LIVE TV StateNationalPoliticsCrimeEntertainmentSportsEducationFINANCE & TAXATION
Districts

ನೂತನ ಪಟ್ಟಣ ಪಂಚಾಯಿತಿ ಕಟ್ಟಡಕ್ಕೆ ನೇಮಿರಾಜ್ ನಾಯ್ಕ ಶಂಕುಸ್ಥಾಪನೆ

ಮರಿಯಮ್ಮನಹಳ್ಳಿ:  ಪಟ್ಟಣದಲ್ಲಿ 2022-23 ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ- 4 ರಲ್ಲಿ ಮಂಜೂರಾದ 210.50 ಲಕ್ಷದಲ್ಲಿ  ನೂತನ ಪಟ್ಟಣ ಪಂಚಾಯಿತಿ ಕಟ್ಟಡ  ಹಾಗೂ ಮರಿಯಮ್ಮನಹಳ್ಳಿ ತಾಂಡದ ಗ್ರಂಥಾಲಯ ನಿರ್ಮಾಣದ ಕಾಮಾಗಾರಿಗೆ ಹಗರಿಬೊಮ್ಮನಹಳ್ಳಿ ಶಾಸಕ ಕೆ ನೇಮಿರಾಜ್ ನಾಯ್ಕ ಶಂಕುಸ್ಥಾಪನೆ ನೆರವೇರಿಸಿದರು.

ನಂತರ ಮಾತನಾಡಿ, 2028ಕ್ಕೆ ಕುಮಾರಣ್ಣ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅಭಿವೃದ್ದಿ ಪರ್ವಕ್ಕೆ ನಾಂದಿ ಹಾಡಲಿದ್ದಾರೆ. ಇದು ಸೂರ್ಯ ಚಂದಿರ ರಷ್ಟೇ ಸತ್ಯ. ಈ ನಿಟ್ಟಿನಲ್ಲಿ ರಾಜ್ಯದ ಜೆಡಿಎಸ್ ಶಾಸಕರು, ಹಿರಿಯರು, ಬುದ್ದಿ ಜೀವಿಗಳು ಕುಮಾರಣ್ಣ ರಾಜ್ಯಕ್ಕೆ ಮರಳುವಂತೆ ಮನ ಒಲಿಸಲಾಗುವುದು ಎಂದರು.



ಕ್ಷೇತ್ರವನ್ನು  ನೀರಾವರಿ ಪ್ರದೇಶವನ್ನಾಗಿ ಮಾಡುವ ಮೂಲಕ ಕೃಷಿಗೆ ಹೆಚ್ಚು ಒತ್ತು ಕೊಡಲು ರಾಜ್ಯ ಸರಕಾರ 17 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 50:50 ಅಥವಾ 60:40 ಯಾವುದೇ ಅನುಪಾತದಲ್ಲಿ ಅನುದಾನ ಕೊಟ್ಟರೂ ಉಳಿದ ಅನುದಾನವನ್ನು ಕೇಂದ್ರ ಸರಕಾರದಿಂದ ತರುತ್ತೇವೆ. ಆದರೆ ರಾಜ್ಯ ಸರಕಾರ ಆಲಸ್ಯ ತೋರುತ್ತಿದೆ. 17 ಕೆರೆಗಳೆಂದರೂ ಒಂದೊಂದು ಕೆರೆಗೂ 4 ಉಪಕೆರೆಗಳಿವೆ ಇದರಿಂದ ಕನಿಷ್ಠ 68  ಕೆರೆಗಳಿಗೆ ನೀರು ತುಂಬಿಸಿದಂತಾಗುತ್ತಿದ್ದು ಕೃಷಿಗೆ ಹೆಚ್ಚು ಒತ್ತು ಕೊಟ್ಟಂತಾಗುತ್ತದೆ ಇದಕ್ಕೆ ಸರಕಾರ ಬೇಗ ಸ್ಪಂದಿಸ ಬೇಕಾಗಿದೆ ಎಂದರು.

 

ಈ ಸಂದರ್ಭದಲ್ಲಿ ಪ.ಪಂ.ಅಧ್ಯಕ್ಷ ಹುಸೇನ್ ಬಾಷ, ಮುಖ್ಯಾಧಿಕಾರಿ ಗರಡಿ ಕಳಕ ಮಲ್ಲೇಶ, ಪ.ಪಂ.ಸದಸ್ಯರಾದ ಮರಡಿ ಸುರೇಶ, ಬಿಎಂಎಸ್ ರಾಜೀವ್, ಮಹಮದ್, ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ, ಮುಖಂಡರಾದ ಪಾಂಡುರಂಗ ಶೆಟ್ಟಿ, ಬಿ ಸುರೇಶ, ರೋಗಾಣಿ ಮಂಜುನಾಥ, ನಂದೀಶ, ಖಡ್ತರ್ ರಾಜಾಭಕ್ಷಿ, ಬಾಪುರಿ ಅಂಜಿನಿ, ರಾಘವೇಂದ್ರ, ದುರುಗಪ್ಪ, ಸುರೇಶ್ ಇತರರಿದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ