LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಸುಃಖ ಮತ್ತು ದುಃಖಗಳಿಂದ ಬದಲಾವಣೆಗೆ ಪ್ರೇರಣೆ : ಶಿವಶಾಂತವೀರ ಶರಣರು

ಬಳ್ಳಾರಿ :  ಜೀವನದಲ್ಲಿ ಎದುರಾಗುವ ಸುಃಖ ಮತ್ತು ದುಃಖಗಳು ನಮ್ಮಲ್ಲಿ ಬದಲಾವಣೆಗೆ ಕಾರಣ ಆಗಲಿವೆ ಎಂದು ಪರಮ ಪೂಜ್ಯ ಶಿವಶಾಂತವೀರ ಶರಣರು ಆಶೀರ್ವದಿಸಿದ್ದಾರೆ.

 

ಬಸವಭವನದಲ್ಲಿ ಭಾನುವಾರ ನಡೆದ ಚಿಕೇನಕೊಪ್ಪದ ಶ್ರೀ ಚನ್ನವೀರz ಶರಣರ 31ನೇ ಪುಣ್ಯಸ್ಮರಣೋತ್ಸವ ಹಾಗೂ 1008 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಶ್ರೀ ಶಿವಶಾಂತವೀರ ಶರಣರ ತುಲಾಭಾರದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

 

ನದಿಯ ನೀರು ಸಾಗಲು ಬಲ ದಂಡೆ ಮತ್ತು ಎಡ ದಂಡೆ ಬೇಕು. ಅದೇ ರೀತಿಯಲ್ಲಿ ನಮ್ಮೆಲ್ಲರ ಬದುಕಿನ ನದಿ ಸಾಗಬೇಕು ಎಂದಲ್ಲಿ ಸುಃಖ ಮತ್ತು ದುಃಖದ ದಂಡೆಗಳು ಅವಶ್ಯ. ಸುಃಖ ಮತ್ತು ದುಃಖದ ದಂಡೆಗಳ ಮಧ್ಯೆ ನಮ್ಮೆಲ್ಲರ ಜೀವನ ನೀರಿನಂತೆ ಸಾಗಿದಾಗಲೇ ಬದುಕು ಸಾಗುತ್ತಿದೆ ಎಂದರ್ಥ ಎಂದರು.

 

ಭೌತಿಕ ವಸ್ತುಗಳು ನಾನಾ ರೀತಿಯಲ್ಲಿ ಬದಲಾಗುತ್ತವೆ. ಭೌತಿಕ ವಿಷಯಗಳು ರೂಪಾಂತರಗೊಳ್ಳುತ್ತವೆ. ಭೌತಿಕ ವಸ್ತುಗಳು ಮತ್ತು ವಿಷಯಗಳನ್ನು ತಿರಸ್ಕರಿಸಿದ್ದ ಚನ್ನವೀರ ಶರಣರು, ನಮ್ಮೆಲ್ಲರ ನಡುವಿನ ಆರಾಧ್ಯದೈವ ಆಗಿದ್ದಾರೆ. ಚನ್ನವೀರ ಶರಣರ ರೀತಿಯಲ್ಲಿ ಪ್ರತಿಯೊಬ್ಬರೂ ಜೀವನದಲ್ಲಿ ಬದುಕಿನ ಮೌಲ್ಯವರ್ಧನೆ ಮಾಡಿಕೊಳ್ಳಬೇಕು ಎಂದರು.

 

ನಮ್ಮೆಲ್ಲರಲ್ಲೂ ಅದ್ಭುತವಾದ ಶಕ್ತಿಯನ್ನು - ಸಾಮಥ್ರ್ಯವನ್ನು ಸೃಷ್ಠಿಯು ಕೊಟ್ಟಿದೆ. ನಮ್ಮಲ್ಲಿರುವ ಶಕ್ತಿ ಮತ್ತು ಸಾಮಥ್ರ್ಯವನ್ನು ಸದ್ವಿನಿಯೋಗ ಮಾಡಿಕೊಂಡು ಬಡವರಿಗಾಗಿ, ಸಮಾಜಕ್ಕಾಗಿ, ಸಮೀಪದವರ ಒಳಿತಿಗಾಗಿ ಮತ್ತು ಅಗತ್ಯ ಇರುವವರ ನೆರವಿಗಾಗಿ ಸ್ಪಂದಿಸುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದರು.

 

 

ಆಕಾಶ, ವಾಯು, ಅಗ್ನಿ, ನೀರು ಮತ್ತು ಭೂಮಿಯನ್ನು ದೇವರು ನಮಗೆಲ್ಲರಿಗೂ ನೀಡಿದ್ದಾನೆ. ನಮಗೆಲ್ಲರಿಗೂ ನವರಂಧ್ರಗಳನ್ನು ನಿರ್ಮಾಣ ಮಾಡಿದ್ದಾನೆ. ನವರಂಧ್ರಗಳಲ್ಲಿ ಒಂದು ಕ್ಷಣಹೊತ್ತು ಯಾವುದಾದರೂ ಒಂದನ್ನು ದೇವರು ಕ್ಷಣಮಾತ್ರ ನಿಲ್ಲಿಸಿದರೆ ಬದುಕಲು ಸಾಧ್ಯವಿಲ್ಲ ಎಂದರು.

news_1782062515_1_994.webp

 

ಬಳೂಟಗಿಯ ಸಿದ್ದೇಶ್ವರ ಶಾಸ್ತ್ರಿಗಳು, ಚನ್ನವೀರ ಶರಣರು ಮತ್ತು ಅಲ್ಲೀಪುರದ ಮಹಾದೇವ ತಾತನವರು ಸಮಕಾಲೀನರು. ಜಾತ್ಯಾತೀತರಾಗಿದ್ದ ಚನ್ನವೀರ ಶರಣರು ಸಮಾಜಮುಖಿ ಚಿಂತನೆಗಳ ಮೂಲಕ ನಮ್ಮೆಲ್ಲರ ನಡುವೆ ಚೈತನ್ಯವಂತರಾಗಿ ಈಗಲೂ ಇದ್ದಾರೆ. ಮೌನ, ಕಾಲ್ನಡಿಗೆ, ತಪಸ್ಸುಗಳ ಮೂಲಕ ಭಕ್ತರ ಮನಸ್ಸಲ್ಲಿ ಅಚ್ಚಳಿಯದೇ ಇರುವ ಚನ್ನವೀರ ಶರಣರು, ಮಾಡಿದ ಪವಾಡಗಳು, ತೋರಿದ ವಿಸ್ಮಯಗಳು ಸ್ಮರಣೀಯ ಎಂದರು.

 

ಸಿದ್ದಾಪುರ ಶಿವಲಿಂಗ ಶಾಸ್ತ್ರಿಗಳು, ಚನ್ನವೀರ ಶರಣರ ಪವಾಡಗಳು ಮತ್ತು ಧಾರ್ಮಿಕ ಶಕ್ತಿ, ಆಧ್ಯಾತ್ಮಿಕ ಚೈತನ್ಯಗಳ ಕುರಿತು ಪ್ರಾಸ್ತಾವಿಕ ಭಾಷಣ ಮಾಡಿ, ಸ್ವಾಗತ ಕೋರಿದರು.

 

ವಂದಲಿಯ ಪಂಡಿತ ವಿರೂಪಾಕ್ಷಯ್ಯ ಗವಾಯಿಗಳು ಸಂಗೀತ ಸೇವೆ ಸಲ್ಲಿಸಿದರು. ಕೊಪ್ಪಳ ಗವಿಮಠದ ಸಂಗೀತ ಶಿಕ್ಷಕರಾಗಿರುವ ವೀರೇಶ್ ಹಿಟ್ನಾಳ್ ಅವರು ಹಾರ್ಮೋನಿಯಂ ಸಾಥ್ ನೀಡಿದರು. ಗಂಗಾವತಿಯ ರಾಘವೇಂದ್ರ ಅವರು ತಬಲಾ ಸಾಥ್ ನೀಡಿದರು.

 

ಬಸವರಾಜ್ ಅಮಾತಿ ಅವರು ಕಾರ್ಯಕ್ರಮ ನಿರೂಪಿಸಿದರು. ಹದಿಮೂರು ಭಕ್ತಾಧಿಗಳು ಮತ್ತು ಅವರ ಕುಟುಂಬದ ಸದಸ್ಯರು ತುಲಾಭಾರ ಸೇವೆಯನ್ನು ಸಲ್ಲಿಸಿದರು.

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST