LIVE TV StateNationalPoliticsCrimeEntertainmentSportsEducationFINANCE & TAXATION
Districts

ನಿರಂತರ ಮಳೆಯಿಂದಾಗಿ ಸೋರುತ್ತಿರುವುದು ಸಾರ್ವಜನಿಕ ಆಸ್ಪತ್ರೆ


  • ರಾಜು ಕಟ್ಟಿಮನಿ


ಕವಿತಾಳ: ಕಳೆದ ಒಂದು ದಿನದಿಂದ ನಿರಂತರ ಮಳೆ ಆಗುತ್ತಿರುವುದರಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮೇಲ್ಛಾಣಿಯಲ್ಲಿ ಸೋರುತ್ತಿದ್ದು ರೋಗಿಗಳು ಸಂಕಷ್ಟ ಎದುರಾಗಿದೆ. ಅದರಲ್ಲೂ ಸಮುದಾಯದ ಆಸ್ಪತ್ರೆಗೆ ಹೆರಿಗೆಗೆಂದು ಆಗಮಿಸುವ ಗರ್ಭಿಣಿಯರು ತಂಪಾದ ವಾತಾವರಣದಿಂದ ಆಡಳಿತ ಮಂಡಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.



ಸುತ್ತಲಿನ ಗ್ರಾಮೀಣ ಪ್ರದೇಶದ ಜನರಿಂದ ನಿತ್ಯ ಜನದಟ್ಟಣೆಯಿಂದ ತುಂಬಿ ತುಳುಕುತ್ತಿದೆ. ವೈದ್ಯರ, ಸಿಬ್ಬಂದಿ ಕೊರತೆ ಕಾಡುತ್ತಿದೆ. ಅಲ್ಲದೆ ಮೂಲ ಸೌಕರ್ಯಗಳ ಕೊರತೆ ಇಲ್ಲದಂತಾಗಿದೆ. ಇಲ್ಲಿನ ರೋಗಿಗಳಿಗೆ ಸರಿಯಾದ ಶೌಚಾಲಯ ಸಹ ಇಲ್ಲದಂತಾಗಿದೆ. ಸುಮಾರು ೩೦ ಹಾಸಿಗೆ ಹೊಂದಿರುವ ಸರ್ಕಾರಿ ಆಸ್ಪತ್ರೆ ವೈದ್ಯರ ಕೊರತೆಯಿಂದ ಬರುವ ರೋಗಿಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲದಾಗಿದೆ. ಅದರಲ್ಲಿಯೇ ಇದ್ದ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅದರೆ ಮಳೆ ನೀರಿನಿಂದ ಕಟ್ಟಡ ಸೋರುವುದರಿಂದ ಆಸ್ಪತ್ರೆ ಸಿಬ್ಬಂದಿಗೂ ಸಹ ತೊಂದರೆಯಾಗುತ್ತಿದೆ.

 

ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿನಿತ್ಯ ನೂರಾರು ರೋಗಿಗಳು ಮತ್ತು ಹೊರ ರೋಗಿಗಳು ಚಿಕಿತ್ಸೆ ಪಡೆಯಲು ಬರುತ್ತಾರೆ. ಜೊತೆಗೆ ಇಲ್ಲಿ ಗರ್ಭಿಣಿಯರಯ ಹೆರಿಗೆಗೆ ಬರುವವರ ಸಂಖ್ಯೆಯಲ್ಲಿ ಹೆಚ್ಚು. ಸದ್ಯ ಮಳೆಗಾಲದಲ್ಲಿ ಬೆಚ್ಚಗೆ ಇರಬೇಕಿದ್ದ ಬಾಣಂತಿ ಮತ್ತು ಶಿಶುಗಳಿಗೆ ಈ ಆಸ್ಪತ್ರೆಯಲ್ಲಿ ವಾತಾವರಣವಿಲ್ಲವಾಗಿದೆ. ಆಸ್ಪತ್ರೆ ಸೋರುತ್ತಿದ್ದ ಪರಿಣಾಮ ತಂಪಾದ ವಾತಾವರಣ ನಿರ್ಮಾಣವಾಗಿದೆ ಎಂದು ಜನರು ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಮೇಲ್ಛಾಣಿಯಲ್ಲಿ ಸೋರುತ್ತಿದ್ದು, ಬಕೆಟ್, ಬುಟ್ಟಿ ಇಟ್ಟು ನೀರು ಆಸ್ಪತ್ರೆಗೆ ನುಗ್ಗದಂತೆ ಸಿಬ್ಬಂದಿ ಪರದಾಟ ನಡೆಸಿದ್ದಾರೆ.



ಹೆರಿಗೆ ಬಂದಿರುವ ಮಹಿಳೆಯ ಸಂಬಂಧಿಕರು ಮಾತನಾಡಿ ಈ ಆಸ್ಪತ್ರೆಯಲ್ಲಿ ಮಳೆಯಿಂದ ಛಾವಣಿ ಸೋರುತ್ತಿದೆ. ಇದರಿಂದ ಇಲ್ಲಿ ಹೆರಿಗೆಗೆ ಎಂದು  ಬರುವ ಗರ್ಭಿಣಿಯರಿಗೆ ಮತ್ತು ನವಜಾತು ಶಿಶುಗಳಿಗೆ ಬೆಚ್ಚಗಿನ ವಾತಾವರಣ ಬೇಕು. ಇಲ್ಲಿ ನೋಡಿದರ ಸಂಪೂರ್ಣ ಆಸ್ಪತ್ರೆ ತಂಪಾಗಿದೆ.  ನಮ್ಮಂತಹ ಬಡವರು ಸರ್ಕಾರಿ ಆಸ್ಪತ್ರೆಗಳನ್ನು ನಂಬಿಕೊಂಡ ಬಂದಿರುತ್ತೇವೆ ಇನ್ನು ಮುಂದೆ ಯಾರಿಗೂ ಈ ರೀತಿ ತೊಂದರೆ ಆಗದಂತೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗನೇ ಈ ಆಸ್ಪತ್ರೆ ದುರಸ್ತಿ ಮಾಡಲಿ ಎಂದು ಆಗ್ರಹಿಸಿದರು.

 

ಮಾನ್ವಿ ವೈದ್ಯಾಧಿಕಾರಿಗಳಾದ ಡಾ. ಶರಣಬಸವರಾಜ ಮಾತನಾಡಿ ಆಸ್ಪತ್ರೆಯಲ್ಲಿ ಒಂದು ಸ್ಥಳದಲ್ಲಿ ಛಾವಣಿ ಸೋರುತ್ತಿದ್ದು. ಆಸ್ಪತ್ರೆಯು ಹಳೆಯ ಕಟ್ಟಡವಾಗಿರುವುದರಿಂದ ಸೋರುತ್ತಿದ್ದು, ಸದ್ಯ ಸೋರುತ್ತಿರುವ ಮಳೆ ನೀರನ್ನು ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ರೋಗಿಗಳು ಮತ್ತು ಗರ್ಭಿಣಿ ಮಹಿಳೆಯರಿಗೆ ಬಾಣಂತಿಯರಿಗೆ ಯಾವುದೇ ತೊಂದರೆಯಾಗದಂತ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.



ಆಸ್ಪತ್ರೆಯಲ್ಲಿನ ಮೇಲ್ಛಾಣಿ ಸೋರುತ್ತಿದ್ದು ರೋಗಿಗಳು ತುಂಬಾ ಸಮಸ್ಯೆ ಉಂಟಾಗಿದೆ. ಆಸ್ಪತ್ರೆಗೆ ರೋಗವಾಸಿ ಮಾಡಿಕೊಳ್ಳಲು ಬಂದರೆ ಆಸ್ಪತ್ರೆಯ ಪರಿಸ್ಥಿತಿ ನೋಡಿದರೆ ಜೀವ ಭಯ ಹೆಚ್ಚಾಗುತ್ತದೆ. ಸಿಬ್ಬಂದಿ ಕಾಲು ಜಾರಿ ಬೀಳುವ ಪರಿಸ್ಥಿತಿ ಇದೆ. ಆದ್ದರಿಂದ ಕೂಡಲೇ ದುರಸ್ಥಿ  ಮಾಡಬೇಕು.

 

ಹುಚ್ಚಪ್ಪ ಬುಳ್ಳಾಪುರು, ಭೀಮ್ ಆರ್ಮಿ ಸಂಘಟನೆ ಗೌರವಾಧ್ಯಕ್ಷ

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ