LIVE TV StateNationalPoliticsCrimeEntertainmentSportsEducationFINANCE & TAXATION
Districts Bangalore

ನ್ಯಾಯ ಸಿಗುವವರೆಗೂ ಪ್ರತಿಭಟನೆ ಹಿಂಪಡೆಯುವ ಪ್ರಶ್ನೆ ಇಲ್ಲ

ಕಾಲೇಜು ಶಿಕ್ಷಣ ಇಲಾಖೆ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿದರೂ ಕೂಡ ಸಮಸ್ಯೆ ಇತ್ಯರ್ಥ ಆಗಲಿಲ್ಲ!

ಬೆಂಗಳೂರು: ನಗರದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ವಿವಿಧ ವಿಷಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಹೋದ (ಆಗಸ್ಟ್ ತಿಂಗಳಲ್ಲಿ) ಎರಡು ತಿಂಗಳಿಂದ ಸಂಬಳ ನೀಡಿಲ್ಲವೆಂದು ಸೋಮವಾರ ಮಧ್ಯಾಹ್ನದಿಂದ ಬುಧವಾರ ಸಂಜೆಯ ವರೆಗೆ ಗೌರವಧನದ ಸಲುವಾಗಿ, ಪ್ರತಿಭಟನೆಯನ್ನು ವಿವಿಯ ಕುಲಪತಿ ಕಚೇರಿ ಎದುರು ಪ್ರತಿಭಟನೆ ನಡೆಸಿ 100ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ತಮ್ಮ ಆಕ್ರೋಶವನ್ನು ಹೊರಹಾಕಿದರು, ಬುಧವಾರ ಸಂಜೆವ ವರೆಗೆ ಏನು ಕೂಡ ಭರವಸೆ ನೀಡಿಲ್ಲ.

 

ಸಮಸ್ಯೆ ಹಿನ್ನೆಲೆ: ಕಾಲೇಜು ಶಿಕ್ಷಣ ಇಲಾಖೆಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡ ಅತಿಥಿ ಉಪನ್ಯಾಸಕರನ್ನು ಕಾಲೇಜು ಶಿಕ್ಷಣ ಇಲಾಖೆಯ ವತಿಯಿಂದ ಆಯ್ಕೆ ಮಾಡಿ, ಮಹಾರಾಣಿ ಕ್ಲಸ್ಟರ್ ವಿವಿಗೆ ಕಳಿಸಿ ಕೊಟ್ಟಿತು. ನಂತರದಲ್ಲಿ ಆಗಸ್ಟ್ 10ರಂದು ಕರ್ತವ್ಯಗೆ ಹಾಜರಾಗಲು ವ್ಯವಸ್ಥೆ ಮಾಡಿದರು. ಹಿಂದಿನ ಕುಲಪತಿ ಪ್ರೊ. ಕೆ.ವೈ.ನಾರಾಯಣಸ್ವಾಮಿ, ಕುಲಸಚಿವ ಪ್ರೊ. ರಮೇಶ್ ವೈ, ಉಪ ಕುಲಸಚಿವ ಪ್ರೊ. ಎಲ್.ಎಚ್. ಶಿವಶಂಕರಪ್ಪ ಸೇರಿದಂತೆ ಇನ್ನಿತರ ಆಡಳಿತ ಮಂಡಳಿಯು ಸಭೆಯಲ್ಲಿ ಎಲ್ಲಾ ಅತಿಥಿ ಉಪನ್ಯಾಸಕರ ಉದ್ದೇಶಿಸಿ ಮೌಖಿಕವಾಗಿ ಎಲ್ಲಾ ಅತಿಥಿ ಉಪನ್ಯಾಸಕರಿಗೆ ಕಾಲೇಜು ಶಿಕ್ಷಣ ಇಲಾಖೆಯ ನಿಯಮಾನುಸಾರ ಎಲ್ಲ ರೀತಿಯ ನೀಡಿರುವ ಹತ್ತು ತಿಂಗಳ ವೇತನ ಹಾಗೂ ಪ್ರತಿ ತಿಂಗಳು 10 ಒಳಗೆ ಗೌರವಧನ ಮತ್ತು ಸೇವಾ ಪ್ರಮಾಣ ಪತ್ರವನ್ನು ಶಿಕ್ಷಣ ಇಲಾಖೆಯಿಂದ ನಿಮಗೆ ಕೊಡಿಸಿ ಕೊಡುತ್ತೇವೆ ಎಂದು ಈ ಮೇಲಿನವರು ಸೇರಿ ಸೌಲಭ್ಯಗಳ ಬಗ್ಗೆ ಮೌಖಿಕವಾಗಿ ಭರವಸೆ ನೀಡಿದರು.

 

ಆದರೆ, ಕಾಲೇಜು ಶಿಕ್ಷಣ ಇಲಾಖೆ ವೇತನವೂ ನಿಯಮಾನುಸಾರ ರಾಜ್ಯದ ಎಲ್ಲ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ  35, 38 ಹಾಗೂ 40 ಸಾವಿರ ರೂಪಾಯಿನಂತೆ ಪ್ರತಿ ತಿಂಗಳಿಗೆ ಗೌರವಧನವನ್ನು ನೀಡಲಾಗುತ್ತಿದೆ. ಆದರೆ ಎಲ್ಲಾ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರಿಗೆ ಗಂಟೆಗಳ ಆಧಾರದ ಮೇಲೆ ಸಂಬಳ ನೀಡುತ್ತಾರೆ ಇದೊಂದು ಯುಜಿಸಿ ನಿರ್ದೇಶನ.

 

ಪ್ರಸ್ತುತ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಹಾಗೂ ಎಲ್ಲ ವಿಶ್ವವಿದ್ಯಾಲಯಗಳ ನಿಯಮಾನುಸಾರ ಪ್ರಕಾರ ಪ್ರತಿ ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ 50,000 ರೂಪಾಯಿ ಗೌರವಧನವನ್ನು ನೀಡಲಾಗುತ್ತದೆ.

 news_1790795387_1_637.webp

 

ಪ್ರಮುಖ ಸಮಸ್ಯೆ ಉದ್ಭವ:

ಇಲ್ಲಿ ಮುಖ್ಯವಾದ ಸಮಸ್ಯೆ ಏನೆಂದರೆ ಕಾಲೇಜು ಶಿಕ್ಷಣ ಇಲಾಖೆಯ ನಿಯಮದಂತೆ ಗೌರವಧನವನ್ನು ನೀಡದೇ,  ಮತ್ತು ವಿಶ್ವವಿದ್ಯಾಲಯದ ನಿಯಮದ ಪ್ರಕಾರವೂ ಗೌರವಧನವನ್ನು ನೀಡದೇ, ಬದಲಾಗಿ ಟಿಡಿಎಸ್ ಕಟ್ ಮಾಡಿ ಕೇವಲ 30,000 ರೂಪಾಯಿನಂತೆ ತಿಂಗಳಿಗೆ ಗೌರವಧನವನ್ನು ನೀಡಲು ಸಿದ್ದರಿದ್ದೇವೆ ಎಂದು ವಿಶ್ವವಿದ್ಯಾಲಯದ ಕುಲಪತಿ, ವಿತ್ತಾಧಿಕಾರಿ ಹಾಗೂ ಆಡಳಿತ ಮಂಡಳಿಯ ಹೇಳುತ್ತಾರೆ.

 

ಇದನ್ನು ಈ ಮೇಲಿನ ಅವರು ಹೇಳಿದವುದರಿಂದ, ಇದನ್ನು ಒಪ್ಪದ ಅತಿಥಿ ಉಪನ್ಯಾಸಕರು ನಮಗೆ ಕಾಲೇಜು ಶಿಕ್ಷಣ ಇಲಾಖೆಯ ಗೌರವಧನವನ್ನು ನೀಡಿ ಇಲ್ಲವಾದರೆ, ವಿಶ್ವವಿದ್ಯಾಲಯದ ನಿಯಮದ ಪ್ರಕಾರ ಗೌರವಧನವನ್ನು ನೀಡಿ ನಮ್ಮ ಬದುಕಿಗೆ ಸಹಕರಿಸಿ ಎಂದು ಘೋಷಣೆಗಳನ್ನು ಕೂಗುತ್ತಾ ಅತಿಥಿ ಉಪನ್ಯಾಸಕರು ಪ್ರತಿಭಟನೆಯನ್ನು ನಡೆಸುತ್ತಾ ಕುಳಿತು ಅಕ್ರೋಶ ವ್ಯಕ್ತಪಡಿಸಿದರು.

 

ಇನ್ನೊಂದು ಅತಿಥಿ ಉಪನ್ಯಾಸಕರು ಅಂತಿಮ ಅಜೆಂಡಾ ವೆಂದರೆ ವಿವಿಯಿಂದ ಸಂಬಳವನ್ನು ಟಿಡಿಎಸ್ ಕಟ್ ಮಾಡದೇ ಸಂಬಳ ನೀಡಿ, ಇಲ್ಲವಾದರೆ ನಮಗೆ ಎಲ್ಲ ಅತಿಥಿ ಉಪನ್ಯಾಸಕರಿಗೆ 2026-27 ಶೈಕ್ಷಣಿಕ ಸಾಲಿನ ಎಲ್ಲರಿಗೂ ಕಾಲೇಜು ಶಿಕ್ಷಣ ಇಲಾಖೆಯ ವತಿಯಿಂದ ಎಲ್ಲಾ ಪದವಿ ಕಾಲೇಜುಗಳಿಗೆ ಗೌರವಧನವನ್ನು ಶಿಕ್ಷಣ ಇಲಾಖೆಯ ಆಯುಕ್ತರ ವತಿಯಿಂದ ಮಾಡಲೇಬೇಕು ಇದೇ ಅಂತಿಮ ನಿರ್ಧಾರವೆಂದು ಅತಿಥಿ ಉಪನ್ಯಾಸಕರು ನೋವುವನ್ನು ಹೇಳಿಕೊಂಡರು.

 

ಮೌಖಿಕ ಆದೇಶದ ಪ್ರಸಂಗಗಳು:

ಪ್ರತಿನಿತ್ಯ ವಿವಿಯ ಅಧಿಕಾರಿಗಳು ಉನ್ನತ ಶಿಕ್ಷಣ ಪ್ರಧಾನ ಪ್ರಧಾನ ಕಾರ್ಯದರ್ಶಿಯವರನ್ನು ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ಅವರನ್ನು ಇನ್ನಿತರ ಸರ್ಕಾರದ ಅಧಿಕಾರಿಗಳನ್ನು ಭೇಟಿ ನೀಡಿ ನಿಮ್ಮ ಸಮಸ್ಯೆ ನೀವೇ ಬಯಸಿಕೊಳ್ಳಬೇಕೆಂದು ಮೌಖಿಕವಾಗಿ ಆಡಳಿತ ಮಂಡಳಿಯವರು ಪ್ರತಿನಿತ್ಯ ಅತಿಥಿ ಉಪನ್ಯಾಸಕರಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಎಲ್ಲಾ ಉಪನ್ಯಾಸಕರು ತಮ್ಮ ನೋವುವನ್ನು ಮಾಧ್ಯಮ ಮಿತ್ರರಿಗೆ ನೋವು ಹಂಚಿಕೊಂಡರು.

 

ಸರ್ಕಾರದ ಉನ್ನತ ಶಿಕ್ಷಣ ಪ್ರಧಾನ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದರೂ ಕೂಡ ಸಮಸ್ಯೆಗಳನ್ನು ಆಲಿಸದ ಅತಿಥಿ ಉಪನ್ಯಾಸಕರನ್ನು ನಿನ್ನೆ ಮಂಗಳವಾರ ಸಂಜೆ ಉನ್ನತ ಶಿಕ್ಷಣ ಇಲಾಖೆ ಕಚೇರಿಯ ಹೊರಗಡೆಯಲ್ಲಿ ಪ್ರತ್ಯುತ್ತರ ನೀಡದೆ ಕಾರ್ಯದರ್ಶಿಯವರು ಜಾರಿ ಕೊಂಡರು.

 

ಅತಿಥಿ ಉಪನ್ಯಾಸಕರ ಅಂತಿಮ ನಿರ್ಧಾರವು ವಿವಿಯಿಂದ ಗೌರವಧನವನ್ನು ಟಿಡಿಎಸ್ ಕಟ್ ಮಾಡದೇ ಸಂಬಳ ನೀಡಿ, ಇಲ್ಲವಾದರೆ ಎಲ್ಲ ಅತಿಥಿ ಉಪನ್ಯಾಸಕರಿಗೆ 2026-27 ಶೈಕ್ಷಣಿಕ ಸಾಲಿನ ಎಲ್ಲರಿಗೂ ಕಾಲೇಜು ಶಿಕ್ಷಣ ಇಲಾಖೆಯಿಂದ ಎಲ್ಲ ಪದವಿ ಕಾಲೇಜುಗಳಿಗೆ ಗೌರವಧನವನ್ನು ಶಿಕ್ಷಣ ಇಲಾಖೆಯ ಆಯುಕ್ತರ ವತಿಯಿಂದ ಮಾಡಲೇಬೇಕು ಇದೇ ಅಂತಿಮ ನಿರ್ಧಾರವೆಂದು ಅತಿಥಿ ಉಪನ್ಯಾಸಕರು ನೋವುವನ್ನು ಹೇಳಿಕೊಂಡರು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯ ದಶಮಿಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ದಸರಾ ಹಾಗೂ ಆಯುಧ ಪೂಜೆಜಾತಿಭೇದವಿಲ್ಲದೆ ದಲಿತರ ಮನೆಯಲ್ಲಿ ಊಟ ಸವಿದ ಡಾ. ಬಿ. ಯೋಗೇಶ್ ಡಿಸ್ಕವರಿ ವಾಹಿನಿಯಲ್ಲಿ ಕೆಐಐಟಿ ಸಾಧನೆ ಬಣ್ಣನೆ ಕನ್ನಡಿಗರು ವಿಶಾಲತೆ, ಸಾಮರಸ್ಯ ಉಳ್ಳವರಾಗಿರುವುದರಿಂದಲೇ ಕನ್ನಡಕ್ಕೆ ಕಂಟಕ!ಹಾಡಿನ ಚಿತ್ರೀಕರಣದೊಂದಿಗೆ ‘ಚಂದ್ರಗಿರಿ’ ಚಿತ್ರೀಕರಣ ಮುಕ್ತಾಯಸರ್ವೋದಯ ಮಹಾವಿದ್ಯಾಲಯದ ಸೌಕರ್ಯ, ಶೈಕ್ಷಣಿಕ ಸಾಧನೆಗೆ ದಾವಣಗೆರೆ ವಿವಿ ಉಪಕುಲಪತಿ ಮೆಚ್ಚುಗೆಬಡತನ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನಾಚರಣೆ ಬೆಂಗಳೂರಿನಲ್ಲಿ ಐಸಿಎಸ್ಐ ಇನ್ವೆಸ್ಟ್ ಇಂಡಿಯಾ ಶೃಂಗಸಭೆ ಆಯೋಜನೆಎಚ್.ಡಿ. ಕುಮಾರಸ್ವಾಮಿ ವಿವಾದಾತ್ಮಕ ಮಾತುಗಳಿಗೆ ಖಂಡನೆ, ಕ್ಷಮೆಯಾಚನೆಗೆ ಆಗ್ರಹ: ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಅರ್ಜುನ್ ಗೋಪಾಲಯ್ಯ