LIVE TV StateNationalPoliticsInternationalCrimeEntertainmentSportsEducationFINANCE & TAXATION
Entertainment News

'ಧ್ರುವ ನಕ್ಷತ್ರ’ ಚಿತ್ರದ ಚಿತ್ರೀಕರಣ ಮುಕ್ತಾಯ

ಹನೂರು: ಬಿ.ವಿ. ಕಂಬೈನ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಕನ್ನಡ ಚಿತ್ರಧ್ರುವ ನಕ್ಷತ್ರ ಚಿತ್ರೀಕರಣ ಯಶಸ್ವಿಯಾಗಿ ಸಂಪೂರ್ಣಗೊಂಡಿದೆ. ಚಿತ್ರೀಕರಣ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಹನೂರು ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ 

 ಚಿತ್ರತಂಡ ಸಂಪ್ರದಾಯದಂತೆ ಕುಂಬಳಕಾಯಿ ಒಡೆಯುವ ಮೂಲಕ ಸಂಭ್ರಮಿಸಿತು.

ನಿಗದಿತ 50 ದಿನಗಳ ಕಾಲ ನಡೆದ ಚಿತ್ರೀಕರಣವು   ಮೈಸೂರು, ಮದ್ದೂರು, ಹೊಸಕೋಟೆ, ಹನೂರು ಹಾಗೂ ಒಡೆಯರಾಪಾಳ್ಯ ಸುತ್ತಮುತ್ತ  ಸತತ ಚಿತ್ರೀಕರಣ ನಡೆಸಲಾಯಿತು. ವಿಶೇಷವೆಂದರೆ ಚಿತ್ರೀಕರಣದಲ್ಲಿ   ಸ್ಥಳೀಯ ಪ್ರತಿಭೆಗಳು ಕೂಡ ಭಾಗಿಯಾಗಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ.

ಸಂದರ್ಭದಲ್ಲಿ ಮಾತನಾಡಿದ ಚಿತ್ರದ ಕಥೆ-ಚಿತ್ರಕಥೆ- ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಬಿ. ಕೃಷ್ಣ ಮಳವಳ್ಳಿ ಅವರು ನಮ್ಮ ಚಿತ್ರ ಹಳ್ಳಿ ಸೊಗಡಿನ ಪ್ರೇಮಕಥೆಯಾಗಿದೆ.ಮನೆ ಮಂದಿಯೆಲ್ಲ ಕುಟುಂಬ ಸಹಿತ ನೋಡಬಹುದಾದ ಚಿತ್ರ ಇದಾಗಿದೆ.ಚಿತ್ರೀಕರಣ ಸಂಪೂರ್ಣ ಮುಗಿದಿದ್ದು ಈಗ ಡಬ್ಬಿಂಗ್ ಕಾರ್ಯ ಮುಗಿಸಿ ಆದಷ್ಟು ಬೇಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಉದ್ದೇಶವಿದೆ. ಕನ್ನಡ ಸಿನಿ ಪ್ರೇಕ್ಷಕರು ಕನ್ನಡ ಚಿತ್ರಗಳನ್ನು ಚಿತ್ರಮಂದಿರದಲ್ಲಿ ನೋಡಿ ಪ್ರೋತ್ಸಾಹಿಸಬೇಕು  ಎಂದರು.

news_1785518033_6_457.webp

 

 ತಾರಾಗಣದಲ್ಲಿ  ನಾಯಕ ನಟ ಮನ್ವಿತ್, ನಾಯಕಿ ಮೇಘನಾ ಎಸ್, ಗಣೇಶ್, ಪಲ್ಲವಿ, ಚಂದ್ರಪ್ರಭ, ಸಿಲ್ಲಿಲಲ್ಲಿ ಆನಂದ್, ಹಳ್ಳಿ ಮೇಷ್ಟ್ರು ಖ್ಯಾತಿಯ ಕಪ್ಪೆರಾಯ, ಸೈಲೆಸ್ ವೆಂಕಟ್, ಪಂಚಮುಖಿ ಚಂದ್ರು, ಚೆನ್ನಬಸಪ್ಪ , ಮಾಣಿಕ್ಯ ರಾಜ್, ಎಂ ಮಾದೇಶ್ ಭೈರನತ್ತ , ಜಿಲ್ಲಾ ಪತ್ರ ಬರಹಗಾರರಾದ ಎಸ್ ಪುಟ್ಟಸ್ವಾಮಿ, ಹನೂರು ಎಂ ಸತ್ಯಸುಂದರ್, ಎಲ್ಲಿಮಾಳ ಭುವನೇಶ್, ಜೂನಿಯರ್ ಜಗ್ಗೇಶ್ ನಾಗಿ ಬೈರನತ್ತ ಎಂ, ಆಕಾಶ್ ಸ್ವಾಮಿ , ಕೆ ಸಿ ಸಿಂಗ್ ,ಸ್ಯಾಮ್, ಅಶ್ವಿನಿ ,ನಿವೇದಿತಾ, ಪ್ರಿಯ, ಸತ್ಯ ಸುಂದರ್, ಬೇಬಿ ದವನಿ, ಮಾಸ್ಟರ್ ಅಶ್ವಥ್, ಸಾಯಿ ರಾಮ್ ಮುಂತಾದ ಕಲಾವಿದರು   ಅಭಿನಯಿಸಿದ್ದಾರೆ.

ತಾಂತ್ರಿಕವರ್ಗದಲ್ಲಿ

ಛಾಯಾಗ್ರಹಣ ರವಿ ಸುವರ್ಣ, ಸತ್ಯಸುಂದರ್, ಕೃಷ್ಣಕುಮಾರ್ ,  

- ಸಂಕಲನಅರವಿಂದ ರಾಜ್,

- ಸಂಗೀತ ಆರ್.ಎಸ್. ಗಣೇಶ್ ನಾರಾಯಣ್,

- ಸಾಹಸ ಡ್ರ್ಯಾಗನ್ ಅಭಿ,

- ಮೇಕಪ್ ಈಶ್ವರ್,ಪತ್ರಿಕಾಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಸಹ ನಿರ್ದೇಶನ  ಎಂ ನಾಸಿರ್  ಅವರದಿದೆ.

ಸದ್ಯದಲ್ಲಿಯೇ ಡಬ್ಬಿಂಗ  ಕಾರ್ಯ ಕೈಗೊಂಡು ಶೀಘ್ರವೇ  ಚಿತ್ರವನ್ನು  ತೆರೆಗೆ ತರುವ ಆಲೋಚನೆ ನಿರ್ಮಾಪಕರದ್ದಾಗಿದೆ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
“ಅಮೋಘ” ಚಲನಚಿತ್ರದ ಹಾಡು ಬಿಡುಗಡೆಬಳ್ಳಾರಿ ಜಿಲ್ಲೆಯ ಎಸ್ಐಆರ್ ಕರಡು ಮತದಾರರ ಪಟ್ಟಿ ಪ್ರಕಟನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಗಳ ದರ್ಶನ ಪಡೆದ ಮಾಜಿ ಶಾಸಕ ಸುರೇಶ್ ಬಾಬುಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ, ಅದೊಂದು ವಿಚಾರಧಾರೆ: ಪ್ರೊ. ಎನ್.ಎಂ. ಸಾಲಿಸಾಂಸಾರಿಕ ಜೀವನ ಪ್ರವೇಶಿಸಿದ ಸ್ಪೈಡರ್ ಮ್ಯಾನ್ನಾಗೇಂದ್ರಗೆ ಮತ್ತೊಂದು ಮಹತ್ವದ ಹೊಣೆ: ಕಲ್ಯಾಣ ಕರ್ನಾಟಕ ಸಚಿವಾಲಯದ ಜವಾಬ್ದಾರಿಸಂಸ್ಕೃತ ವಿಶ್ವವ್ಯಾಪಿ ಜ್ಞಾನಭಾಷೆ, ಸಂಶೋಧನೆಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಲಿಕಲ್ಲೂರು- ಶಿಶು ಪಾಲನಾ ಕೇಂದ್ರದಲ್ಲಿ ತಾಯಂದಿರಿಗೆ ಜಾಗೃತಿ. ಹೊನ್ನಳ್ಳಿ ತಾಂಡಾದಲ್ಲಿ ಶ್ರೀಗುರು ಅಜ್ಜಯ್ಯನ ದ್ವಿತೀಯ ದಶಮಾನೋತ್ಸವ ವಿಶೇಷ ಪೂಜಾ ಕಾರ್ಯಕ್ರಮಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ