LIVE TV StateNationalPoliticsInternationalCrimeEntertainmentSportsEducationFINANCE & TAXATION
Districts Bellary | State News

ಸಚಿವ ಬಿ. ನಾಗೇಂದ್ರ ರಾಜೀನಾಮೆ: ಮನುವಾದಿಗಳ ವಿರುದ್ಧ ಟೀಕಾಪ್ರಹಾರ

ಬೆಂಗಳೂರು:  ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಬಿ. ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬಿ.ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿಗರ ವಿರುದ್ಧ ಹಿಗ್ಗಾಮುಗ್ಗ ವಾಗ್ಧಾಳಿಯನ್ನು ನಡೆಸಿದರು.

ಸದನ ನಡೆಯಲು ಬಿಡಲಾರದೇ, ರಾಜ್ಯದ ಜ್ವಲ್ವಂತ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಅವಕಾಶ ಕಲ್ಪಿಸದೇ ಪ್ರತಿಪಕ್ಷ ನಾಯಕರು ಸಂವಿಧಾನ ವಿರೋಧಿಗಳಮತೆ ಕಂಡು ಬಂದಿದ್ದಾರೆ. ವಿರೋಧ ಪಕ್ಷದವರು ಈಗಲೂ ಮನುಸ್ಮೃತಿಯನ್ನೇ ಜಾರಿ ಮಾಡಲು  ಪ್ರಯತ್ನಿಸುತ್ತಿದ್ದಾರೆ. ಆದರೇ ಇದು ಪುರಾಣ, ವೇದ ಕಾಲವಲ್ಲ. ಇದು ಸಂವಿಧಾನ ಕಾಲ, ಬಾಬ ಸಾಹೇಬ್ ಯುಗ ಅಂತ ಅವರಿಗೆ ಗೊತ್ತಿಲ್ಲ ಎಂದರು.

ಉತ್ತರಾಖಾಂಡದಲ್ಲಿ ಶಂಭುಕ ಹತ್ಯೆ ಆದನೋ ಆದರೇ, ಈಗ ಅದು ಸಾಧ್ಯವಿಲ್ಲ. ಅದನ್ನು ರಕ್ಷಣೆ ಮಾಡಲು ನ್ಯಾಯದೇವತೆ ಇದೆ. ಮನುಸ್ಮೃತಿಗಳೆಲ್ಲ ಸೇರಿ ಸದನವನ್ನು ಹಾಳು ಮಾಡಿದರು. ಶೂದ್ರರು, ದಲಿತರು, ಮಹಿಳೆಯರು, ಆದಿವಾಸಿಗಳು, ಅಲ್ವ ಸಂಖ್ಯಾತರು ಸ್ವತಂತ್ರವಾಗಿ ಬದುಕಲೇ ಬಾರದು ಎಂಬುದು ಬಿಜೆಪಿ  ನಾಯಕರ ಧೋರಣೆಯಾಗಿದೆ ಎಂದು ಕಿಡಿಕಾರಿದರು.

 

ವಿರೋಧ ಪಕ್ಷಗಳಿಂದ ಕುತಂತ್ರ ರಾಜಕಾರಣ ಮಾಡುತ್ತಿದೆ. ನೋಟಿಸ್ ಕೊಡಲು ಮನವಿ ಮಾಡಿಕೊಳ್ಳಲಾಗಿತ್ತು. ಆದರೇ ಅದನ್ನು ಕೇಳಲಿಲ್ಲ. ರಾಜ್ಯದಲ್ಲಿ ಬರಗಾಲ, ಕೆಪಿಎಸ್ಸಿ ಹಗರಣ, ಕಾವೇರಿ ವಿವಾದ, ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆಗೆ ಸದನದಲ್ಲಿ ಅವಕಾಶವೇ ನೀಡಲಿಲ್ಲ. ವಿನಾಕಾರಣ ವಿರೋಧ ಪಕ್ಷಗಳು ಕುತಂತ್ರ ರಾಜಕಾರಣ ಮಾಡಲಾಗುತ್ತಿದೆ ಎಂಬುದಾಗಿ ವಾಗ್ಧಾಳಿ ನಡೆಸಿದರು.

ವಿಷಯವೇ ಇಲ್ಲದೇ ಪಾದಯಾತ್ರೆಯನ್ನು ಬಿಜೆಪಿಯವರು ಮಾಡಲು ಹೊರಟಿದ್ದಾರೆ. ನಿಮ್ಮನ್ನು ಈ ರಾಜ್ಯದ ಜನರು ನೋಡುತ್ತಿದ್ದಾರೆ. ಇದು ಒಳ್ಳೇಯದಾಗಲ್ಲ. ಒಂದು ಒಬ್ಬ ದಲಿತ, ಆದಿವಾಸಿ ಸಮುದಾಯದವರು ಮೇಲೆ ಬರಬಾರದು ಎಂಬುದಾಗಿ ಹೀಗೆ ಮಾಡುತ್ತಿದ್ದಾರೆ. ನಿಜವಾಗಿಯೂ ನಿಮಗೆ ಒಳ್ಳೇದಾಗುವುದಿಲ್ಲ. 2024ರಲ್ಲಿ ಪಕ್ಷಕ್ಕೆ ಮುಜುಗರವಾಗಬಾರದು ಎಂಬುದಾಗಿ ರಾಜೀನಾಮೆ ನೀಡಲಾಯಿತು. ಎಸ್‌ಐಟಿ, ಸಿಐಡಿ ಅವರಿಂದ ತನಿಖೆ ನಡೆಸಲಾಯಿತು. ನಮ್ಮ ರಾಜ್ಯದ ಪೊಲೀಸರ ಮೇಲೆ ಗೌರವದಿಂದ ತನಿಖೆ ನಡೆಸಲಾಯಿತು. ನಿಮ್ಮ ಕುತಂತ್ರದ ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವಂತ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದಾರೆ ಎಂದು ಗುಡುಗಿದರು.

ರಾಜ್ಯದ ಜನರನ್ನು ಧಿಕ್ಕು ತಪ್ಪಿಸುವಂತ ಕೆಲಸವನ್ನು ವಿರೋಧ ಪಕ್ಷದವರು ಮಾಡುತ್ತಿದ್ದಾರೆ. ಅದಕ್ಕೆ ನಾವು ಬಗ್ಗಲ್ಲ. ನಾವು ಸಂವಿಧಾನಕ್ಕೆ ಗೌರವ ನೀಡುತ್ತೇವೆ. ಸದನದಲ್ಲಿ ಚರ್ಚೆ ಮಾಡದೇ ರಾಜ್ಯಪಾಲರಿಂದ ನಿರ್ದೇಶನ ಕೊಡಿಸುತ್ತೀರಿ. ಅದಕ್ಕೆ ನಾವು ಗೌರವ ಕೊಡುತ್ತೇವೆ. ಕುಮಾರಸ್ವಾಮಿಯವರ ರಾಜೀನಾಮೆ ಯಾಕೆ ಕೇಳಲಿಲ್ಲ. ಜೋಡೆತ್ತುಗಳಾಗಿ ಕೆಲಸ ಮಾಡುತ್ತಿದ್ದೀರಲ್ಲ ಅದಕ್ಕೆ ಕಳುಹಿಸಿಲ್ವ. ಅವರಿಗೊಂದು ನ್ಯಾಯ ನಮಗೊಂದು ನ್ಯಾಯವೇ ಎಂದು ಪ್ರಶ್ನಿಸಿದರು.

ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿಲ್ಲ. ಅದನ್ನು ಜಗಜ್ಜಾಹಿರ ಮಾಡಿದ್ದೇನೆ. ನಾನು ಹಗರಣದಲ್ಲಿ ಭಾಗಿಯಾಗಿದ್ದೇನೆ ಎಂಬುದಕ್ಕೆ ಸಾಕ್ಷಿ ಏನಿದೆ.? ನನಗೆ ಒಂದು ರೂಪಾಯಿ ಬಂದಿದ್ಯಾ? ಎಂದು ಆಕ್ರೋಶ ಹೊರ ಹಾಕಿದಂತ ಅವರು. ಬಿಜೆಪಿಗರು ಮನಸ್ಮೃತಿವಾದಿಗಳು. ಈಗಾಗಲೇ 100ಕ್ಕೆ 100ರಷ್ಟು ವಾಲ್ಮೀಕಿ ನಿಗಮದ ಹಣ ವಾಪಾಸ್ ಆಗಿದೆ ಎಂದರು.

ನಾನು ದಲಿತ, ಆದಿವಾಸಿ ಎನ್ನುವ ಕಾರಣಕ್ಕೆ ನನ್ನ ಮೇಲೆ ಬಿಜೆಪಿಗರು ಟಾರ್ಗೆಟ್ ಮಾಡುತ್ತಿದ್ದಾರೆ. ಇವರಿಗೆ ಒಳ್ಳೇದಾಗಲ್ಲ. ಮನುವಾದಿಗಳು ಒಂದು ಸುಳ್ಳನ್ನೇ ಹೇಳಿ ಹೇಳಿ ನಿಜ ಮಾಡಲು ಹೊರಟಿದ್ದಾರೆ. ಆದರೇ ನನ್ನಿಂದ ಪಕ್ಷಕ್ಕೆ ಮುಜುಗರ ಆಗಬಾರದು ಎನ್ನುವ ಕೇವಲ ಒಂದೇ ಒಂದು ಕಾರಣಕ್ಕೆ, ಮುಖ್ಯಮಂತ್ರಿಗಳ ಅಭಿವೃದ್ಧಿ ಕುಂಠಿತವಾಗಬಾರದು ಎನ್ನುವ ಕಾರಣದಿಂದ, ನಮ್ಮ ವರಿಷ್ಠರಿಗೆ ಮುಜುಗಾರವಾಗಬಾರದು ಎನ್ನುವ ಕಾರಣಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಿಜೆಪಿ ಬೃಹತ್ ಸಾರ್ವಜನಿಕ ಸಮಾವೇಶಕ್ಕೆ ಅನುಮತಿ : ಭರದ ಸಿದ್ದತೆವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾರಾ ಭರತ್ ರೆಡ್ಡಿಸತತ ಪುನರ್ವಸತಿ ಮತ್ತು ಫಿಸಿಯೋಥೆರಪಿಯ ಮೂಲಕ ರೋಗಿ ಸಂಪೂರ್ಣ ಗುಣಮುಖಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯ. ಕಾಡಿನ ಜ್ಞಾನ ನಾಡಿಗೆ ಹಂಚಿದ ಕಾಡಿನ ಸಂತ ತೇಜಸ್ವಿ: ಗೊರೂರು ಶಿವೇಶ್ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ -2026 ಪಾದಯಾತ್ರೆ ಕೇವಲ ರಾಜಕೀಯ ಹೋರಾಟವಲ್ಲ; ಜನರ ಬದುಕಿನ ಪ್ರಶ್ನೆಗಳಿಗಾಗಿ ನಡೆಯುತ್ತಿರುವ ಜನಾಂದೋಲನ ವಿಜಯೇಂದ್ರ‘ಸಾಕ್ಷಿ ‘ ಕಿರುಚಿತ್ರ ಚಿತ್ರೀಕರಣ ಮುಕ್ತಾಯಮಲೆ ಮಾದೇಶ್ವರ ಬೆಟ್ಟದ ದೇವರ ದರ್ಶನ ಪಡೆದ ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷ ಸಿ. ನರೇಂದ್ರಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ