LIVE TV StateNationalPoliticsCrimeEntertainmentSportsEducationFINANCE & TAXATION
Districts

ಕನ್ನಡದ ಜಾನಪದ ಸೊಗಡು, ಸಂಸ್ಕೃತಿ ಮತ್ತು ಕಲೆಯನ್ನು ಉಳಿಸಿ: ಕಲಾವಿದ ಡಿ. ರಾಜಣ್ಣ

ನಾಯಕನಹಟ್ಟಿ : ಸಮೀಪದ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ  ಶ್ರೀ ಕಲಾನಿಧಿ ಗ್ರಾಮೀಣಾ ಅಭಿವೃದ್ಧಿ ಸಂಸ್ಥೆ( ರಿ )ನಾಯಕನಹಟ್ಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಚಿತ್ರದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪ್ರಯೋಜಿತ ಸುಗಮ ಸಂಗೀತ ಮತ್ತು ಜಾನಪದ ಸಂಗೀತ ಕಾರ್ಯಕ್ರಮದಲ್ಲಿ ಮಲ್ಲೂರಹಳ್ಳಿ ಗ್ರಾಮದ ಕಲಾವಿದ D ರಾಜಣ್ಣ ಮಾತನಾಡಿ ಇಂದಿನ ಯುವ ಪೀಳಿಗೆಯಲ್ಲಿ ಕನ್ನಡ ಜಾನಪದ ಗೀತೆಗಳು ಮತ್ತು ಭಾವಗೀತೆಗಳ ಮೇಲೆ  ಆಸಕ್ತಿ ಕಡಿಮೆಯಾಗುತ್ತಿದ್ದು. ಚಲನಚಿತ್ರಗೀತೆಗಳ ಅಬ್ಬರದಲ್ಲಿ ಗಡಿನಾಡಿನ ಕನ್ನಡ ಜಾನಪದ ಗೀತೆಗಳ , ವೈಶಿಷ್ಟ್ಯ, ಭಾವಗೀತೆಗಳ ಮಹತ್ವವನ್ನು  ಅರಿಯದೆ ಮರೆಮಾಡುತ್ತಿದ್ದಾರೆ ಕನ್ನಡ ಮತ್ತು ಸಂಸ್ಕೃತಿ  ಇಲಾಖೆ ಹಮ್ಮಿಕೊಳ್ಳುವ ಇಂತಹ ಪ್ರಾಯೋಜಿತ ಸಂಗೀತ ಕಾರ್ಯಕ್ರಮಗಳು ಯುವಕರಲ್ಲಿ ಜಾಗೃತಿ ಮೂಡಿಸಿ ಜಾನಪದ ಸೊಗಡು, ಹಾಗೂ ಸಂಗೀತದ ಬಗ್ಗೆ ಅರಿವನ್ನು ಮೂಡಿಸಿ ಕಲಾ ಪ್ರಕಾರಗಳು ಮರೆಯಾಗದಂತೆ ಅವರಲ್ಲಿ ಆಸಕ್ತಿಯನ್ನು ಕೆರಳಿಸುವಂತೆ ಅಭಿಪ್ರೇರಣೆ ಹುಟ್ಟು ಹಾಕುತ್ತದೆ..ಸಂಗೀತಕ್ಕೆ ಮನಸೋಲದೆ ಇರುವ ವ್ಯಕ್ತಿ ಜಗತ್ತಿನಲ್ಲಿ ಇಲ್ಲ...ಸಂಗೀತ ನಮ್ಮಲ್ಲಿರುವ ಒತ್ತಡ, ಆತಂಕ ಹಾಗೂ ದ್ವೇಷ ಮುಂತಾದ ಗುಣಗಳನ್ನು ದೂರಮಾಡುವ ಶಕ್ತಿಯಿದೆ...ಇಂದಿನ ಮಕ್ಕಳು ಮುಂದಿನ ನಮ್ಮ ನಾಡು ನುಡಿ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕಲಾವಿದರಾಗಿ ನಿರ್ಮಾಣಗೊಂಡು ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.



ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಜಗದೀಶ್ ತಬಲವನ್ನು ನುಡಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಗಾಯಕ ಶಿಕ್ಷಕರಾದ ನಾಗಭೂಷಣ್ ಕೆ.ಟಿ  ಇವರು ವಿವಿಧ ಜಾನಪದ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು  ರಂಜಿಸಿದರು. ಕಲಾವಿದ  ಡಿ. ರಾಜಣ್ಣನವರು ತಮ್ಮ ಕಂಚಿನ ಕಂಠದಿಂದ  ವಿವಿಧ ಗೀತೆಗಳನ್ನು ಹಾಡಿ   ರಸದೌತಣವನ್ನು ನೀಡಿದರು

ಶಿಕ್ಷಕರಾದ  ವೀರಭದ್ರಪ್ಪ , ಓಂಕಾರಪ್ಪ, ಶಿವಕುಮಾರ್,ರಂಜಿತ, ರಮ್ಯ, ಮತ್ತು ಗಾಯಕಿಯಾದ ಬೇಬಿ ಶ್ಯಾಮಿಲಿ , ಕಲಾವಿದರಾದ  ಪವನ್, ಕೀರ್ತಿರಾಜ್, ಹಾಗೂ ಮತ್ತಿತರು ಹಾಜರಿದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ