22 Nov 2026, 06:19:19 PM|
Gold₹12413/gGold24K ₹12,413/g - 22K ₹11,369/gTap for full details
Press ID & Credential Portal
Apply / Verify  ➔
LIVE TV StateNationalPoliticsCrimeEntertainmentSportsEducationFINANCE & TAXATION
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Districts

ತುಂಗಭದ್ರ ನದಿ ಈಗ ಚರಂಡಿಯಾಗಿ ಪರಿವರ್ತನೆ ಆಗುತ್ತಿದೆ : ರಹಮತ್ ತರೀಕೆರೆ

ಕೊಪ್ಪಳ : ಜನರೇ ಇಲ್ಲದ ದೇವರನ್ನು ತೆಗೆದುಕೊಂಡು ಏನ ಮಾಡಬೇಕು, ದೇವರು ಸಮೃದ್ಧ ಆಗುವ ಸಮಯದಲ್ಲಿ ಭಕ್ತರು ಸ್ಮಶಾನದ ಕಡೆಗೆ ಸಾಗಿದ್ದಾರೆ, ಇಲ್ಲಿನ ಕಾರ್ಖಾನೆ ಕೊಳವೆಗಳು ಫಿರಂಗಿಗಳಾಗಿವೆ ಎಂದು ಹಿರಿಯ ಚಿಂತಕ ರಹಮತ್ ತರೀಕೆರೆ ಅಭಿಪ್ರಾಯ ಪಟ್ಟರು.

ಅವರು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕಾಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಅನಿರ್ಧಿಷ್ಟ ಧರಣಿಯ ೬೧ನೇ ದಿನದ ಹೋರಾಟ ಬೆಂಬಲಿಸಿ ಮಾತನಾಡಿದರು.

ತುಂಗಭದ್ರ ನದಿ ಈಗ ಚರಂಡಿಯಾಗಿ ಪರಿವರ್ತನೆ ಆಗುತ್ತಿದೆ, ಇಲ್ಲಿಂದ ಜಿಂದಾಲ್ ವರೆಗೆ ೭೦ ಕಿಮೀ ಅಪಾಯಕಾರಿ ಮಾಲಿನ್ಯದ ಕಾರಿಡಾರ್ ಆಗಿದೆ, ಅದು ಜಗತ್ತಿನ ಅತ್ಯಂತ ಕೆಟ್ಟ ಸ್ಥಳವಾಗಿ ಪರಿವರ್ತನೆ ಆಗುತ್ತಿದೆ. ಕಂಪನಿ ಮತ್ತು ಅವರ ಪರವಾಗಿರುವ ಜನ ಶತ್ರುಗಳನ್ನು ನಮ್ಮ ನಡುವೆ ಹುಟ್ಟು ಹಾಕಿರುವದು ಬಹಳ ದೊಡ್ಡ ನೋವಿನ ಸಂಗತಿ.

ಸರಕಾರಗಳೇ ಜನರ ಮೇಲೆ ಯುದ್ಧ ಸಾರಿದ ಹಾಗಿದೆ ಇಲ್ಲಿನ ಪರಿಸ್ಥಿತಿ. ಆದ್ದರಿಂದ ಇದು ಎಲ್ಲಾ ಜನರ ಹೋರಾಟ ಆಗಬೇಕಿದೆ, ಅದರ ವಿರುದ್ಧ ಹೋರಾಡಬೇಕಿದೆ. ಕೊಪ್ಪಳದ ಗವಿಮಠದ ಜಾತ್ರೆಯೂ ಸಹ ಜನರ ಪರವಾಗಿ ನಿಲ್ಲಬೇಕು, ಇಲ್ಲಿನ ದೂಳು, ಹೊಗೆ, ವಿಷಾನಿಲದ ವಿರುದ್ಧದ ಹೋರಾಟವಾಗಬೇಕಿದೆ. ತಮಗೆ ಕೊಪ್ಪಳದ ಕಾರ್ಖಾನೆ ಕೊಳವೆಗಳು ಇಲ್ಲಿನ ಜನರನ್ನು ಕೊಲ್ಲುವ ಫಿರಂಗಿಗಳ ರೀತಿಯಲ್ಲಿ ಕಾಣುತ್ತಿವೆ, ಇದು ಬದುಕಿನ ಹಕ್ಕಿನ ಹೋರಾಟವಾಗಿದೆ ಎಂದರು.

ಇಲ್ಲಿನ ಕೃಷಿ ಕೆಟ್ಟು ಹೋಗಿದೆ ಹೂವು ವಿಷವಾಗಿ ಪರಾಗಸ್ಪರ್ಶವೇ ಇಲ್ಲದಾಗಿದೆ, ಹಸಿರನ್ನು ಸಂಭ್ರಮಿಸುವ ಯಾವುದೇ ಲಕ್ಷಣ ಇಲ್ಲವೆಂದರೆ ನಮ್ಮಂತಹ ಕವಿಗಳು ಅಲ್ಲಿ ವಿಷಾಧದ ಗೀತೆ ಬರೀಬೇಕು ಅಷ್ಟೇ ಅಂದರು.



ಶಾಸಕ ಸಂಸದರ ನಿಲುವು ಸ್ಪಷ್ಟವಾಗಲಿ : ಯುವ ರೈತ ಗವಿಸಿದ್ದಪ್ಪ ಪುಟಗಿ ಮಾತನಾಡಿ, ಈಗಾಗಲೇ ಇಲ್ಲಿ ಕೃಷಿ ಇಲಾಖೆ ಬೆಳೆ ಬೆಳೆಯಬೇಡಿ ಅನ್ನುತ್ತಿವೆ, ತೋಟಗಾರಿಕೆ ನಿಂತು ಹೋಗಿದೆ ಪಶುಸಂಗೋಪನೆ ಇಲಾಖೆ ದನಕರು ಸಾಕಬೇಡಿ ಎಂದಿದ್ದಾರೆ, ಇಲಾಖೆಗಳು ಇದನ್ನು ಬಫರ್ ಜೋನ್ ಎಂದರೂ ಸಹ ಅಲ್ಲಿ ಗಿಡ ಬೆಳೆಯಲ್ಲ. ಅನೇಕ ಅಧಿಕಾರಿಗಳು ಕಾರ್ಖಾನೆ ಪರವಾಗಿ ಕೆಲಸ ಮಾಡುತ್ತಿದ್ದಾರೆ, ಇಲ್ಲಿ ಕ್ಯಾನ್ಸರ್ ನಿಂದ ಈ ವರ್ಷ ನಾಲ್ಕು ಜನ ಸತ್ತಿದ್ದಾರೆ ಆದರೆ ಇಲ್ಲಿ ಅಧ್ಯಯನ ಮಾಡುವ ಸಂಸ್ಥೆಗಳು ಮತ್ತು ಸಮಿತಿಗಳು ಕೇವಲ ಕಾರ್ಖಾನೆ ಪರವಾಗಿ ಸೂಟ್ ಕೇಸಿಗೆ ಕೆಲಸ ಮಾಡುತ್ತಿರುವದು ಸ್ಪಷ್ಟ. ನದಿ ಸಂರಕ್ಷಣೆ ಕೇವಲ ನಾಟಕ, ಇಲ್ಲಿ ಎಲ್ಲವೂ ಹಾಳಾಗಿದೆ ಎಂದರು.

ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಕಾರ್ಖಾನೆ ವಿರುದ್ಧದ ಈ ಹೋರಾಟದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ನಾಲ್ಕು ದಿಗ್ಗಜರಾದ ಹೆಚ್. ಎಸ್. ಪಾಟೀಲ್, ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಎ. ಎಂ. ಮದರಿ ಮತ್ತು ಅತಿಥಿ ರಹಮತ್ ತರೀಕೆರೆ ಅವರು ಇರುವ ವೇದಿಕೆಯಾಗಿದ್ದು ಸರಕಾರ ಮತ್ತು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು.

ಧರಣಿಯಲ್ಲಿ ಪುಷ್ಪಲತಾ ಏಳುಭಾವಿ, ಬಿ.ಜಿ.ಕರಿಗಾರ, ಸಾವಿತ್ರಿ ಮುಜುಮದಾರ್, ಸಿ. ವಿ. ಜಡಿಯವರ, ಎಸ್. ಬಿ. ರಾಜೂರು, ಗಂಗಾಧರ ಖಾನಾಪೂರ, ರವಿ ಕಾಂತನವರ, ಕವಿ ಮಹೇಶ ಮನ್ನಾಪುರ, ಎಂ. ಡಿ. ಪಾಟೀಲ್, ಶಂಭುಲಿಂಗಪ್ಪ ಆರ್. ಹರಗೇರಿ, ಮಂಜುನಾಥ್ ಆಟೋ, ಮಂಜುನಾಥ್ ಕೊಂಡನಹಳ್ಳಿ, ಶಾಂತಯ್ಯ ಅಂಗಡಿ, ಯಲ್ಲಪ್ಪ ಕೋಳೂರು, ಎಸ್. ಮಹಾದೇವಪ್ಪ ಮಾವಿನಮಡು, ಈರಯ್ಯಸ್ವಾಮಿ ಸಾಲಿಮಠ, ಗೀತಾ ಭೋವಿ, ಸದಾಶಿವ ಪಾಟೀಲ್, ರಮೇಶ ಡಂಬ್ರಳ್ಳಿ ಕುಣಿಕೇರಿ, ರಮೇಶ ಕೋಳೂರು, ಶಿವಪ್ಪ ಜಲ್ಲಿ ಬಸವರಾಜ್ ನರೇಗಲ್, ಪಾಮಣ್ಣ ಕೆ ಮಲ್ಲಾಪುರ, ಮಖ್ಬುಲ್ ರಾಯಚೂರು ಪಾಲ್ಗೊಂಡರು.

ಇದಕ್ಕೂ ಮೊದಲು ಬೆಳಿಗ್ಗೆ ಖ್ಯಾತ ವಿಮರ್ಶಕ, ಸಂಶೋಧಕ ರಹಮತ್ ತರೀಕೆರೆ ಅವರು ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕರು ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಪುಸ್ತಕ ಪ್ರಕಾಶ ಡಿ.ಎಂ.ಬಡಿಗೇರ, ಮಾಲಾ ಬಡಿಗೇರ ಅವರು ಕಾರ್ಖಾನೆಗಳಿಂದ ಬಾಧಿತವಾದ ಗಿಣಿಗೇರಿ, ಅಲ್ಲಾನಗರ, ಹಿರೇಬಗನಾಳ, ಚಿಕ್ಕಬಗನಾಳ, ಕುಣಿಕೇರಿ, ಕುಣಿಕೇರಿ ತಾಂಡಾ, ಹಾಲವರ್ತಿ ಗ್ರಾಮಗಳಿಗೆ ವಾಸ್ತವ ಸ್ಥಿತಿ ವೀಕ್ಷಿಸಿದರು.   ಹಿರೇಬಗನಾಳ ಗ್ರಾಮದ ಕರಿಯಮ್ಮ ದೇವಸ್ಥಾನದಲ್ಲಿ ಸೇರಿದ ರೈತರನ್ನು ರಹಮತ್ ತರೀಕೆರೆ ಇವರ ತಂಡದಲ್ಲಿದ್ದವರು ಮಾತನಾಡಿಸಿ ಮಾಹಿತಿ ಪಡೆದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೀಪಗಳ ಹಬ್ಬದ ಮಹತ್ವ, ಆಚರಣೆಯ ವಿಧಿ ವಿಧಾನ ಇಲ್ಲಿದೆಕೋಡಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಇಟಲಿಯ ಹೈಡ್ರೋನಿಕ್' ಸಂಸ್ಥೆ ಹಾಗೂ 'ಲಿಫ್ಟ್ ಎಕ್ಸ್ಪೋಗೆ' ಡಾ. ಬಿ.ಎಂ. ಉಮೇಶ್ ಕುಮಾರ್ ಭೇಟಿಮಕ್ಕಳನ್ನು ಮೊಬೈಲ್ನಿಂದ ದೂರವಿಟ್ಟು ಕ್ರೀಡೆಗಳಲ್ಲಿ ತೊಡಗಿಸಿ: ಬಸವರಾಜ್ ಶೀಲವಂತರ್ ಕರೆನಕಲಿ ಮತದಾರರಿಗೆ ರಕ್ಷಣೆ ನೀಡುವುದೇ ಎಸ್ಐಆರ್ ವಿರೋಧಿಗಳ ಅಜೆಂಡಾ ಅಲ್ಲವೇ?” – ಪ್ರಭಾಕರ್ ರಾಗಿ ಅಂಗಡಿಗೆ ಬಂದವರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆಹಳ್ಳಿ-ಹಳ್ಳಿಗೆ ತೆರಳಿ ಕಾಂಗ್ರೆಸ್ ಭದ್ರಕೋಟೆ ನಿರ್ಮಿಸುತ್ತಿರುವ ಡಾ. ಯೋಗೇಶ್ ಬಾಬುವಾಲ್ಮೀಕಿನಾಯಕ ಸಮಾಜದವರು ಖಡ್ಗದ ಬದಲಾಗಿ ಶಿಕ್ಷಣದ ಅಸ್ತ್ರಹಿಡಿಯಿರಿಚಲನಚಿತ್ರ ನಟ, ನಿರ್ದೇಶಕ ಚಂದ್ರಹಾಸ ಆಳ್ವರಿಗೆ ಸನ್ಮಾನಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾದಲ್ಲಿ ಫ್ರೆಷರ್ಸ್ ಡೇ ಹಾಗೂ ಕನ್ನಡ ರಾಜ್ಯೋತ್ಸವ