ಬೆಂಗಳೂರು: 'ಇಂದಿನ ಹೆಚ್ಚಿನ ಯುವಕರು ಪಾರ್ಶ್ವವಾಯು ಕಾಯಿಲೆಗೆ ಒಳಗಾಗುತ್ತಿದ್ದಾರೆ' ಎಂದು ಕರ್ನಾಟಕ ಮೆದುಳು ಅರೋಗ್ಯ ಉಪಕ್ರಮ ಸಂಯೋಜಕರಾದ ಡಾ. ವೈಶಾಲಿ ಅವರು ಆತಂಕ ವ್ಯಕ್ತಪಡಿಸಿದರು.
ಬೆಂಗಳೂರಿನ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟೀಯ ಸೇವಾ ಯೋಜನೆ ಘಟಕ-1 ಮತ್ತು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಕೆ. ಸಿ. ಜನರಲ್ ಆಸ್ಪತ್ರೆಯ ಸಹಯೋಗದಲ್ಲಿ ಗುರುವಾರ ಕುವೆಂಪು ಸಭಾಂಗಣದಲ್ಲಿ ವಿಶ್ವ ಪಾರ್ಶ್ವವಾಯು ದಿನಾಚರಣೆಯನ್ನು ಆಚರಿಸಲಾಯಿತು.
“ಯುವಪೀಳಿಗೆಯು ನಿದ್ರಾಹೀನತೆ, ವಿವಿಧ ದುಶ್ಚಟಗಳಿಂದ 20 ವರ್ಷದೊಳಗಿನವರು ಈ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಕ್ರಮಬದ್ಧ ಜೀವನ ಕ್ರಮ ಅಳವಡಿಸಿಕೊಳ್ಳುವ ಮೂಲಕ ಈ ಕಾಯಿಲೆಯಿಂದ ದೂರ ಉಳಿಯಬಹುದೆಂದು” ಹೇಳಿದರು.
ಪಾರ್ಶ್ವವಾಯುವಿಗೆ ಮುಖ್ಯಕಾರಣ ಅಧಿಕ ರಕ್ತದೊತ್ತದ, ಮಧುಮೇಹ, ದೂಮಪಾನ, ಕುಡಿತ, ಅತಿಯಾದ ಮೊಬೈಲ್ ಬಳಕೆ ಎಂದರು.
ಪಾರ್ಶ್ವವಾಯುವಿಗೆ ಒಳಗಾದವರು ಗೋಲ್ಡನ್ ಸಮಯ ಸುಮಾರು ಒಂದು ಗಂಟೆಯೊಳಗೆ ಸೂಕ್ತ ಚಿಕಿತ್ಸೆ ದೊರೆತರೆ ಕಾಯಿಲೆಯಿಂದ ಪಾರಗಬಹುದು ಎಂದು ಹೇಳಿದರು.
ಪಾರ್ಶ್ವವಾಯುವು ಮುಖಚರ್ಯೆ ಬದಲಾವಣೆ, ದೈಹಿಕ ಅಂಗಾಂಗಗಳ ಸೆಳೆತ, ನರ ದೌರ್ಬಲ್ಯ, ಕಣ್ಣು ಮಂಜಾಗುವಿಕೆ ಇಂತಹ ಲಕ್ಷಣಗಳು ತೋರಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಬಿ. ಶಿವಣ್ಣ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ದುಶ್ಚಟಗಳಿಗೆ ಒಳಗಾಗದೆ ಆರೋಗ್ಯದ ಕಡೆ ಕಾಳಜಿ ವಹಿಸಬೇಕೆಂದು ಕರೆ ನೀಡಿದರು. ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಶಿಸ್ತು-ಸಂಯಮ, ಸೇವಾ ಮನೋಭಾವ ಕಲಿಸುತ್ತದೆ ಎಂದು ಹೇಳಿದರು.
ಫಿಸಿಯೋಥೆರ ಪಿಸ್ಟ್ ಡಾ. ಮಹಮ್ಮದ್ ನಿಯಾಜ್ ಅವರು ಮಾತನಾಡಿ ಪಾರ್ಶ್ವವಾಯುವಿಗೆ ಒಳಗಾದಂತಹ ವ್ಯಕ್ತಿಗಳಿಗೆ ಸೂಕ್ತ ರೀತಿಯ ದೈಹಿಕ ಮತ್ತು ಮಾನಸಿಕ ಚಿಕಿತ್ಸೆ ನೀಡಿದರೆ ಅಂಗವೈಕಲ್ಯದಿಂದ ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರವು ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಮೆದುಳು ಆರೋಗ್ಯ ಉಪಕ್ರಮ ವಿಭಾಗಗಳನ್ನು ಆರಂಭಿಸಿದ್ದು ಸಾರ್ವಜನಿಕರು ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು, ಇದರ ಜೊತೆಗೆ ರೋಗಿಗಳಿಗೆ ಇಲಾಖೆಯ ವತಿಯಿಂದ ಟೆಲಿನ್ಯೂರೋಲಜಿ ಚಿಕಿತ್ಸೆಯ ವ್ಯವಸ್ಥೆಯನ್ನು ಸಹ ಹೊಂದಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಕಭಿ ಜಿಲ್ಲಾ ಸಂಯೋಜಕರಾದ ಕೇಶವ ಎಂ. ಪಿ. ಡಾ. ವಿನೋದ್, ಸಹ ಪ್ರಾಧ್ಯಾಪಕಾರದ ಶ್ರೀಮತಿ ರೇಣುಕಾ. ಎಲ್, ಮತ್ತು ಎನ್.ಎನ್.ಎಸ್ ಕಾರ್ಯಕ್ರಮಾಧಿಕಾರಿ ಡಾ. ರಾಘವೇಂದ್ರ. ಎಸ್. ಜಿ. ಉಪಸ್ಥಿತರಿದ್ದರು.