LIVE TV StateNationalPoliticsCrimeEntertainmentSportsEducationFINANCE & TAXATION
Districts

ಸಂಭ್ರಮದಿಂದ ಜರುಗಿದ ಕೋಟೆ ಮಲ್ಲೇಶ್ವರ ಸ್ವಾಮಿ ರಥೋತ್ಸವ

ಬಳ್ಳಾರಿ : ‘ಬಳ್ಳಾರಿ ತೇರು’ ಎಂದೇ ಖ್ಯಾತವಾಗಿರುವ ಇಲ್ಲಿನ ಕೋಟೆ ಮಲ್ಲೇಶ್ವರ ರಥೋತ್ಸವವು ಭಾನುವಾರ ಸಂಜೆ ಸಾವಿರಾರು ಭಕ್ತರ ಶ್ರದ್ಧೆ ಮತ್ತು ಹರ್ಷೋದ್ಗಾರಗಳ ನಡುವೆ ವಿಜೃಂಭಣೆಯಿಂದ ನಡೆಯಿತು, ನಗರದ ತೇರು ಬಜಾರು ರಸ್ತೆಯಲ್ಲಿರುವ ಸಣ್ಣ ಮಲ್ಲೇಶ್ವರ ಗುಡಿ ಮುಂದೆ ಬೆಳಿಗ್ಗೆಯಿಂದಲೇ ರಥಕ್ಕೆ ವಿಶೇಷ ಪೂಜೆ ನಡೆಯಿತು.

 

ಬೆಳಿಗ್ಗೆ 11.15ರ ವೇಳೆಗೆ ಭಕ್ತರು ಮಡಿ ತೇರನ್ನು ಎಳೆದರು.  ಸಂಜೆ 4.15ರ ವೇಳೆಗೆ, ಇನ್ನೂ ಚುರುಕು ಮುಟ್ಟಿಸುವಂತಿದ್ದ ಬಿಸಿಲ ನಡುವೆಯೇ ಉತ್ಸವಕ್ಕೆ ಚಾಲನೆ ದೊರಕಿತು. ನಗರದ ಭಕ್ತರೊಂದಿಗೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಭಕ್ತರ ಸಂಭ್ರಮದ ನಡುವೆ ತೇರು ಸಾಗಿತು.



ಬ್ರೂಸ್‌ಪೇಟೆ ಠಾಣೆ ಮುಂಭಾಗ ದಿಂದ ಮುಂದುವರಿದ ತೇರು ದೊಡ್ಡ ಮಾರುಕಟ್ಟೆ, ನೀಲಕಂಠೇಶ್ವರ ಗುಡಿ ಮೂಲಕ ಕಣೇಕಲ್ಲು ಬಸ್‌ ನಿಲ್ದಾಣ ಸಮೀಪದವರೆಗೂ ಸಾಗಿ ಹಿಂದಿರುಗಿತು. ಬಜಾರು ರಸ್ತೆಯ ಅಕ್ಕ ಪಕ್ಕದಲ್ಲಿ, ಕಟ್ಟಡಗಳ ಮೇಲ್ಭಾಗದಲ್ಲಿ ನಿಂತು ಭಕ್ತರು ತೇರಿಗೆ ಹೂವು ಹಣ್ಣು  ಎಸೆದು ಹರಕೆ ತೀರಿಸಿದರು.

 

ತಳ್ಳಾಟ: ತೇರಿನ ಸುತ್ತಮುತ್ತ ಹೆಚ್ಚಿನ ಭಕ್ತರು ಸಾಗುತ್ತಿದ್ದ ಪರಿಣಾಮವಾಗಿ ತಳ್ಳಾಟ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ತೇರಿಗೆ ಎಸೆದ ಬಾಳೆಹಣ್ಣುಗಳು ಬಿದ್ದು ರಸ್ತೆಯಲ್ಲಿ ಜಾರಿಕೆ ಉಂಟಾಗಿದ್ದರಿಂದ ಕೆಲವು ಭಕ್ತರು ಬಿದ್ದ ಘಟನೆಯೂ ನಡೆಯಿತು.

ತೇರು ಬಜಾರಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲೂ ಜನ ಮತ್ತು ವಾಹನ ದಟ್ಟಣೆ ಹೆಚ್ಚಾಗಿತ್ತು. ಇನ್ನೂ ಬೆಳಗ್ಗೆ ಮಡಿ ತೇರು ಎಳೆಯುವ ಸಮಯದಲ್ಲಿ ಪಾಲಿಕೆ ಮೇಯರ್ ಪಿ.ಗಾದೆಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಅಂತೆಯೇ ಸಂಜೆ ನಡೆದ ಬ್ರಹ್ಮ ರಥೋತ್ಸವದ ವೇಳೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಭೇಟಿ ನೀಡಿ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ, ಸ್ವಾಮಿಯ ಆಶೀರ್ವಾದ ಪಡೆದರು.

 

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ