LIVE TV StateNationalPoliticsCrimeEntertainmentSportsEducationFINANCE & TAXATION
Districts Bangalore

‘ಟಿವಿ ಠೀವಿ' ಪತ್ರಿಕೆ ಪುನರಾರಂಭ

ಬೆಂಗಳೂರು : ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ (ರಿ) ನ ಆಂತರಿಕ ಪ್ರಸಾರದ ದ್ವೈಮಾಸಿಕ ಪತ್ರಿಕೆ ‘ಟಿವಿ ಠೀವಿ' ಅಂತರಾಳದ ಮಹಾ ಧ್ವನಿಯನ್ನು ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕರಾದ ಎನ್ ಆರ್ ರಮೇಶ್ ರವರು ಪುನರಾರಂಭಗೊಳಿಸಿದರು.

ಪತ್ರಿಕೆಯ ಸಂಪಾದಕರಾದ ಹಿರಿಯೂರು ರಾಘವೇಂದ್ರ, ಕೆಟಿವಿಎ ಅಧ್ಯಕ್ಷ  ಗಣೇಶ್‌ರಾವ್ ಕೇಸರ್ಕರ್, ಚಲನಚಿತ್ರ ಕಲಾವಿದ ಶ್ರೀನಗರ ಕಿಟ್ಟಿ,  ಗೌರವಾಧ್ಯಕ್ಷರಾದ ಪದ್ಮಾ ವಾಸಂತಿ, ಕಾರ್ಯದರ್ಶಿ ಬೆಳ್ಳಿಚುಕ್ಕಿ ವೀರೇಂದ್ರ,  ರೇಣು ಶಿಕಾರಿ ಎನ್ ಟಿ  ರಾಮಸ್ವಾಮಿ, ಡಾ. ಎ ಆರ್ ಗೋವಿಂದಸ್ವಾಮಿ ಅವರುಗಳು  ಉಪಸ್ಥಿತರಿದ್ದರು.

ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಎನ್ ಆರ್ ರಮೇಶ್ "ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ, ಟೆಲಿವಿಷನ್ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಕ್ಲಬ್ (ರಿ), ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ (ರಿ)ಎರಡೂ ಸಂಸ್ಥೆಗಳು ಒಂದಾಗಿ ಕೆಲಸ ಮಾಡಿದರೆ ಏನು ಬೇಕಾದರೂ ಸಾಧಿಸಬಹುದು " ಎಂದು ಹಿತವಚನ ನುಡಿದರು.

news_1790167998_0_355.webp

 

ಪತ್ರಿಕೆ ಪುನರಾರಂಭವಾಗಿದ್ದಕ್ಕೆ ಕೆಟಿಎದ ಎಲ್ಲ ಪದಾಧಿಕಾರಿಗಳಿಗೂ, ಚಲನಚಿತ್ರ ನಿರ್ದೇಶಕರು, ಕಲಾವಿದರು,ಸಾಹಿತಿಗಳು ಪತ್ರಿಕೆ ಸಂಪಾದಕರಾದ ರಾಘವೇಂದ್ರ ಹಿರಿಯೂರು ಅವರ ನೇತೃತ್ವದಲ್ಲಿ ಪತ್ರಿಕೆ ಯಶಸ್ಸು ಕಾಣಲೆಂದು ಕಲಾಪೋಷಕರ ಮಠ ಸಿದ್ದನಕೊಳ್ಳದ ಡಾ.ಶಿವಕುಮಾರ ಮಹಾಸ್ವಾಮಿಗಳು, ಚಲನಚಿತ್ರ ಹಿರಿಯ ಪತ್ರಕರ್ತರಾದ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ನಿರ್ದೇಶಕ ನಿರ್ಮಾಪಕರಾದ ಲೋಕೇಶ ವಿದ್ಯಾಧರ, ಅರವಿಂದ ಮುಳಗುಂದ, ರೇಣುಕುಮಾರ ಸಂಸ್ಥಾನಮಠ, ಪತ್ರಿಕಾ ಸಂಪಾದಕರುಗಳಾದ ಗಣಪತಿ ಗಂಗೊಳ್ಳಿ, ಲಕ್ಷ್ಮಣ ಬಾರಕೇರ, ಅಶೋಕ ತೋಟದ, ಕಲಾವಿದರಾದ ವೀರೇಶ ಪುರವಂತರ, ಸಂಗನಗೌಡ ಕುರುಡಗಿ, ರವೀಂದ್ರ ರಾಮದುರ್ಗಕರ, ವೀರಣ್ಣ ವಿಠಲಾಪೂರ, ಛಾಯಾಗ್ರಾಹಕ ಶರಣು ಸುಗ್ನಳ್ಳಿ, ಅಭಿ ಕ್ರಿಯೇಷನ್ಸ್ ನ ನಿರ್ಮಾಪಕರಾದ ವಿದ್ಯಾ ಗಂಜಿಹಾಳ, ಸಂಗೀತಾ ಚಂದ್ರಶೇಖರ ಆಡಿನ, ರೇಖಾ ಸಿದ್ದುಕೃಷ್ಣ ಢೇಕಣಿ ಮೊದಲಾದವರು ಶುಭಕೋರಿದ್ದಾರೆ.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯ ದಶಮಿಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ದಸರಾ ಹಾಗೂ ಆಯುಧ ಪೂಜೆಜಾತಿಭೇದವಿಲ್ಲದೆ ದಲಿತರ ಮನೆಯಲ್ಲಿ ಊಟ ಸವಿದ ಡಾ. ಬಿ. ಯೋಗೇಶ್ ಡಿಸ್ಕವರಿ ವಾಹಿನಿಯಲ್ಲಿ ಕೆಐಐಟಿ ಸಾಧನೆ ಬಣ್ಣನೆ ಕನ್ನಡಿಗರು ವಿಶಾಲತೆ, ಸಾಮರಸ್ಯ ಉಳ್ಳವರಾಗಿರುವುದರಿಂದಲೇ ಕನ್ನಡಕ್ಕೆ ಕಂಟಕ!ಹಾಡಿನ ಚಿತ್ರೀಕರಣದೊಂದಿಗೆ ‘ಚಂದ್ರಗಿರಿ’ ಚಿತ್ರೀಕರಣ ಮುಕ್ತಾಯಸರ್ವೋದಯ ಮಹಾವಿದ್ಯಾಲಯದ ಸೌಕರ್ಯ, ಶೈಕ್ಷಣಿಕ ಸಾಧನೆಗೆ ದಾವಣಗೆರೆ ವಿವಿ ಉಪಕುಲಪತಿ ಮೆಚ್ಚುಗೆಬಡತನ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನಾಚರಣೆ ಬೆಂಗಳೂರಿನಲ್ಲಿ ಐಸಿಎಸ್ಐ ಇನ್ವೆಸ್ಟ್ ಇಂಡಿಯಾ ಶೃಂಗಸಭೆ ಆಯೋಜನೆಎಚ್.ಡಿ. ಕುಮಾರಸ್ವಾಮಿ ವಿವಾದಾತ್ಮಕ ಮಾತುಗಳಿಗೆ ಖಂಡನೆ, ಕ್ಷಮೆಯಾಚನೆಗೆ ಆಗ್ರಹ: ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಅರ್ಜುನ್ ಗೋಪಾಲಯ್ಯ