LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಐಸಿಎಸ್ಐ ಬೆಂಗಳೂರು ಚಾಪ್ಟರ್ ಗೆ ಸತತ ಮೂರನೇ ಬಾರಿಗೆ ಶ್ರೇಷ್ಠತಾ ಪ್ರಶಸ್ತಿ

ಬೆಂಗಳೂರು: ದಿ ಇನ್ಸ್ಟಿಟ್ಯೂಟ್‌ ಆಫ್‌ ಕಂಪೆನಿ ಸೆಕ್ರೇಟರಿ ಆಫ್‌ ಇಂಡಿಯಾ – ಐಸಿಎಸ್ಐ ಬೆಂಗಳೂರು ಚಾಪ್ಟರ್‌ ಗೆ ಸತತ ಮೂರನೇ ಬಾರಿಗೆ ಶ್ರೇಷ್ಠತಾ ಪ್ರಶಸ್ತಿ ಲಭಿಸಿದೆ.

ಕೇರಳದ ಕೊಚ್ಚಿಯಲ್ಲಿ ನಡೆದ 53ನೇ ಕಂಪನಿ ಕಾರ್ಯದರ್ಶಿಗಳ ರಾಷ್ಟ್ರೀಯ ಮಹಾಸಭೆಯಲ್ಲಿ ಐಸಿಎಸ್ಐ – ಬೆಂಗಳೂರು ಚಾಪ್ಟರ್ನ ಮಾಜಿ ಅಧ್ಯಕ್ಷ ಸಿಎಸ್ ವೆಂಕಟಸುಬ್ಬರಾವ್ ಕಲ್ವಾ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ನೂರ್ ಸುಮಯ್ಯ ಅವರು ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಐಸಿಎಸ್ಐ – ಬೆಂಗಳೂರು ಚಾಪ್ಟರ್ನ ಅಧ್ಯಕ್ಷ ಸಿಎಸ್ ಧನಂಜಯ ಶುಕ್ಲಾ, ಉಪಾಧ್ಯಕ್ಷ ಸಿಎಸ್ ಪವನ್ ಜಿ. ಚಂದಕ್,  ಕೇಂದ್ರ ಮಂಡಳಿಯ ಸದಸ್ಯರಾದ ಸಿಎಸ್ ದ್ವಾರಕನಾಥ್ ಸಿ, ಮತ್ತು ಐಸಿಎಸ್ಐ ಕಾರ್ಯಕ್ರಮ ನಿರ್ದೇಶಕ ಸಿಎಸ್ ಅಶೀಷ್ ಮೋಹನ್ ಉಪಸ್ಥಿತರಿದ್ದರು.

ಸಿಎಸ್ಐ ಬೆಂಗಳೂರು ಚಾಪ್ಟರ್ಗೆ 2024ನೇ ಸಾಲಿನ ಡೈಮಂಡ್ ಗ್ರೇಡ್ ವರ್ಗದ ಮೂರನೇ “ಶ್ರೇಷ್ಠ ಚಾಪ್ಟರ್ ಪ್ರಶಸ್ತಿ” ಲಭಿಸಿರುವುದು ಸಂತಸ ತಂದಿದೆ ಎಂದು ಐಸಿಎಸ್ಐ – ಬೆಂಗಳೂರು ಚಾಪ್ಟರ್ ಅಧ್ಯಕ್ಷರಾದ ಸಿಎಸ್ ದೇವಿಕಾ ಸತ್ಯನಾರಾಯಣ ತಿಳಿಸಿದ್ದಾರೆ.

ಈ ಮಹಾಸಭೆಯಲ್ಲಿ 1,600 ಕ್ಕೂ ಹೆಚ್ಚು ಪ್ರತಿನಿಧಿಗಳು — ಕಂಪನಿ ಕಾರ್ಯದರ್ಶಿಗಳು, ವೃತ್ತಿಪರರು, ನಿರ್ದೇಶಕರು, ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಇತರೆ ಹಿತಾಸಕ್ತರು — ನೇರವಾಗಿ ಭಾಗವಹಿಸಿದರು ಹಾಗೂ ಸುಮಾರು 1,900 ಮಂದಿ ಆನ್ಲೈನ್ ಮೂಲಕ ಭಾಗವಹಿಸಿದರು.

'
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ