LIVE TV StateNationalPoliticsCrimeEntertainmentSportsEducationFINANCE & TAXATION
Districts

ಸತ್ಯಮೇವ ಜಯತೆ ಇದೇ ಭಾರತೀಯತೆ.....!

`17 ವರ್ಷಗಳ ನಂತರ ಸತ್ಯಕ್ಕೆ ಜಯ' ಎನ್ನುವ ಉದ್ಘೋಷ ಎಲ್ಲೆಡೆ ಕೇಳಿ ಬರುತ್ತಿದೆ. ಹೌದು.... ಭಾರತಕ್ಕೆ ಮತ್ತು ಭಾರತೀಯತೆಗೆ ಇಂತಹ ಅದೆಷ್ಟೋ ಜಯಗಳು ಲಭಿಸಿವೆ. ಶತ ಶತಮಾನಗಳಿಂದಲೂ ಸುಲ್ತಾನರ, ಮೊಘಲರ, ನವಾಬರ ಮತ್ತು ಬ್ರಿಟೀಷರ ಕಪಿಮುಷ್ಠಿಗೆ ಸಿಲುಕಿ ನಲುಗಿದ್ದರೂ ಈ ನೆಲದಲ್ಲಿ ಕೊನೆಗೆ ಲಭಿಸಿದ್ದು ಜಯವೇ. ಅನೇಕ ಮಾರಣ ಹೋಮಗಳು, ಯುದ್ಧಗಳು, ರಾಜ್ಯಗಳು, ತಲೆಗಳು ಉರುಳಿ ಹೋಗಿದ್ದರೂ ಅಂತಿಮವಾಗಿ ಲಭಿಸಿದ್ದು `ಸತ್ಯಮೇವ ಜಯತೆ'ಯೇ.

ಈ ನೆಲದಲ್ಲಿ `ಸತ್ಯಕ್ಕೆ ಸಾವಿಲ್ಲ-ಸುಳ್ಳಿಗೆ ಸುಖವಿಲ್ಲ' ಎನ್ನುವುದನ್ನು ನಿರೂಪಿಸುತ್ತಲೇ ಬರಲಾಗಿದೆ. ಸತ್ಯಕ್ಕೆ ಜಯ ಸಿಗುವಷ್ಟರಲ್ಲಿ ಅನೇಕ ನೋವುಗಳು, ಹತಾಶೆಗಳು, ಸಂಬಂಧಗಳನ್ನು ಕಡಿದುಕೊಂಡಿದ್ದರೂ `ಸತ್ಯಮೇಯ ಜಯತೆ' ಯಲ್ಲಿ ಎಲ್ಲ ಗೇಯತೆಗಳೂ ಮೇಳೈಸಿವೆ. ಮಹಾರಾಷ್ಟçದ ಮಾಲೇಗಾಂವ್ ಸ್ಫೋಟದ ಪ್ರಕರಣದಲ್ಲಿ ಕೊನೆಗೆ ತೀರ್ಪು ಬಂದದ್ದೂ ಸತ್ಯದ ಪರವಾಗಿಯೇ. ಈ ಪ್ರಕರಣದಲ್ಲಿ ಸತತ 17 ವರ್ಷಗಳಿಂದ ನೊಂದು, ನಲುಗಿ ಹೋಗಿದ್ದ ಎಲ್ಲಾ 7 ಹಿಂದೂ ಅಮಾಯಕರು ನಿರ್ದೋಷಿಗಳು ಎಂದು ಸಾಬೀತಾಗಿದೆ. ಮತ್ತೊಮ್ಮೆ ಹಿಂದೂಗಳು `ಅಹಿಂಸಾವಾದಿ' ಗಳು ಎನ್ನುವುದು ಋಜುವಾತಾಗಿದೆ. ಈ ದಿನಗಳಲ್ಲಿ `ಕೇಸರಿ ಭಯೋತ್ಪಾದನೆ' ಎಂದು ಬಿಂಬಿಸಿದವರಿಗೆ ಕಪಾಳಮೋಕ್ಷವಾಗಿದೆ. ಸತ್ಯ ಯಾವಾಗಲೂ ಸಂಯಮದಿಂದ ಇರುತ್ತದೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ.



ರಾಜಕೀಯ ಪಕ್ಷಗಳು ತಮ್ಮ ಸಿದ್ಧಾಂತಗಳು ಯಾವುದೇ ಇರಲಿ ದೇಶ ಅಂತ ಬಂದಾಗ ಒಗ್ಗಟ್ಟಾಗಿರಬೇಕು. ದೇಶದ ಭದ್ರತೆಗೆ ತುಡಿಯುವ ಗುಣ ಇರಬೇಕು. ಒಂದುವೇಳೆ ಈ ರೀತಿ ಆಗದೇ ಹೋದರೆ ದೇಶಕ್ಕೆ ಮಾರಕ, ಇತ್ತೀಚೆಗೆ ನಡೆದ ಭಯೋತ್ಪಾದಕ ಕೃತ್ಯದ ಕುರಿತು ಒಂದು ಪಕ್ಷ ಬಿಹಾರದ ಚುನಾವಣೆ ಬರುತ್ತಿದೆ. ಈ ಕಾರಣಕ್ಕಾಗಿ ಈ ಭಯೋತ್ಪಾದನೆ ನಡೆಸಲಾಗಿದೆ ಎಂದಿದೆ. ಇದನ್ನೇ ಅಸ್ತç ಮಾಡಿಕೊಂಡು ನೆರೆಯ ಪಾಕಿಸ್ತಾನ ಮೀಡಿಯಗಳು ಚರ್ಚೆ ಮಾಡಿದ್ದೇ ಮಾಡಿದ್ದು.

ಭಾರತಕ್ಕೆ ಶತ್ರುಗಳು ಬರೀ ಹೊರಗಡೆ ಮಾತ್ರವಲ್ಲ,  ದೇಶದೊಳಗೇ ಇದ್ದಾರೆ. ರಾಜಕೀಯ ಪಕ್ಷಗಳ ನಾಯಕರು ದೇಶದ ವಿಷಯ ಅಂತ ಬಂದಾಗ ಸೈನಿಕನಂತೆ ರಾಷ್ಟ್ರದ ಘನತೆಯನ್ನು ಎತ್ತಿ ಹಿಡಿಯಬೇಕು. ಹಿಂದೂಗಳ ವಿರುದ್ದ ಷಡ್ಯಂತ್ರ, ಕುತಂತ್ರ ಮತ್ತು  ಒತ್ತಡ ಹೇರಲಾಗಿತ್ತು ಎಂದು ಮಾಜಿ ಎಟಿಎಸ್ ಅಧಿಕಾರಿ ಮಹಿಬೂಬ್ ಮುಜಾವರ್ ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಮಾತಿನಲ್ಲೇ ಹೇಳುವುದಾದರೆ ನಮ್ಮ ದೇಶದ ರಾಜಕೀಯ ಪಕ್ಷಗಳು, ರಾಜಕೀಯ ನಾಯಕರು ತಮ್ಮ ವಿಕ್ಷಿಪ್ತ ಗುಣಗಳನ್ನು ಸರಿಪಡಿಸಿಕೊಳ್ಳಬೇಕು. ಅಂದಿನ ಪಕ್ಷವೊಂದು ತನಿಖಾ ಸಂಸ್ಥೆಯ ಅಧಿಕಾರಿಗೆ ಈ ರೀತಿ ಹೇಳಿದ್ದ ಬಣ್ಣ ಬಯಲಾಗಿದೆ. ದೇಶದದ್ಯಾಂತ ಈ ಪಕ್ಷ ರಾಷ್ಟçದ ಬಗ್ಗೆ ಎಷ್ಟು ನಿಷ್ಠೆ ಹೊಂದಿದೆ ಎನ್ನುವುದು ವೇದ್ಯವಾಗುತ್ತದೆ ಎಂದು ಭಾರತೀಯರು ಅವಲೋಕನ ಮಾಡುತ್ತಿದ್ದಾರೆ. ಇಂತಹ ಪಿತೂರಿ ನಡೆಸುವುದನ್ನು ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಬಿಡಲಿ. ದೇಶದ ಭದ್ರತೆ, ಘನತೆ ಮತ್ತು ಗೌರವಾದರಗಳನ್ನು ಕಾಪಾಡಲಿ.

 

ಮಾಲೇಗಾಂವ್ ಸ್ಫೋಟ ಪ್ರಕರಣವನ್ನು ಹಿಂದೂ ಭಯೋತ್ಪಾದನೆ ಎಂದು ಬಿಂಬಿಸಲು ನಡೆಸಿದ ಪ್ರಯತ್ನಕ್ಕೆ ಕೋರ್ಟ್ ಸರಿಯಾಗಿ ಛೀಮಾರಿ ಹಾಕಿದೆ. 2008ರ ಪ್ರಕರಣದಲ್ಲಿ ಬಂಧಿಸಿದ್ದ 7 ಆರೋಪಿಗಳನ್ನು ಖುಲಾಸೆಗೊಳಿಸಿದೆ. ಈ ಮೂಲಕ ಹಿಂದೂ ಭಯೋತ್ಪಾದನೆ ಎಂದು ಪಟ್ಟ ಕಟ್ಟಲು ಹೊರಟಿದ್ದ ಹಲವರಿಗೆ ಕೋರ್ಟ್ ತಕ್ಕ ಉತ್ತರ ನೀಡಿದೆ. ಮಾಲೇಗಾಂವ್ ಪ್ರಕರಣದ ತನಿಖೆ ನಡೆಸುತ್ತಿದ್ದ ಆ್ಯಂಟಿ ಟೆರರಿಸ್ಟ್ ಸ್ಕಾಡ್ (ಎಟಿಸ್) ನಿವೃತ್ತ ಅಧಿಕಾರಿ ಮೆಹಬೂಬ್ ಮುಜಾವರ್ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.



ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್, ಲೆ.ಕರ್ನಲ್ ಪೋರೋಹಿತ್ ಸೇರಿ ೭ ಮಂದಿಯನ್ನು ಆರೋಪಿಗಳು ಎಂದು ಬಿಂಬಿಸಿ ಪ್ರಕರಣದಲ್ಲಿ ಸಿಲುಕಿಸಿದ್ದು ಮಾತ್ರವಲ್ಲ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅರೆಸ್ಟ್ ಮಾಡಲು ಹಿರಿಯ ಅಧಿಕಾರಿಗಳು ಸೂಚಸಿದ್ದರು ಎಂದು ಹೇಳಿದ್ದಾರೆ. ಇದು ಆರ್‌ಎಸ್‌ಎಸ್ ತಲೆಗೆ ಕಟ್ಟಿ ಸಂಘಟನೆ ಮುಗಿಸಲು ಷಡ್ಯಂತ್ರವಾಗಿತ್ತು ಎನ್ನುವುದು ವೇದ್ಯವಾಗುತ್ತದೆ. ಮೆಹಬೂಬ್ ಮುನಾವರ್ ಮಹಾರಾಷ್ಟ್ರ ಎಟಿಎಸ್ ಅಧಿಕಾರಿಯಾಗಿ ತನಿಖೆ ನಡೆಸಿದ್ದರು. ಆಗ ಹಿರಿಯ ಅಧಿಕಾರಿ ಪರಮ್ ಬೀರ್ ಸಿಂಗ್ ಸೇರಿದಂತೆ ಕೆಲವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅರೆಸ್ಟ್ ಮಾಡಲು ಸೂಚಿಸಿದ್ದರು. ಮಾಲೇಗಾಂವ್ ಸ್ಫೋಟದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥರ ಬಂಧಿಸಿ, ಇಡೀ ಪ್ರಕರಣವನ್ನು ಹಿಂದೂ ಹಾಗೂ ಆರ್‌ಎಸ್‌ಎಸ್ ಸಂಘಟನೆ ಮೇಲೆ ಹೊರಿಸಲು ಷಡ್ಯಂತ್ರ ನಡೆದಿತ್ತು ಎಂದು ಮೆಹಬೂಬ್ ಮುನಾವರ್ ಹೇಳಿದ್ದಾರೆ. ರಾಜಕೀಯ ಪಕ್ಷಕ್ಕೆ ಮತ್ತು ರಾಜಕೀಯ ಪಕ್ಷದ ಚೇಲಾಗಳಂತೆ ವರ್ತಿಸುವ ಅಧಿಕಾರಿಗಳು ರಾಷ್ಟçದ ಘನತೆ ಹೇಗೆ ಕಾಪಾಡಲು ಸಾಧ್ಯ? ಇನ್ನಾದರೂ ರಾಜಕೀಯ ಪಕ್ಷಗಳ ನಾಯಕರು ಮತ್ತು ಅಧಿಕಾರಿಗಳು ಎಚ್ಚರಿಕೆಯ ಹೆಜ್ಜೆ ಇರಿಸಲಿ. ಜಗದ್ಗುರುವಾಗಲು ಹೊರಟಿರುವ ಭಾರತದ ನಡೆಗೆ ಸಾಥ್ ನೀಡಲಿ. 

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ