LIVE TV StateNationalPoliticsInternationalCrimeEntertainmentSportsEducationFINANCE & TAXATION
Entertainment News

‘ಗುಲಾಬಿ’ ಚಲನಚಿತ್ರದ ಪೋಸ್ಟರ್ ಬಿಡುಗಡೆ

ಬೆಂಗಳೂರು: ಸಾವಿತ್ರಿ ರಾಮಚಂದ್ರ ಬ್ಯಾನರ್ ಅವರ ‘ಗುಲಾಬಿ’ ಕನ್ನಡ ಚಲನಚಿತ್ರದ ಮೊದಲ ಪೋಸ್ಟರ್ ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಸ್ವಪ್ನ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಯಿತು.

ರಕ್ಷಕ-೨ ಚಲನಚಿತ್ರದ ೫೦ನೇ ದಿನದ ಸಂಭ್ರಮಾಚರಣೆಯ ಜೊತೆಗೆ ಡಾ.ಆರ್.ವಿಜಯಕುಮಾರ್ ನಟಿಸಿ ಪ್ಯಾನ ಇಂಡಿಯಾ ಮಟ್ಟದಲ್ಲಿ ನಿರ್ಮಿಸಿ ನಿರ್ದೇಶಿಸಿರುವ ನಾಲ್ಕನೇ ಚಿತ್ರ ‘ಗುಲಾಬಿ’ಯ ಮೊದಲ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಚಲನಚಿತ್ರ ಉದ್ಯಮದ ನಟ, ನಟಿಯರು, ತಂತ್ರಜ್ಞರು ಮತ್ತು ಪ್ರೇಕ್ಷಕರ ಸಮ್ಮುಖದಲ್ಲಿ ಪ್ರೇಕ್ಷಕರ ಅಮೃತಹಸ್ತದಿಂದ ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಸ್ವಪ್ನ ಚಿತ್ರ ಮಂದಿರದ ಮಾಲೀಕರಾದ ಮನೋಹರ ಮತ್ತು ಸಿಬ್ಬಂದಿ ವರ್ಗಕೂಡ ಪಾಲ್ಗೊಂಡು

ಚಿತ್ರಕ್ಕೆ ಶುಭ ಹಾರೈಸಿದರು. ಚಿತ್ರದ ಚಿತ್ರೀಕರಣವನ್ನು ಬೆಂಗಳೂರು ಸುತ್ತಮುತ್ತ, ತಾತಗುಣಿ, ಭೂಮಿಕಾ ಸ್ಟುಡಿಯೋ, ಕನಕಪುರ ಸುತ್ತಮುತ್ತ ನಡೆಸಲಾಗಿದ್ದು, ಆರು ಹಾಡುಗಳು, ಆರು ಸಾಹಸ ದೃಶ್ಯಗಳಿವೆ. ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಿದ್ದೇವೆ. ಈ ಮೊದಲಿನ ನನ್ನ ಚಿತ್ರಗಳು ೫೦ ದಿನಗಳು, ಶತದಿನೋತ್ಸವ ಆಚರಿಸಿದ್ದು ಇದಕ್ಕೆಲ್ಲ ಪ್ರೇಕ್ಷಕರ ಪ್ರೋತ್ಸಾಹವೇ ಕಾರಣ ಎಂದು ನಿರ್ದೇಶಕ ಡಾ.ವಿಜಯಕುಮಾರ್ ತಿಳಿಸಿದರು.

ತಾರಾಗಣದಲ್ಲಿ ನಾಯಕರಾಗಿ ಡಾ.ವಿಜಯಕುಮಾರ್, ರಾಧಿಕಾ, ಚಂದನಾ, ಅನಿತಾಶ್ರೀ, ನಾಗೇಂದ್ರ ಅರಸ್, ಲಯಕೋಕಿಲ, ಉಗ್ರಂ ರವಿ, ಬಿಗ್‌ಬಾಸ್ ಮಲ್ಲಮ್ಮ, ಸುರೇಂದ್ರ ಕುಮಾರ್, ಅಜಿತ್‌ಜೈನ್, ಲೋಕೇಶ್ ಮೊದಲಾದವರಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ವೀರೇಶ, ಸಂಗೀತ ಸಂತೋಷ ಜೋಶ್ವ, ಪ್ರಸಾಧನ ನಾಗೇಶ, ಕೊರಿಯೋಗ್ರಫಿ ಬಾಲಕೃಷ್ಣ, ಸಾಹಸ ಗುಲಾಬಿ ಚಿನ್ನಯ್ಯ, ಸಂಕಲನ ನಿಸಿತ್, ಪಿಆರ್ ಓ ಡಾ.ಪ್ರಭು ಗಂಜಿಹಾಳ,ಡಾ.ವೀರೇಶ ಹಂಡಿಗಿ, ಸಹಾಯಕ ನಿರ್ದೇಶನ ವಾಸುದೇವ ಶೆಟ್ಟಿ ಎಚ್.ಎಸ್, ಸಹನಿರ್ದೇಶನ ಎಸ್.ಮೇಘರಾಜ ಗೌಡ, ನಿರ್ಮಾಣ ಉಸ್ತುವಾರಿ ಮತ್ತು ವಸ್ತ್ರವಿನ್ಯಾಸ ಅನಿತಾಶ್ರೀ, ಕಥೆ-ಚಿತ್ರಕಥೆ-ಸಂಭಾಷಣೆ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದ ಹೊಣೆ ಈಗಾಗಲೇ ದೊಡ್ಡಣ್ಣ ಪುಟ್ಟಣ್ಣ, ರಕ್ಷಕ ಮತ್ತು ರಕ್ಷಕ-೨ ಮೂರು ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿರುವ ಡಾ.ವಿಜಯಕುಮಾರ್ ಹೊತ್ತಿದ್ದಾರೆ.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
“ಅಮೋಘ” ಚಲನಚಿತ್ರದ ಹಾಡು ಬಿಡುಗಡೆಬಳ್ಳಾರಿ ಜಿಲ್ಲೆಯ ಎಸ್ಐಆರ್ ಕರಡು ಮತದಾರರ ಪಟ್ಟಿ ಪ್ರಕಟನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಗಳ ದರ್ಶನ ಪಡೆದ ಮಾಜಿ ಶಾಸಕ ಸುರೇಶ್ ಬಾಬುಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ, ಅದೊಂದು ವಿಚಾರಧಾರೆ: ಪ್ರೊ. ಎನ್.ಎಂ. ಸಾಲಿಸಾಂಸಾರಿಕ ಜೀವನ ಪ್ರವೇಶಿಸಿದ ಸ್ಪೈಡರ್ ಮ್ಯಾನ್ನಾಗೇಂದ್ರಗೆ ಮತ್ತೊಂದು ಮಹತ್ವದ ಹೊಣೆ: ಕಲ್ಯಾಣ ಕರ್ನಾಟಕ ಸಚಿವಾಲಯದ ಜವಾಬ್ದಾರಿಸಂಸ್ಕೃತ ವಿಶ್ವವ್ಯಾಪಿ ಜ್ಞಾನಭಾಷೆ, ಸಂಶೋಧನೆಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಲಿಕಲ್ಲೂರು- ಶಿಶು ಪಾಲನಾ ಕೇಂದ್ರದಲ್ಲಿ ತಾಯಂದಿರಿಗೆ ಜಾಗೃತಿ. ಹೊನ್ನಳ್ಳಿ ತಾಂಡಾದಲ್ಲಿ ಶ್ರೀಗುರು ಅಜ್ಜಯ್ಯನ ದ್ವಿತೀಯ ದಶಮಾನೋತ್ಸವ ವಿಶೇಷ ಪೂಜಾ ಕಾರ್ಯಕ್ರಮಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ