LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಮೆಡಿಕವರ್ ಆಸ್ಪತ್ರೆಯಿಂದ ವಿಶೇಷ 1947ರ ಆರೋಗ್ಯ ಪ್ಯಾಕೇಜ್

ಬೆಂಗಳೂರು: ಇಲ್ಲಿನ ವೈಟ್ ಫೀಲ್ಡ್ ನಲ್ಲಿರುವ ಮೆಡಿಕವರ್ ಆಸ್ಪತ್ರೆಯು 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷ ಮಲ್ಟಿ-ಸ್ಪೆಷಾಲಿಟಿ ಆರೋಗ್ಯ ಪ್ಯಾಕೇಜ್‌ನೊಂದಿಗೆ ಆಚರಿಸುತ್ತಿದೆ. ಈ ಪ್ಯಾಕೇಜ್‌ನ್ನು ಭಾರತದ ಸ್ವಾತಂತ್ರ‍್ಯದ ವರ್ಷವನ್ನು ಸ್ಮರಿಸುವ ಸಲುವಾಗಿ  1947 ರೂಪಾಯಿಗೆ ಕ್ಕೆ  ನೀಡಲಾಗುತ್ತಿದೆ.

 

ಈ ಪ್ಯಾಕೇಜ್‌ನಲ್ಲಿ ಪ್ರಮುಖ ಹೃದಯ ತಜ್ಞರು, ಸಾಮಾನ್ಯ ವೈದ್ಯ, ಸ್ತ್ರೀರೋಗ ತಜ್ಞರು, ಎಲುಬು ತಜ್ಞರು, ಸಾಮಾನ್ಯ ಶಸ್ತ್ರಚಿಕಿತ್ಸಕ ಜೊತೆಗೆ ಡಯಾಗ್ನೋಸ್ಟಿಕ್ ಪರೀಕ್ಷೆಗಳಿಗೆ 50% ರಿಯಾಯಿತಿ ಒಳಗೊಂಡಿದೆ. ಈ ವಿಶೇಷ ಆಫರ್ ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರೆವೆರೆಗೆ ಬೆಂಗಳೂರು  ಮೆಡಿಕವರ್ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ.



ಸ್ವಾತಂತ್ರ್ಯ  ದಿನಾಚರಣೆ ನಮ್ಮ ದೇಶದ ಹಬ್ಬ, ಆದರೆ ಉತ್ತಮ ಆರೋಗ್ಯವೇ ಬದುಕನ್ನು ಸಂಪೂರ್ಣವಾಗಿ ಅನುಭವಿಸುವ ಮೂಲ ಆಸ್ತಿಯಾಗಿದೆ. 1947ರ ವಿಶೇಷ ಪ್ಯಾಕೇಜ್ ನಮ್ಮ ದೇಶ ಸ್ವಾತಂತ್ರ್ಯ  ಪಡೆದ ವರ್ಷದ ಸಂಕೇತವಾಗಿದ್ದು, ಜನರು ಆರೋಗ್ಯ ತಪಾಸಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಪ್ರೇರಣೆ ನೀಡುತ್ತದೆ" ಎಂದು ಮೆಡಿಕವರ್ ಆಸ್ಪತ್ರೆಯ ಮುಖ್ಯಸ್ಥ ಕೃಷ್ಣಮೂರ್ತಿ ಹೇಳಿದ್ದಾರೆ.

 

ಮೆಡಿಕವರ್ ಆಸ್ಪತ್ರೆಯ ಗುಣಮಟ್ಟದ ಆರೋಗ್ಯ ಸೇವೆಯನ್ನು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ರಾಜ್ಯದ ನಾನಾ ಭಾಗಗಳ ಹಾಗೂ ಬೆಂಗಳೂರಿನ ಜನರನ್ನು ಆರೋಗ್ಯಕರ ಜೀವನದತ್ತ ತ್ವರಿತ ಹೆಜ್ಜೆ ಇಡುವಂತೆ ಪ್ರೋತ್ಸಾಹಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ