22 Nov 2026, 06:18:14 PM|
Gold₹12413/gGold24K ₹12,413/g - 22K ₹11,369/gTap for full details
Press ID & Credential Portal
Apply / Verify  ➔
LIVE TV StateNationalPoliticsCrimeEntertainmentSportsEducationFINANCE & TAXATION
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Districts Chitradurga

ಬಡವರಿಗೆ, ಕೂಲಿ ಕಾರ್ಮಿಕರಿಗೆ ಅನುಕೂಲವಾದ ಇಂದಿರಾ ಕ್ಯಾಂಟೀನ್

ಹರೀಶ್ ಟಿ.ಟಿ ನಾಯಕನಹಟ್ಟಿ

ನಾಯಕನಹಟ್ಟಿ: ಪಟ್ಟಣದಲ್ಲಿ ಆರಂಭವಾಗಿರುವ ಇಂದಿರಾ ಕ್ಯಾಂಟಿನ್ ಬಡ ಕೂಲಿ ಕಾರ್ಮಿಕರ ಪಾಲಿಗೆ ವರದಾನವಾಗಿದ್ದು ಕಡಿಮೆ ದರದಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಅನುಕೂಲವಾಗಿದೆ ಎಂದು ಕಾರ್ಮಿಕರು ಶಾಸಕ ಎನ್.ವೈ.ಗೋಪಾಲಕೃಷ್ಣರವರನ್ನು ಹೊಗಳಿದರು.

ಶಾಸಕರು ನಿಜವಾಗಲು ಬಡವರ ಬಗ್ಗೆ ಕಾಳಜಿ ಇರುವವರು ನಮ್ಮಂತ ಕಾರ್ಮಿಕರ ಹಸಿವು ನಿಗಿಸಲು ಇಂದಿರಾ ಕ್ಯಾಂಟಿನ್ ತಂದಿದ್ದಾರೆ. ಊಟದ ಗುಣಮಟ್ಟ ಚೆನ್ನಾಗಿದೆ. ರುಚಿಯಾಗಿದೆ. ನಾವು ಹೊಟ್ಟೆ ತುಂಬಾ ಊಟ ಮಾಡಿ ನೆಮ್ಮದಿಯಿಂದ ಕೆಲಸ ಮಾಡುತ್ತಿದ್ದೇವೆ ಎಂದು ಶಾಸಕರನ್ನು ಕೊಂಡಾಡಿದ್ದಾರೆ. ಕಟ್ಟಡ ಕಾರ್ಮಿಕರು, ಕೃಷಿ, ಕೂಲಿ ಕಾರ್ಮಿಕರು, ಹಮಾಲಿ ಕಾರ್ಮಿಕರು, ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಅವರೆಲ್ಲರಿಗೂ ಇಂದಿರಾ ಕ್ಯಾಂಟಿನ್ ಅನುಕೂಲವಾಗಿದೆ. ಬಡವರ ಹಸಿವು ನಿಗಿಸುವ ಯೋಜನೆಗೆ ಕಾರ್ಮಿಕರು ವರ್ಗದಿಂದ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ನಾಯಕನಹಟ್ಟಿ ಪಟ್ಟಣದಲ್ಲಿ ಕೈಗೊಂಡಿರುವ ಮೂಲ ಸೌಕಾರ್ಯ ಅಭಿವೃದ್ಧಿ ಕಾಮಗಾರಿಗಳಿಂದ ಪಟ್ಟಣದ ಚಿತ್ರಣವೇ ಬದಲಾಗಿದ್ದು, ಶಾಸಕರ ಅಭಿವೃದ್ದಿ ಕೆಲಸಗಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

            ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ನಾಯಕನಹಟ್ಟಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಿರುವುದರಿಂದ ಬಡವರು, ಕೂಲಿ ಕಾರ್ಮಿಕರು, ರೈತರು, ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಿದೆ ಎಂದು ಹೇಳಿ ಸಾರ್ವಜನಿಕರು ಶಾಸಕರನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ. ನಾಯಕನಹಟ್ಟಿ ಪಟ್ಟಣದ ಕೇಂದ್ರ ಸ್ಥಳವಾದ ಬಸ್ ನಿಲ್ದಾಣದ ಸಮೀಪದಲ್ಲಿ ಈ ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿದೆ. ಪಟ್ಟಣಕ್ಕೆ ಪ್ರತಿದಿನ ಸಾವಿರಾರು ಜನರು ವ್ಯಾಪಾರ, ವಹಿವಾಟು, ಕೂಲಿ ಕೆಲಸ, ಶಾಲಾ ಕಾಲೇಜುಗಳಿಗಾಗಿ ಬರುತ್ತಾರೆ. ಅಂತಹವರಿಗೆ ಕಡಿಮೆ ದರದಲ್ಲಿ ಉತ್ತಮ ಆಹಾರ ಸಿಗಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.ಈ ಕ್ಯಾಂಟೀನ್ ನಲ್ಲಿ ಬೆಳಗಿನ ಉಪಹಾರ ಕೇವಲ 5 ರೂಪಾಯಿಗೆ ಸಿಗುತ್ತಿದ್ದು, ಮಧ್ಯಾಹ್ನದ ಅವಳಿ ಊಟ 10 ರೂಪಾಯಿಗೆ ಮತ್ತು ರಾತ್ರಿ ಊಟ 10 ರೂಪಾಯಿಗೆ ಸಿಗುತ್ತಿದೆ.

 news_1793036156_1_704.webp

 

ಹಿಂದೆ ನಾಯಕನಹಟ್ಟಿಯಲ್ಲಿ ಅಭಿವೃದ್ಧಿ ಎಂಬುವುದು ಇರಲಿಲ್ಲ ಈ ಶಾಸಕರು ಬಂದಮೇಲೆ ಪಟ್ಟಣ ನೋಡಲು ಸುಂದರವಾಗಿದೆ. ನಾಯಕನಹಟ್ಟಿ ಪಟ್ಟಣದಲ್ಲಿ ವಿದ್ಯುತ್ ದೀಪಗಳು ಕುಡಿಯುವ ನೀರು ಸರಿಯಾಗಿ ಬರುತ್ತಿದೆ. ಶಾಸಕರ ಕೆಲಸ ನಿಜಕ್ಕು ಶ್ಲಾಘನಿಯ ಎಂದು ಸ್ಥಳಿಯ ವ್ಯಾಪಾರಿಗಳು ಹೇಳಿದರು.

ಕೇವಲ 10 ರೂಪಾಯಿಗೆ ಅನ್ನ, ಸಾಂಬಾರ್, ಪಲ್ಯ ಹಾಗೂ ಮೊಸರನ್ನವನ್ನು ನೀಡಲಾಗುತ್ತಿದ್ದು, ಆಹಾರದ ಗುಣಮಟ್ಟವೂ ಉತ್ತಮವಾಗಿರುವುದರಿಂದ ಜನರು ಖುಷಿಯಿಂದ ಊಟ ಮಾಡುತ್ತಿದ್ದಾರೆ. ಸ್ಥಳೀಯ ನಾಗರಿಕರು ಮಾತನಾಡಿ, "ಹಿಂದೆ ಹೋಟೆಲ್ ಗಳಲ್ಲಿ ಒಂದು ಹೊತ್ತಿನ ಊಟ ಮಾಡಲು ಕನಿಷ್ಠ 80 ರಿಂದ 100 ರೂಪಾಯಿ ಬೇಕಾಗುತ್ತಿತ್ತು. ದಿನಗೂಲಿ ಮಾಡುವ ನಮಗೆ ಅದು ದೊಡ್ಡ ಹೊರೆಯಾಗಿತ್ತು. ಕೆಲವೊಮ್ಮೆ ಊಟವಿಲ್ಲದೆ ಕೆಲಸ ಮಾಡಬೇಕಿತ್ತು. ಈಗ ಇಂದಿರಾ ಕ್ಯಾಂಟೀನ್ ಬಂದಿರುವುದರಿಂದ ಕೇವಲ 10 ರೂಪಾಯಿಗೆ ಹೊಟ್ಟೆ ತುಂಬಾ ಊಟ ಸಿಗುತ್ತಿದೆ. ಇದು ನಮ್ಮಂತ ಬಡವರಿಗೆ ದೇವರ ವರದಾನವಿದ್ದಂತೆ. ಇದನ್ನು ತಂದುಕೊಟ್ಟ ಶಾಸಕರಿಗೆ ನಾವು ಚಿರಋಣಿಗಳು" ಎಂದು ಹೇಳಿದರು."ನಾಯಕನಹಟ್ಟಿ ಪಟ್ಟಣಕ್ಕೆ ಇಂದಿರಾ ಕ್ಯಾಂಟೀನ್ ಬೇಕು ಎಂದು ನಾವು ಬಹಳ ದಿನಗಳಿಂದ ಶಾಸಕರಲ್ಲಿ ಮನವಿ ಮಾಡಿದ್ದೆವು. ನಮ್ಮ ಮನವಿಗೆ ತಕ್ಷಣ ಸ್ಪಂದಿಸಿದ ಶಾಸಕರು, ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಿ ಕ್ಯಾಂಟೀನ್ ಮಂಜೂರು ಮಾಡಿಸಿದ್ದಾರೆ. ಅವರ ಜನಪರ ಕಾಳಜಿ, ಬಡವರ ಬಗ್ಗೆ ಇರುವ ಕಾಳಜಿಗೆ ಇದೇ ಸಾಕ್ಷಿ" ಎಂದು ಮತ್ತೊಬ್ಬರು ಹೇಳಿದರು.ಈ ಕ್ಯಾಂಟೀನ್ ನಿಂದ ಪ್ರತಿದಿನ 500ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಆಟೋ ಚಾಲಕರು, ಲಾರಿ ಚಾಲಕರು, ಕಟ್ಟಡ ಕಾರ್ಮಿಕರು, ರೈತರು, ವಿದ್ಯಾರ್ಥಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಹಸಿವು ಮುಕ್ತ ಕರ್ನಾಟಕ ಮಾಡುವ ಸರ್ಕಾರದ ಕನಸು ನಾಯಕನಹಟ್ಟಿಯಲ್ಲಿ ನನಸಾಗುತ್ತಿದೆ. ಬಡವರ ಹಸಿವು ನೀಗಿಸುವ ಇಂತಹ ಜನಪರ ಕೆಲಸ ಮಾಡುತ್ತಿರುವ ಶಾಸಕರಿಗೆ ಪಟ್ಟಣದ ಜನರು ಧನ್ಯವಾದ ಹೇಳಿದ್ದಾರೆ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೀಪಗಳ ಹಬ್ಬದ ಮಹತ್ವ, ಆಚರಣೆಯ ವಿಧಿ ವಿಧಾನ ಇಲ್ಲಿದೆಕೋಡಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಇಟಲಿಯ ಹೈಡ್ರೋನಿಕ್' ಸಂಸ್ಥೆ ಹಾಗೂ 'ಲಿಫ್ಟ್ ಎಕ್ಸ್ಪೋಗೆ' ಡಾ. ಬಿ.ಎಂ. ಉಮೇಶ್ ಕುಮಾರ್ ಭೇಟಿಮಕ್ಕಳನ್ನು ಮೊಬೈಲ್ನಿಂದ ದೂರವಿಟ್ಟು ಕ್ರೀಡೆಗಳಲ್ಲಿ ತೊಡಗಿಸಿ: ಬಸವರಾಜ್ ಶೀಲವಂತರ್ ಕರೆನಕಲಿ ಮತದಾರರಿಗೆ ರಕ್ಷಣೆ ನೀಡುವುದೇ ಎಸ್ಐಆರ್ ವಿರೋಧಿಗಳ ಅಜೆಂಡಾ ಅಲ್ಲವೇ?” – ಪ್ರಭಾಕರ್ ರಾಗಿ ಅಂಗಡಿಗೆ ಬಂದವರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆಹಳ್ಳಿ-ಹಳ್ಳಿಗೆ ತೆರಳಿ ಕಾಂಗ್ರೆಸ್ ಭದ್ರಕೋಟೆ ನಿರ್ಮಿಸುತ್ತಿರುವ ಡಾ. ಯೋಗೇಶ್ ಬಾಬುವಾಲ್ಮೀಕಿನಾಯಕ ಸಮಾಜದವರು ಖಡ್ಗದ ಬದಲಾಗಿ ಶಿಕ್ಷಣದ ಅಸ್ತ್ರಹಿಡಿಯಿರಿಚಲನಚಿತ್ರ ನಟ, ನಿರ್ದೇಶಕ ಚಂದ್ರಹಾಸ ಆಳ್ವರಿಗೆ ಸನ್ಮಾನಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾದಲ್ಲಿ ಫ್ರೆಷರ್ಸ್ ಡೇ ಹಾಗೂ ಕನ್ನಡ ರಾಜ್ಯೋತ್ಸವ