LIVE TV StateNationalPoliticsCrimeEntertainmentSportsEducationFINANCE & TAXATION
Districts Bangalore

ಕನ್ನಡ ಕಾರ್ಯಕ್ರಮ, ಜಯಂತಿಗಳು ನಡೆನುಡಿಯಲ್ಲಿ ಅನುಸರಿಸುವಂತಾಗಬೇಕು: ಸಾಹಿತಿ ಸತ್ಯಮೂರ್ತಿ ಗೂಗಿ

ಸಾಹಿತಿ 'ಡಾ. ಸತ್ಯಮೂರ್ತಿ ಗೂಗಿ' ರವರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಸದ್ಭಾವನ ಪ್ರಶಸ್ತಿ ಪ್ರದಾನ

 

 

ಬೆಂಗಳೂರು: ಕನ್ನಡದ ಕಾರ್ಯಕ್ರಮಗಳು, ಮಹಾತ್ಮರ ಜಯಂತಿಗಳು ಕೇವಲ ಆಚರಣೆ ಹಾಗೂ ಪ್ರಶಸ್ತಿಗಳನ್ನು ನೀಡುವುದಕ್ಕೆ ಸೀಮಿತವಾಗಿರದೇ, ಬದಲಾಗಿ ಕನ್ನಡವನ್ನು ದಿನನಿತ್ಯದಲ್ಲಿ ಬಳಸುವ ಮೂಲಕ ಮಹಾತ್ಮರ ತತ್ವ ಆದರ್ಶಗಳನ್ನು ಜೀವನದಲ್ಲಿ ಅನುಸರಿಸಿ ನಡೆದಾಗ ಮಾತ್ರ ಜಯಂತಿಗಳಿಗೆ ನೈಜ ಅರ್ಥ ಸಿಗುತ್ತದೆ ಎಂದು ಖ್ಯಾತ ಸಾಹಿತಿ ಡಾ. ಸತ್ಯಮೂರ್ತಿ ಗೂಗಿ ಅಭಿಪ್ರಾಯಪಟ್ಟರು.

 

ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸುವರ್ಣ ಕರ್ನಾಟಕ ಪ್ರೆಸ್ ಅಸೋಸಿಯೇಷನ್ ಹಾಗೂ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ "ಮಹಾತ್ಮ ಗಾಂಧಿ ರಾಷ್ಟ್ರೀಯ ಸದ್ಭಾವನ ಪ್ರಶಸ್ತಿ" ಸ್ವೀಕರಿಸಿ ಅವರು ಮಾತನಾಡಿದರು.

 

ಇಂದು ಕನ್ನಡದ ಕಾರ್ಯಕ್ರಮಗಳು, ಮಹಾತ್ಮರ ಜಯಂತಿಗಳು ಕೇವಲ ಪ್ರಶಸ್ತಿ ಹಾಗೂ ಸನ್ಮಾನಗಳಿಗೆ ಮಾತ್ರವೇ ಸೀಮಿತವಾಗಿದ್ದು, ಸಮಾಜದಲ್ಲಿ ಅವುಗಳ ಪ್ರಾಮುಖ್ಯತೆ ಕ್ಷಿಣಿಸುತ್ತಾ  ಬರುತ್ತಿರುವುದು ನೋವಿನ ಸಂಗತಿ ಎಂದು ಗೂಗಿ ವಿಷಾದ ವ್ಯಕ್ತಪಡಿಸಿದರು.

 

ಬೆಂಗಳೂರು ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಸುವರ್ಣ ಕರ್ನಾಟಕ ಪ್ರೆಸ್ ಅಸೋಸಿಯೇಷನ್ ಹಾಗೂ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಡಾ. ಸತ್ಯಮೂರ್ತಿ ಗೂಗಿ ಅವರಿಗೆ ಚಿತ್ರನಟಿ  ಸ್ನೇಹ ಕೆ ಅವರು "ಮಹಾತ್ಮ ಗಾಂಧಿ ರಾಷ್ಟ್ರೀಯ ಸದ್ಭಾವನ ಪ್ರಶಸ್ತಿ" ನೀಡಿ ಸನ್ಮಾನಿಸಿದರು.

 

ಇದೇ ಸಮಯದಲ್ಲಿ ಗಣ್ಯರಾದ ಡಾ. ಮಂಜುಳಾ ಪಾವಗಡ, ಚಿತ್ರ ನಟಿ ಸ್ನೇಹ, ರಕ್ತದಾನಿ ತ್ಯಾಗರಾಜು, ಗಾಯಕ ಶಶಿಧರ್ ಕೋಟೆ, ವೇಣು ಮಾಧವ್, ಕೆ.ಎಸ್.ರಾಜೇಗೌಡ, ಸುನೀಲ್ ಪವಾರ್ ಸೇರಿದಂತೆ ಹಲವು ಸಾಹಿತ್ಯಾಸಕ್ತರು ಮತ್ತಿತರರು ಉಪಸ್ಥಿತರಿದ್ದರು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯ ದಶಮಿಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ದಸರಾ ಹಾಗೂ ಆಯುಧ ಪೂಜೆಜಾತಿಭೇದವಿಲ್ಲದೆ ದಲಿತರ ಮನೆಯಲ್ಲಿ ಊಟ ಸವಿದ ಡಾ. ಬಿ. ಯೋಗೇಶ್ ಡಿಸ್ಕವರಿ ವಾಹಿನಿಯಲ್ಲಿ ಕೆಐಐಟಿ ಸಾಧನೆ ಬಣ್ಣನೆ ಕನ್ನಡಿಗರು ವಿಶಾಲತೆ, ಸಾಮರಸ್ಯ ಉಳ್ಳವರಾಗಿರುವುದರಿಂದಲೇ ಕನ್ನಡಕ್ಕೆ ಕಂಟಕ!ಹಾಡಿನ ಚಿತ್ರೀಕರಣದೊಂದಿಗೆ ‘ಚಂದ್ರಗಿರಿ’ ಚಿತ್ರೀಕರಣ ಮುಕ್ತಾಯಸರ್ವೋದಯ ಮಹಾವಿದ್ಯಾಲಯದ ಸೌಕರ್ಯ, ಶೈಕ್ಷಣಿಕ ಸಾಧನೆಗೆ ದಾವಣಗೆರೆ ವಿವಿ ಉಪಕುಲಪತಿ ಮೆಚ್ಚುಗೆಬಡತನ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನಾಚರಣೆ ಬೆಂಗಳೂರಿನಲ್ಲಿ ಐಸಿಎಸ್ಐ ಇನ್ವೆಸ್ಟ್ ಇಂಡಿಯಾ ಶೃಂಗಸಭೆ ಆಯೋಜನೆಎಚ್.ಡಿ. ಕುಮಾರಸ್ವಾಮಿ ವಿವಾದಾತ್ಮಕ ಮಾತುಗಳಿಗೆ ಖಂಡನೆ, ಕ್ಷಮೆಯಾಚನೆಗೆ ಆಗ್ರಹ: ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಅರ್ಜುನ್ ಗೋಪಾಲಯ್ಯ