ಬೆಂಗಳೂರು : ನಗರದ ಮಹಾರಾಣಿ ಕ್ಲಸ್ಟರ್ ವಿವಿಯ ವತಿಯಿಂದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ನಾಳೆ ಬೆಳಗ್ಗೆ ಶನಿವಾರ 10.30ಕ್ಕೆ ಮಹಾರಾಣಿ ಕಲಾ ಮಹಾವಿದ್ಯಾಲಯದ ಪ್ರಾಂಗಣದಲ್ಲಿ ಆಯೋಜಿಸಿದೆ ಎಂದು ಮೌಲ್ಯಮಾಪನ ಕುಲಸಚಿವರು ಹಾಗೂ ಮಾನವಿಕ ಮತ್ತು ಕಲಾ ವಿಭಾಗದ ನಿರ್ದೇಶಕರಾದ ಪ್ರೊ. ವೈ. ರಮೇಶ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಚಿವರಾದ ರಿಜ್ವಾನ್ ಅರ್ಷದ್ ರವರು, ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಉಪಸಭಾಪತಿ ಹಾಗೂ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣನವರು, ಕನಕಪುರದ ರೂರಲ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಡಾ. ಎಚ್.ಕೆ. ಶ್ರೀಕಂಠರವರು, ಅಧ್ಯಕ್ಷತೆಯನ್ನು ಕುಲಪತಿಗಳಾದ ಡಾ. ಅಶೋಕ ಎಸ್.ಬಿ. ವಹಿಸಲಿದ್ದು, ಘನ ಉಪಸ್ಥಿತಿಯಲ್ಲಿ ಆಡಳಿತ ಕುಲಸಚಿವೆ ಸೀಮಾ ಬಿ. ನಾಯಕ್, ಮೌಲ್ಯಮಾಪನ ಕುಲಸಚಿವರು ಹಾಗೂ ಮಾನವಿಕ ಮತ್ತು ಕಲಾ ವಿಭಾಗದ ನಿರ್ದೇಶಕರಾದ ಪ್ರೊ. ವೈ. ರಮೇಶ್, ವಿತ್ತಾಧಿಕಾರಿ ಎಂ.ಎಸ್. ಚೇತನ್ ಕುಮಾರ್, ಆಡಳಿತ ಉಪ ಕುಲಸಚಿವರಾದ ಪ್ರೊ. ಎಲ್.ಎಚ್. ಶಿವಶಂಕರಪ್ಪ, ಪ್ರೊ. ಎಸ್.ಡಿ. ನಾಗೇಂದ್ರ, ಮೌಲ್ಯಮಾಪನ ಉಪ ಕುಲಸಚಿವ ಶ್ರೀನಾಥ್ ರಾಜ್ ಮತ್ತು ಕಾರ್ಯಕಾರಿ ಮಂಡಳಿ (ಸಿಂಡಿಕೇಟ್) ಸದಸ್ಯರಾದ ಶ್ರೀ ಸಂತೋಷ್ ರೆಡ್ಡಿ, ರಮ್ಯಾ ರಮೇಶ್, ಸ್ಕೂಲ್ ಆಫ್ ಹೋಂ ಸೈನ್ಸ್ ನ ನಿರ್ದೇಶಕಿ ಪ್ರೊ. ಮಮತಾ ಬಿ, ಸ್ಕೂಲ್ ಆಫ್ ಕಾಮರ್ಸ್ ಅಂಡ್ ಮೇನೇಜ್‌ಮೆಂಟ್ ನ ನಿರ್ದೇಶಕ ಪ್ರೊ. ಮುನಿವೆಂಕಟಪ್ಪ, ಸ್ಕೂಲ್ ಆಫ್ ಸೈನ್ಸ್ ನ ನಿರ್ದೇಶಕಿ ಪ್ರೊ. ಅರುಣ್ ಜ್ಯೋತಿ ಮಥಾಯಸ್ ಹಾಗೂ ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಕುಶಲ, ಮಹಾರಾಣಿ ಮಹಿಳಾ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಆರ್.ಕೆ. ವಾಣಿಶ್ರೀ, ವಿ.ಎಚ್.ಡಿ ಗೃಹ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ವಜೀಹಾ ಸುಲ್ತಾನ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ವಿವಿಧ ವಿಷಯಗಳ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿ ವೃಂದವರು ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.