಳು.

1) ಅಮ್ಯೂಸ್‌ಮೆಂಟ್ ಜೋನ್

2) ಕ್ಯಾರಿಕೇಚರ್, ಟ್ಯಾಟೂ, ಫೇಸ್ ಪೇಂಟಿಮಗ್, ನೈಲ್ ಆರ್ಟ್ಸ್,

ಕುಟುಂಬ ಸಮೇತ ಸಮಯ ಕಳೆಯಲು ಸೂಕ್ತವಾದ ಸೌಲಭ್ಯಗಳನ್ನು ಒದಗಿಸಲಾಗಿದೆ. ಸುರಕ್ಷತೆ

ಮತ್ತು ಸಾರ್ವಜನಿಕ ಸೌಲಭ್ಯಗಳು:



ಮೇಳಕ್ಕೆ ಆಗಮಿಸುವ ಎಲ್ಲರಿಗೂ ಸುಗಮ ಹಾಗೂ ಸುರಕ್ಷಿತ ಅನುಭವ ಕಲ್ಪಿಸುವ ಉದ್ದೇಶದಿಂದ ಪ್ರಥಮ ಚಿಕಿತ್ಸೆ ಕೇಂದ್ರ(First Aid Centre ) ಮಕ್ಕಳ (Feeding Booth) ವೀಲ್‌ ಚೇರ್ ಪ್ರವೇಶ್ ಸೌಲಭ್ಯ, ಸ್ವಚ್ಚ ಹಾಗೂ ಸುಸಜ್ಜಿತ ಶೌಚಾಲಯಗಳು, ಮಾಹಿತಿ ಮತ್ತು ಸಹಾಯ ಕೇಂದ್ರ (Help Desk ) ಭದ್ರತಾ ಸಿಬ್ಬಂದಿ, ಅಂಬ್ಯುಲೆನ್ಸ್ ಹಾಗೂ ಅಗ್ನಿ ಸುರಕ್ಷತಾ ವ್ಯವಸ್ಥೆ. ಇವೆಲ್ಲವನ್ನೂ ವ್ಯವಸ್ಥಿತವಾಗಿ ಒದಗಿಸಲಾಗಿದೆ.

ಈ ಮೇಳವು ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ. ಕಳೆದ ವರ್ಷ 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದ ಈ ಮೇಳವು ಈ ಬಾರಿ ಇನ್ನಷ್ಟು ಜನಸಂದಣಿ ಹಾಗೂ ಆಕರ್ಷಣೆಯೊಂದಿಗೆ ನಡೆಯಲಿದೆ ಎಂದು ಆಯೋಜಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅವರಬೆಳೆ ಮೇಳ ಕೇವಲ ಆಹಾರ ಮೇಳವಲ್ಲ, ಇದು ರೈತರು, ಆಹಾರ ಸಂಸ್ಕೃತಿ ಮತ್ತು ಬೆಂಗಳೂರು ನಗರದ ಹೃದಯವನ್ನು ಒದಗಿಸುವ ಹಬ್ಬವಾಗಿದೆ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೀಪಗಳ ಹಬ್ಬದ ಮಹತ್ವ, ಆಚರಣೆಯ ವಿಧಿ ವಿಧಾನ ಇಲ್ಲಿದೆಕೋಡಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಇಟಲಿಯ ಹೈಡ್ರೋನಿಕ್' ಸಂಸ್ಥೆ ಹಾಗೂ 'ಲಿಫ್ಟ್ ಎಕ್ಸ್ಪೋಗೆ' ಡಾ. ಬಿ.ಎಂ. ಉಮೇಶ್ ಕುಮಾರ್ ಭೇಟಿಮಕ್ಕಳನ್ನು ಮೊಬೈಲ್ನಿಂದ ದೂರವಿಟ್ಟು ಕ್ರೀಡೆಗಳಲ್ಲಿ ತೊಡಗಿಸಿ: ಬಸವರಾಜ್ ಶೀಲವಂತರ್ ಕರೆನಕಲಿ ಮತದಾರರಿಗೆ ರಕ್ಷಣೆ ನೀಡುವುದೇ ಎಸ್ಐಆರ್ ವಿರೋಧಿಗಳ ಅಜೆಂಡಾ ಅಲ್ಲವೇ?” – ಪ್ರಭಾಕರ್ ರಾಗಿ ಅಂಗಡಿಗೆ ಬಂದವರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆಹಳ್ಳಿ-ಹಳ್ಳಿಗೆ ತೆರಳಿ ಕಾಂಗ್ರೆಸ್ ಭದ್ರಕೋಟೆ ನಿರ್ಮಿಸುತ್ತಿರುವ ಡಾ. ಯೋಗೇಶ್ ಬಾಬುವಾಲ್ಮೀಕಿನಾಯಕ ಸಮಾಜದವರು ಖಡ್ಗದ ಬದಲಾಗಿ ಶಿಕ್ಷಣದ ಅಸ್ತ್ರಹಿಡಿಯಿರಿಚಲನಚಿತ್ರ ನಟ, ನಿರ್ದೇಶಕ ಚಂದ್ರಹಾಸ ಆಳ್ವರಿಗೆ ಸನ್ಮಾನಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾದಲ್ಲಿ ಫ್ರೆಷರ್ಸ್ ಡೇ ಹಾಗೂ ಕನ್ನಡ ರಾಜ್ಯೋತ್ಸವ