ಬೆಂಗಳೂರು: ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ ಕರ್ನಾಟಕ ಮತ್ತು ಸಿರಾಡ್ ಜೊತೆ ಸೇರಿ ವಾಯ್ಸ್ ಆಫ್ ಬೆಂಗಳೂರು ಅಕಾಡೆಮಿಷಿಯನ್ಸ್ ನ ಬ್ಯಾನರ್ ಅಡಿಯ ಸಹಯೋಗದೊಂದಿಗೆ 'ರೋಲ್ ಆಫ್ ಅಕಾಡೆಮಿಯ ಇನ್ ಎಂಪವರಿಂಗ್ ಇಂಡಿಯಾ ಥ್ರೂ ರಿಸರ್ಚ್ ಅಂಡ್ ಇನ್ನೋವಷನ್: ದಿ ವಿಷನ್ ಆಫ್ ವಿಕಸಿತ ಭಾರತ್ ಎಂಬ ಒಂದು ದಿನದ ವಿಶೇಷ ಶೈಕ್ಷಿಕ್ ಕಾರ್ಯಕ್ರಮ ಇದೇ ಸೆಪ್ಟೆಂಬರ್ 27ರಂದು ಭಾನುವಾರ ಬೆಳಗ್ಗೆ 10:30 ಗಂಟೆಗೆ ಬೆಂಗಳೂರು ನಗರದ ಆರ್‌ವಿ ಟೀಚರ್ಸ್ ಕಾಲೇಜು, ಜಯನಗರದಲ್ಲಿ ಆಯೋಜಿಸಲಾಗಿದೆ ಎಂದು ಎಬಿಆರ್‌ಎಸ್‌ಎಂ ಸಂಯೋಜಕರಾದ ಡಾ. ಶಿವಪೂಜಿ ಕೋಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಅತಿಥಿಗಳಾಗಿ ಸಿಎಸ್‌ಐಆರ್ ನ ಮಹಾನಿರ್ದೇಶಕರು ಹಾಗೂ ಡಿಎಸ್‌ಐಆರ್ ಕಾರ್ಯದರ್ಶಿಯಾದ ಡಾ. ಶ್ರೀಮತಿ ಎನ್. ಕಲೈ ಸೆಲ್ವಿ, ವಿಶೇಷ ಆಹ್ವಾನಿತರಾಗಿ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘದ ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ಶ್ರೀ ಗುಂತ ಲಕ್ಷ್ಮಣ ಜೀ, ಗೌರವ ಅತಿಥಿಗಳಾಗಿ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ ಖಜಾಂಚಿ ಶ್ರೀ ಪಿ.ಎಸ್. ವೆಂಕಟೇಶ್ ಬಾಬು, ವಿವಿಧ ವಿವಿಗಳ ಕುಲಪತಿಗಳು, ಪ್ರಾಧ್ಯಾಪಕರು, ಸಂಶೋಧಕರು, ಶಿಕ್ಷಣ ತಜ್ಞರು, ಶೈಕ್ಷಣಿಕ ಮಾರ್ಗದರ್ಶಕರು,
ಉಪನ್ಯಾಸಕರು ಮತ್ತಿತರರು ಸೇರಿದಂತೆ ಭಾಗವಹಿಸಲಿದ್ದಾರೆ ಎಂದು ರಾಜ್ಯ ಸಂಯೋಜಕರು ತಿಳಿಸಿದ್ದಾರೆ.
ಇಲ್ಲಿ ಪ್ರಮುಖವಾಗಿ ಸಂಶೋಧನೆ ಮತ್ತು ಆವಿಷ್ಕಾರಗಳ ಮೂಲಕ ಭಾರತವನ್ನು ಸಶಕ್ತಗೊಳಿಸುವಲ್ಲಿ ಶಿಕ್ಷಣದ ನಾವೀನ್ಯತೆಗಳ ಮೂಲಕ ದೇಶದ ಪ್ರಗತಿ ಮತ್ತು ವಿಕಸಿತ ಭಾರತ್ ಕನಸನ್ನು ನನಸು ಮಾಡುವ ಕುರಿತು ಇನ್ನಿತರ ವಿಷಯಗಳನ್ನು ಪ್ರಮುಖವಾಗಿ ಚರ್ಚಿಸಲಾಗುತ್ತದೆ ಎಂದರು.