LIVE TV StateNationalPoliticsCrimeEntertainmentSportsEducationFINANCE & TAXATION
Districts Bangalore

ಇಂಟರ್ನ್ಯಾಷನಲ್ ಸ್ಕೂಲ್ ಸ್ಪೋರ್ಟ್ ಫೆಡರೇಷನ್ ಗೆ 18 ವರ್ಷದೊಳಗಿನ ಬಾಲಕರ ತಂಡಕ್ಕೆ ಶೌರ್ಯ ವಿ.ಎ ಆಯ್ಕೆ

ಬೆಂಗಳೂರು: ಮುಂದಿನ ಅಕ್ಟೋಬರ್‌ ತಿಂಗಳಲ್ಲಿ  ಚೀನಾದಲ್ಲಿ ನಡೆಯುವ ಇಂಟರ್‌ನ್ಯಾಶನಲ್ ಸ್ಕೂಲ್ ಸ್ಪೋರ್ಟ್ ಫೆಡರೇಷನ್‌ನ ವಿಶ್ವಕಪ್ ಫುಟ್‌ಬಾಲ್ 2026ರ 18 ವರ್ಷದೊಳಗಿನ ಬಾಲಕರ ತಂಡದಲ್ಲಿ ಭಾರತ ತಂಡವನ್ನು ಪ್ರತಿನಿಧಿಯಾಗಿ ಬೆಂಗಳೂರಿನ ಇಂಡಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನ 12ನೇ ತರಗತಿಯ ವಿದ್ಯಾರ್ಥಿ ಶೌರ್ಯ ವಿ.ಎ. ಅವರು ಆಯ್ಕೆಯಾಗಿದ್ದಾರೆ.

 

ಭಾರತದ ಅಂತರರಾಷ್ಟ್ರೀಯ ಶಾಲೆಗಳಿಗೆ ವಿಶ್ವಾಸಾರ್ಹ ಮತ್ತು ಮಾನ್ಯತೆ ಪಡೆದ ಕ್ರೀಡಾ ವೇದಿಕೆಯನ್ನು ಒದಗಿಸುವ ಇಂಟರ್‌ನ್ಯಾಷನಲ್ ಸ್ಕೂಲ್ಸ್ ಸ್ಪೋರ್ಟ್ಸ್‌ ಆರ್ಗನೈಸೇಷನ್ ಆಶ್ರಯದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ದೇಶಾದ್ಯಂತದ ಶ್ರೇಷ್ಠ ಶಾಲಾ ಫುಟ್‌ಬಾಲ್ ಆಟಗಾರರ ನಡುವೆ ನಡೆದ ಕಠಿಣ ಮೌಲ್ಯಮಾಪನ ಪ್ರಕ್ರಿಯೆಯ ನಂತರ, ಡಿಫೆನ್ಸಿವ್ ಮಿಡ್‌ಫೀಲ್ಡರ್ ಆಗಿರುವ ಶೌರ್ಯ ಅವರು ಅಂತಿಮ 20 ಸದಸ್ಯರ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

 

ಐಎಸ್ಎಫ್  ಫುಟ್‌ಬಾಲ್ ವಿಶ್ವಕಪ್ 2026ರ ಅಕ್ಟೋಬರ್ 17 ರಿಂದ 26 ರವರೆಗೆ ಚೀನಾದ ಸುಝೌ ನಗರದಲ್ಲಿ ನಡೆಯಲಿದೆ. ಇದು ಅಂತರರಾಷ್ಟ್ರೀಯ ಶಾಲಾ ಕ್ರೀಡೆಯ ಅತ್ಯುನ್ನತ ಹಂತದಲ್ಲಿ ಸ್ಪರ್ಧಿಸಲು ಪ್ರಪಂಚದಾದ್ಯಂತದ ಯುವ ಫುಟ್‌ಬಾಲ್ ಪ್ರತಿಭೆಗಳನ್ನು ಒಂದೆಡೆ ಸೇರಿಸುತ್ತದೆ.

 

ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವುದು ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವುದು ನನ್ನ ಪಾಲಿಗೆ ನನಸಾದ ಕನಸು ಎಂದು ಶೌರ್ಯ ಹೇಳಿದರು. ನನ್ನ ತರಬೇತುದಾರರು, ಶಿಕ್ಷಕರು ಮತ್ತು ಕುಟುಂಬದವರ ಬೆಂಬಲಕ್ಕೆ ನಾನು ಕೃತಜ್ಞನಾಗಿದ್ದೇನೆ. ಉನ್ನತ ಮಟ್ಟದ ಅಂತರರಾಷ್ಟ್ರೀಯ ತಂಡಗಳ ವಿರುದ್ಧ ಸ್ಪರ್ಧಿಸುವುದು ಒಂದು ಅದ್ಭುತ ಅವಕಾಶವಾಗಿದೆ. ದೇಶಕ್ಕಾಗಿ ಮೈದಾನದಲ್ಲಿ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ನಾನು ಎದುರು ನೋಡುತ್ತಿದ್ದೇನೆ" ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ.

 

ಐಬಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ಶೌರ್ಯ, ಕಾಲೇಜು ಮಟ್ಟದಲ್ಲಿ ಫುಟ್‌ಬಾಲ್ ಆಡುವುದರ ಜೊತೆಗೆ ಫುಟ್‌ಬಾಲ್ ತರಬೇತುದಾರ / ತಂಡದ ವ್ಯವಸ್ಥಾಪಕರಾಗುವ ಆಕಾಂಕ್ಷೆಯನ್ನು ಹೊಂದಿದ್ದಾರೆ.

 

ಹಲವಾರು ತಾಂತ್ರಿಕ ಅಡೆತಡೆಗಳಿಂದಾಗಿ ಭಾರತೀಯರು ಇಂಗ್ಲಿಷ್ ಪ್ರೀಮಿಯರ್ ಲೀಗ್ / ಯಾವುದೇ ಯುರೋಪಿಯನ್ ಲೀಗ್‌ಗಳಲ್ಲಿ ಫುಟ್‌ಬಾಲ್ ತರಬೇತುದಾರರಾಗುವುದು / ವ್ಯವಸ್ಥಾಪಕರಾಗುವುದು ಅತ್ಯಂತ ಸವಾಲಿನ ವಿಷಯವಾಗಿದೆ. ಆದರೂ ನಾನು ಅದಕ್ಕಾಗಿ ನನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದ್ದೇನೆ. ಫುಟ್‌ಬಾಲ್‌ನತ್ತ ಗಮನಹರಿಸುವ ಮೂಲಕ ಸಮಗ್ರ ಕ್ರೀಡಾ ನಿರ್ವಹಣೆಯ ಗುರಿ  ಹೊಂದಿದ್ದೇನೆ" ಎಂದು ಹೇಳಿದರು.

 

ಶೌರ್ಯ ಬಾಲ್ಯದಲ್ಲೇ ಬೆಂಗಳೂರು ಫುಟ್‌ಬಾಲ್ ಕ್ಲಬ್ ನಲ್ಲಿ ಫುಟ್‌ಬಾಲ್ ಆಡಲು ಪ್ರಾರಂಭಿಸಿದರು. ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ ಹಾಗೂ ಬೆಂಗಳೂರು ಯೂತ್ ಫುಟ್‌ಬಾಲ್ ಲೀಗ್ ನಲ್ಲಿ ಇಂಟರ್ನ್‌ಶಿಪ್ ಮಾಡಿದ್ದಾರೆ. ಅವರು ಇಂಗ್ಲೆಂಡ್‌ನ ಆರ್ಸೆನಲ್ ಫುಟ್‌ಬಾಲ್ ಕ್ಲಬ್‌ನಲ್ಲಿನ ತರಬೇತಿ ಅವಧಿಗಳನ್ನು ಒಳಗೊಂಡಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ತರಬೇತಿ ಪಡೆದಿದ್ದಾರೆ.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯ ದಶಮಿಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ದಸರಾ ಹಾಗೂ ಆಯುಧ ಪೂಜೆಜಾತಿಭೇದವಿಲ್ಲದೆ ದಲಿತರ ಮನೆಯಲ್ಲಿ ಊಟ ಸವಿದ ಡಾ. ಬಿ. ಯೋಗೇಶ್ ಡಿಸ್ಕವರಿ ವಾಹಿನಿಯಲ್ಲಿ ಕೆಐಐಟಿ ಸಾಧನೆ ಬಣ್ಣನೆ ಕನ್ನಡಿಗರು ವಿಶಾಲತೆ, ಸಾಮರಸ್ಯ ಉಳ್ಳವರಾಗಿರುವುದರಿಂದಲೇ ಕನ್ನಡಕ್ಕೆ ಕಂಟಕ!ಹಾಡಿನ ಚಿತ್ರೀಕರಣದೊಂದಿಗೆ ‘ಚಂದ್ರಗಿರಿ’ ಚಿತ್ರೀಕರಣ ಮುಕ್ತಾಯಸರ್ವೋದಯ ಮಹಾವಿದ್ಯಾಲಯದ ಸೌಕರ್ಯ, ಶೈಕ್ಷಣಿಕ ಸಾಧನೆಗೆ ದಾವಣಗೆರೆ ವಿವಿ ಉಪಕುಲಪತಿ ಮೆಚ್ಚುಗೆಬಡತನ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನಾಚರಣೆ ಬೆಂಗಳೂರಿನಲ್ಲಿ ಐಸಿಎಸ್ಐ ಇನ್ವೆಸ್ಟ್ ಇಂಡಿಯಾ ಶೃಂಗಸಭೆ ಆಯೋಜನೆಎಚ್.ಡಿ. ಕುಮಾರಸ್ವಾಮಿ ವಿವಾದಾತ್ಮಕ ಮಾತುಗಳಿಗೆ ಖಂಡನೆ, ಕ್ಷಮೆಯಾಚನೆಗೆ ಆಗ್ರಹ: ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಅರ್ಜುನ್ ಗೋಪಾಲಯ್ಯ