LIVE TV StateNationalPoliticsCrimeEntertainmentSportsEducationFINANCE & TAXATION
Districts

ಬೈಕ್ ಅಪಘಾತದಲ್ಲಿ ಕರಾಟೆ ಪಟು ದಾಸರ ಸ್ವಾಮಿ ಸಾವು.

ಮರಿಯಮ್ಮನಹಳ್ಳಿ : ಪಟ್ಟಣದ ಕರಾಟೆ ಪಟು ಪೈಂಟರ್ ದಾಸರ ಸ್ವಾಮಿ 30ವರ್ಷ ವಯಸ್ಸಿನವರಾಗಿದ್ದು ರಸ್ತೆ ಅಪಘಾತದಲ್ಲಿ ಅಪಘಾತಕ್ಕಿಡಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಸಂಧರ್ಭದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಮೃತರು ಕುಟುಂಬದ ಹಿರಿಯ ಮಗನಾಗಿ ಒಬ್ಬನೇ ಗಂಡು ಮಗನಾಗಿದ್ದನ. ಈತನಿಗೆ ಪತ್ನಿ ಮತ್ತು 3ವರ್ಷದ ಒಂದು ಹೆಣ್ಣು ಮಗು ಇದ್ದು. ಪತ್ನಿ ಪ್ರಸ್ತುತ 9 ತಿಂಗಳ ಗರ್ಭಿಣಿಯಾಗಿದ್ದಾರೆ. ಮೃತರು ತಂದೆ, ತಾಯಿ ಇಬ್ಬರು ಸಹೋದರಿಯರನ್ನು ಹೊಂದಿದ್ದು ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.



ಪಟ್ಟಣದ 1ನೇ ವಾರ್ಡಿನ ಯುವಕ ದಾಸರ ಸ್ವಾಮಿ ಕರಾಟೆ ಪಟುವಾಗಿದ್ದನು, ಈತನು ವೃತ್ತಿಯಲ್ಲಿ ಮನೆ ಪೈಂಟಿಂಗ್ ಕೆಲಸ ಮಾಡುತ್ತಿದ್ದನು. ಸ್ಥಳೀಯವಾಗಿ ಜನರೊಂದಿಗೆ ಸದಾ ನಗುಮುಖದೊಂದಿಗೆ ವ್ಯವಹರಿಸುತ್ತ ಉತ್ತಮ ಜನ ಸಂಪರ್ಕಹೊಂದಿ ಅಪಾರ ಗೌರವ, ವಿಶ್ವಾಸ ಹೊಂದಿದ್ದನು. ಈತನ ಸಾವಿನ ಸುದ್ದಿ ತಿಳಿದು ವಾರ್ಡಿನ ಜನರಲ್ಲಿ ಆಕ್ರಂದನ ಮುಗಿಲು ಮುಟ್ಟಿತು. ಮೃತ ದೇಹವನ್ನು ಮರಿಯಮ್ಮನಹಳ್ಳಿಯ ಸ್ವಗೃಹದ ಬಳಿ ತರುತ್ತಿದ್ದಂತೆ ಜನರು ಜಮಾವಣೆಗೊಂಡು ಸ್ನೇಹ ಬಳಗ, ಯುವಕರ, ಸ್ಥಳೀಯರ ಮತ್ತು ಕುಟುಂಬದವರ ಕಣ್ಣೀರ ಧಾರೆ ಏಳತಿರದಂತಿತ್ತು.

 

ಘಟನೆ : ಮೃತರು ಹೆಂಡತಿಯ ಸಂಬಂದಿಕರ ಊರು ಸಂಡೂರು ತಾಲ್ಲೂಕು ಅಗ್ರಹಾರ ಗ್ರಾಮಕ್ಕೆ ಹೋಗಬೇಕೆಂದು ದಿನಾಂಕ : 29.07.2025 ರಂದು ಸಂಜೆ 7.30 ರ ಸುಮಾರಿಗೆ ಮರಿಯಮ್ಮನಹಳ್ಳಿಯಿಂದ ಕೂಡ್ಲಿಗಿ ಮೂಲಕ ತನ್ನ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಹೋಗುತ್ತಿರುವಾಗ ನಿಯಂತ್ರಣ ತಪ್ಪಿ ಎ.ಡಿ. ಗುಡ್ಡ ಗ್ರಾಮದ ಆದರ್ಶ ಶಾಲೆಯ ಸಮೀಪ ಇರುವ ರಸ್ತೆ ತಿರುವಿನಲ್ಲಿ ರಸ್ತೆಯ ಪಕ್ಕಕ್ಕೆ ಹೋಗಿ ಬೈಕ್ ನೊಂದಿಗೆ ಬಿದ್ದು ತಲೆಯ ಹಿಂಬಾಗಕ್ಕೆ ತೀರ್ವವಾದ ಒಳಪೆಟ್ಟು ಮತ್ತು ರಕ್ತಗಾಯವಾಗಿ ಚಿಕಿತ್ಸೆಗಾಗಿ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದರು. ದಿನಾಂಕ : 30.7.2025 ರಂದು ಇನ್ನೂ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಹೋಗುತ್ತಿರುವಾಗ  ರಾತ್ರಿ 9:45ರ ಗಂಟೆಗೆ ಮಾರ್ಗದ ಮಧ್ಯ ಮೃತಪಟ್ಟಿದ್ದಾಗಿ ಕುಟುಂಬಸ್ಥರಿಂದ ತಿಳಿದು ಬಂದಿದೆ. ಈ ಕುರಿತು ಕೂಡ್ಲಿಗಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ