22 Nov 2026, 06:10:17 PM|
Gold₹12413/gGold24K ₹12,413/g - 22K ₹11,369/gTap for full details
Press ID & Credential Portal
Apply / Verify  ➔
LIVE TV StateNationalPoliticsCrimeEntertainmentSportsEducationFINANCE & TAXATION
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Districts

ಆ. 16ರಂದು ಒಳಮೀಸಲಾತಿ ಜಾರಿ ಖಚಿತ

ಚಿತ್ರದುರ್ಗ:  ಒಳಮೀಸಲಾತಿ ಜಾರಿ ಸಂಬಂಧ ನ್ಯಾ.ನಾಗಮೋಹನ್ ದಾಸ್ ಆಯೋಗ ಸಲ್ಲಿಸಿರುವ ವರದಿ ಅತ್ಯಂತ ವೈಜ್ಞಾನಿಕವಾಗಿದ್ದು, ಈ ಕುರಿತು ಅಪಸ್ವರ ಕೂಗು ಹಾಕುತ್ತಿರುವವರು ಸಂವಿಧಾನದ ವಿರೋಧಿಗಳು ಎಂದು ಮಾಜಿ ಸಚಿವ ಎಚ್.ಆಂಜನೇಯ ಆಕ್ರೋಶ ವ್ಯಕ್ತಪಡಿಸಿದರು.

 

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ಕಾರಣಕ್ಕೂ ಉಪ ಸಮಿತಿ ರಚನೆ ಅಥವಾ ಮತ್ತೊಂದು ಸಚಿವ ಸಂಪುಟದ ಸಭೆಗೆ ಮುಂದೂಡದೆ ಆಗಸ್ಟ್ 16ರಂದು ಮಾದಿಗರು ಮತ್ತಿತರ ನೊಂದ ಜನರಿಗೆ ಸ್ವತಂತ್ರ ನೀಡುವ ಕ್ರಮಕೈಗೊಳ್ಳಬೇಕು, ಈ ವಿಷಯದಲ್ಲಿ ಸಂಶಯವೇ ಬೇಡ ಎಂದರು.

 

ಮೊದಲು ಒಳಮೀಸಲಾತಿ ಜಾರಿಗೊಳಿಸುವ ಬದ್ಧತೆ ಇಲ್ಲವೆಂದರು, ನಾಗಮೋಹನ್ ದಾಸ್ ಆಯೋಗ ರಚನೆ ವೇಳೆ ವಿರೋಧಿಸಿದರು. ಜಾತಿಗಣತಿ ಸಮೀಕ್ಷೆ ಕೈಗೊಳ್ಳುತ್ತಿದ್ದಂತೆ ಷಡ್ಯಂತ್ರ ಎಂದು ಕುಹುಕುವಾಡಿದರು. ಈಗ ವರದಿ ಸರ್ಕಾರದ ಕೈ ಸೇರಿ, ಸಚಿವ ಸಂಪುಟದಲ್ಲಿ ಮಂಡನೆ ಆಗುತ್ತಿದ್ದಂತೆ ಕೆಲವರು ಭೀತಿಗೆ ಒಳಗಾಗಿ ಜ್ಞಾನ, ಸಂವಿಧಾನದ ಅರಿವು ಇಲ್ಲದೆ ಟೀಕಿಸುತ್ತಿದ್ದಾರೆ ಎಂದು ತಿಳಿಸಿದರು.



ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಏಕತೆ, ಬದ್ಧತೆಯಿಂದ ಮುನ್ನಡೆಯುತ್ತಿದೆ. ಚಿತ್ರದುರ್ಗದಲ್ಲಿ ಈ ಹಿಂದೆ ಎಸ್ಸಿ, ಎಸ್ಟಿ ಸಮಾವೇಶದಲ್ಲಿ ಘೋಷಣೆ ಮಾಡಿದಂತೆ ಹಾಗೂ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದಂತೆ ನಡೆದುಕೊಳ್ಳುತ್ತಿದ್ದೇವೆ ಎಂದರು.

 

ಸದಾಶಿವ ಆಯೋಗದ ವರದಿ ಜಾರಿಗೆ ಸರ್ಕಾರ ಪ್ರಯತ್ನ ಕೈಗೊಂಡಿತ್ತು. ಆದರೆ, ಒಳಮೀಸಲಾತಿ ಜಾರಿ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲವೆಂಬ ತೀರ್ಪು ಅಡ್ಡಿಯಾಗಿತ್ತು. ಆದರೆ, ಸುಪ್ರೀಂ ಕೋರ್ಟ್ ಆಗಸ್ಟ್ 1, 2024ರಂದು ನೀಡಿದ ತೀರ್ಪು ಅಡ್ಡಿಗೆ ತೆರೆ ಎಳೆದಿದ್ದು, ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಎಲ್ಲರೂ ಸ್ವಾಗತಿಸಿದ್ದಾರೆ ಎಂದರು.

 

ಆಗಸ್ಟ್ 7ರಂದು ಸಚಿವ ಸಂಪುಟದಲ್ಲಿಯೇ ತೀರ್ಮಾನ ಕೈಗೊಳ್ಳಲು ವರದಿ ಕುರಿತು ಸಚಿವರಿಗೆ ಮಾಹಿತಿ ದೊರೆಯಲಿ. 1700 ಪುಟಗಳ ವರದಿಯನ್ನು ಅಧ್ಯಯನ ಮಾಡಲಿ ಎಂಬ ಕಾರಣಕ್ಕೆ ಪ್ರತಿಗಳನ್ನು  ಕೊಡಲಾಗಿದೆ. ಬರುವ ಆಗಸ್ಟ್ 16ರಂದು ವಿಶೇಷ ಸಚಿವ ಸಂಪುಟದ ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ಅಂತಿಮ ತೆರೆ ಎಳೆಯಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

ಮೇ 5ರಿಂದ ಜುಲೈ 6ರ ವರೆಗೆ ಬರೋಬ್ಬರಿ 60 ದಿನಗಳ ಕಾಲ, ವಿವಿಧ ಹಂತಗಳಲ್ಲಿ ಯಾರೋಬ್ಬರೂ ಸಮೀಕ್ಷೆಯಿಂದ ಹೊರಗುಳಿಯದಂತೆ ಸಮೀಕ್ಷೆ ನಡೆಸಲಾಗಿದ್ದು, ಬಳಿಕ ಸಮಗ್ರ ಅಧ್ಯಯನ ನಡೆಸಿ ಅತ್ಯಂತ, ಎಲ್ಲರೂ ಮೆಚ್ಚುವ, ಸಂವಿಧಾನದ ಆಶಯದಂತೆ ಆಯೋಗವು ವರದಿ ಸಲ್ಲಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರ ವರದಿ ಜಾರಿಗೆ ಉತ್ಸಾಹಕತೆ ಹೊಂದಿದೆ ಎಂದರು.

 

ಆದಿಆಂಧ್ರ, ಆದಿಕರ್ನಾಟಕ, ಆದಿದ್ರಾವಿಡ ಎಂದು ಕೆಲವರು ಗುರುತಿಸಿಕೊಂಡಿದ್ದು, ಅವರಿಗೆ ಶೇ.1 ಮೀಸಲಾತಿ ನೀಡಿರುವುದನ್ನು ಕೆಲವರು ವಿರೋಧಿಸುತ್ತಿದ್ದಾರೆ. ಆದರೆ, ಸಂವಿಧಾನತ್ಮಕವಾಗಿ ಎಎ, ಎಕೆ, ಎಡಿ ಎಂದು ಗುರುತಿಸಿಕೊಳ್ಳಲು ಹಕ್ಕು ನೀಡಲಾಗಿದೆ. ಆದ್ದರಿಂದ ಈ ಗುಂಪನ್ನು ಉಳಿಸಿಕೊಳ್ಳಬೇಕು. ಜೊತೆಗೆ ಅವರೆಲ್ಲರಿಗೂ ಗುರುತಿನ ಚೀಟಿ ನೀಡಿ ಶೇ.1ರ ಮೀಸಲಾತಿಯಡಿಯೇ ಸೌಲಭ್ಯ ಪಡೆಯಲು ಕ್ರಮಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಛಲವಾದಿ, ಮಾದಿಗರ ಗುಂಪಿಗೆ ನುಸಳಲು ಅವಕಾಶ ನೀಡಬಾರದು ಎಂದು ತಿಳಿಸಿದರು.

ರಾಜ್ಯದಲ್ಲಿ ಮಾದಿಗರ ಸಂಖ್ಯೆಯಲ್ಲಿ ಹೆಚ್ಚು ಇರುವ ಜೊತೆಗೆ ಉದ್ಯೋಗ, ಶಿಕ್ಷಣ, ಆಸ್ತಿ ಗಳಿಸಿ, ಸಾಮಾಜಿಕ ಸ್ಥಾನದ ಸೇರಿ ವಿವಿಧ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದಿದ್ದಾರೆಂಬ ನಿಖರ ಮಾಹಿತಿ ಸಮೀಕ್ಷೆ ವೇಳೆ ದೊರೆತಿದೆ. ಆದ್ದರಿಂದ ಶೇ.6 ಮೀಸಲಾತಿ ನೀಡಲಾಗಿದೆ. ಇದು 7ಕ್ಕೆ ಏರಿಸಬೇಕಾಗಿತ್ತು. ಆದರೂ ನಾವುವರದಿಯನ್ನು ಸ್ವಾಗತಿಸಿದ್ದೇವೆ. ಆದರೆ, ಕೆಲವರು ಅನಗತ್ಯ ಗೊಂದಲ ಏರ್ಪಡಿಸುವ ಹುನ್ನಾರು ನಡೆಸುತ್ತಿದ್ದಾರೆ. ಇದಕ್ಕೆ ಸರ್ಕಾರ ಕಿವಿಕೊಡಬಾರದು ಎಂದು ಆಗ್ರಹಿಸಿದರು.

ಕೆಲವರು ಟೀಕೆ, ಆರೋಪ ಮಾಡಿದರೆ ಪ್ರಚಾರ ದೊರೆಯುತ್ತಿದೆವೆಂಬ ಕಾರಣಕ್ಕೆ ಅಪಸ್ವರ ಎತ್ತುತ್ತಿದ್ದಾರೆ. ಇಂತಹ ನಡೆಯಿಂದ ಸರ್ಕಾರದ ಮೇಲೆ ಯಾವುದೇ ರೀತಿ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದರು.

ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ವಕೀಲರಾದ ಶರಣಪ್ಪ, ರವೀಂದ್ರ, ತಾಪಂ ಮಾಜಿ ಸದಸ್ಯ ಸಮರ್ಥರಾಯ, ಅನಿಲ್ ಕೋಟಿ, ಎಂ.ಜೆ.ಪ್ರಸನ್ನ ಇತರರಿದ್ದರು.

 

 
ಮಾದಿಗರೇ ಮಾತನಾಡಬೇಡಿ ನಾಗಮೋಹನ್ ದಾಸ್ ಆಯೋಗದ ವರದಿ ಆಗಸ್ಟ್ 16ರಂದು ಜಾರಿಗೊಳ್ಳುವುದು ಖಚಿತ. ಈ ಮಧ್ಯೆ ಕೆಲವರು ವರದಿ ವಿರುದ್ಧ ಹೇಳಿಕೆ ನೀಡುತ್ತಿರುವುದು ಗೊಂದಲ ಮೂಡಿಸುವ ಷಡ್ಯಂತ್ರವಾಗಿದೆ ಎಂದು ಆಂಜನೇಯ ಆರೋಪಿಸಿದರು.

ಮಾದಿಗ ಸಮುದಾಯ ಯಾವುದೇ ಕಾರಣಕ್ಕೂ ಕೆರಳಬಾರದು. ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ನುಡಿದಂತೆ ನಡೆಯುವ ನಾಯಕ. ಎಂತಹ ಅಡೆತಡೆಗಳು ಎದುರಾದರೂ ಒಳಮೀಸಲಾತಿ ಜಾರಿಗೊಳಿಸಿಯೇ ಸಿದ್ಧ. ಇದಕ್ಕೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಡಾ.ಜಿ.ಪರಮೇಶ್ವರ್ ಸೇರಿ ಎಲ್ಲ ಸಮುದಾಯದ ಸಚಿವರು, ಶಾಸಕರು ಬೆಂಬಲವಾಗಿದ್ದಾರೆ. ಉದ್ಯೋಗ ನೇಮಕಾತಿಗಳಿಗೆ ತಡೆ ಹಾಕಿರುವುದೇ ಒಳಮೀಸಲಾತಿ ಜಾರಿ ಖಚಿತವೆಂಬ ಗ್ಯಾರಂಟಿ ಆಗಿದೆ. ಈ ವಿಷಯದಲ್ಲಿ ಆತಂಕ ಬೇಕಿಲ್ಲ. ಆದ್ದರಿಂದ ಮಾದಿಗರು ಯಾವುದೇ ಕಾರಣಕ್ಕೂ ಪ್ರತಿಯಾಗಿ ಮಾತನಾಡದೆ ಮೌನವಾಗಿರಬೇಕು ಎಂದು ಕಿವಿಮಾತು ಹೇಳಿದರು.

ಆಸ್ತಿ ಹಂಚಿಕೆ ಸೌಹಾರ್ಧ

70 ವರ್ಷಕ್ಕೂ ಹೆಚ್ಚು ಒಟ್ಟು ಕುಟುಂಬ ನಡೆಸಿದ ಅಣ್ಣ-ತಮ್ಮಂದಿರು ಈಗ ಸೌಹಾರ್ಧತೆಯಿಂದ ಆಸ್ತಿ ಹಂಚಿಕೆ ಮಾಡಿಕೊಂಡು ಮೊದಲಿನಂತೆ ಪ್ರೀತಿ-ವಿಶ್ವಾಸದಿಂದಲೇ ಜೀವನ ನಡೆಸುವ ಕ್ರಮವೇ ಒಳಮೀಸಲಾತಿ ಜಾರಿಗೊಳ್ಳುತ್ತಿರುವ ಮೂಲಕ ಉದ್ದೇಶ. ಆದರೆ, ಇದನ್ನು ಸಹಿಸಿದ, ಸಾಮಾಜಿಕ ನ್ಯಾಯದ ಪರಿಪಾಲನೆ ಹಾಗೂ ಸಂವಿಧಾನದ ವಿರೋಧಿಗಳು ವಿರೋಧ ಮಾಡುತ್ತಿದ್ದಾರೆ. ಅವರ ಸಂಖ್ಯೆ ಬೆರಳೆಣಿಕೆಯಲ್ಲಿದೆ.

ಎಚ್.ಆಂಜನೇಯ, ಮಾಜಿ ಸಚಿವ.


Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೀಪಗಳ ಹಬ್ಬದ ಮಹತ್ವ, ಆಚರಣೆಯ ವಿಧಿ ವಿಧಾನ ಇಲ್ಲಿದೆಕೋಡಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಇಟಲಿಯ ಹೈಡ್ರೋನಿಕ್' ಸಂಸ್ಥೆ ಹಾಗೂ 'ಲಿಫ್ಟ್ ಎಕ್ಸ್ಪೋಗೆ' ಡಾ. ಬಿ.ಎಂ. ಉಮೇಶ್ ಕುಮಾರ್ ಭೇಟಿಮಕ್ಕಳನ್ನು ಮೊಬೈಲ್ನಿಂದ ದೂರವಿಟ್ಟು ಕ್ರೀಡೆಗಳಲ್ಲಿ ತೊಡಗಿಸಿ: ಬಸವರಾಜ್ ಶೀಲವಂತರ್ ಕರೆನಕಲಿ ಮತದಾರರಿಗೆ ರಕ್ಷಣೆ ನೀಡುವುದೇ ಎಸ್ಐಆರ್ ವಿರೋಧಿಗಳ ಅಜೆಂಡಾ ಅಲ್ಲವೇ?” – ಪ್ರಭಾಕರ್ ರಾಗಿ ಅಂಗಡಿಗೆ ಬಂದವರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆಹಳ್ಳಿ-ಹಳ್ಳಿಗೆ ತೆರಳಿ ಕಾಂಗ್ರೆಸ್ ಭದ್ರಕೋಟೆ ನಿರ್ಮಿಸುತ್ತಿರುವ ಡಾ. ಯೋಗೇಶ್ ಬಾಬುವಾಲ್ಮೀಕಿನಾಯಕ ಸಮಾಜದವರು ಖಡ್ಗದ ಬದಲಾಗಿ ಶಿಕ್ಷಣದ ಅಸ್ತ್ರಹಿಡಿಯಿರಿಚಲನಚಿತ್ರ ನಟ, ನಿರ್ದೇಶಕ ಚಂದ್ರಹಾಸ ಆಳ್ವರಿಗೆ ಸನ್ಮಾನಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾದಲ್ಲಿ ಫ್ರೆಷರ್ಸ್ ಡೇ ಹಾಗೂ ಕನ್ನಡ ರಾಜ್ಯೋತ್ಸವ