LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಅಯೋಧ್ಯೆಯಲ್ಲಿ ಶ್ರೀ ಪುರಂದರದಾಸರ ಪುತ್ಥಳಿ ಅನಾವರಣ

ಅಯೋಧ್ಯೆ: ಆರು ಹಿತವರು ನಿನಗೆ ಈ ಮೂವರೊಳಗೆ, ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ, ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ, ಅಣುವಾಗಬಲ್ಲ ಮಹತ್ತಾಗಬಲ್ಲ, ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ, ಅಪಾಯ ಕೋಟಿಗಳಿಗೆ ಉಪಾಯ ಒಂದೇ, ಬಲ್ಲವರು ಪೇಳಿರಿ ಸೊಲ್ಲನೆಲ್ಲ, ಬೇವು ಬೆಲ್ಲದೊಳಿಡಲೇನು ಫಲ? ಭಾಷೆ ಹೀನರ ಸಂಗವಭಿಮಾನ, ಭಂಗ ಬ್ರಹ್ಮಾಂಡದೊಳಗೆ ಅರಸಿ ನೋಡಲು..... ಇಂತಹ ಲಕ್ಷಾಂತರ ಕೀರ್ತನೆ, ಸುಳಾದಿಗಳನ್ನು ರಚಿಸಿ ದಾಶ ಸಾಹಿತ್ಯಕ್ಕೆ ಶ್ರೇಷ್ಠ ಕೊಡುಗೆ ನೀಡಿದ ಶ್ರೀ ಪುರಂದರ ದಾಸರ ಪ್ರತಿಮೆಯನ್ನು ಅಯೋಧ್ಯೆಯಲ್ಲಿ ಅನಾವರಣಗೊಳಿಸಲಾಗಿದೆ.

 

ಅಲ್ಲಿನ ಸರ್ಕಾರ ಕರ್ನಾಟಕದ ದಾಸಶ್ರೇಷ್ಠರಿಗೆ ಗೌರವ ನೀಡುವ ಮೂಲಕ ಹರಿದಾಸ ಪರಂಪರೆಗೆ ಉನ್ನತ ಸ್ಥಾನ ನೀಡಿದೆ. ಕ್ರಿ.ಶ. ೧೪೯೪-೧೫೬೪ ರಲ್ಲಿ ಜೀವಿಸಿದ್ದ ಪುರಂದರದಾಸರು ಸರ್ವಶ್ರೇಷ್ಠ ಹರಿದಾಸರಲ್ಲಿ ಓರ್ವರು. ರಾಮ ನಾಮ, ವಿಠ್ಠಲ ನಾಮಗಳನ್ನು ಹೇಳುತ್ತಾ ಸಮಾಜ ಸುಧಾರಣೆಗೆ ಜೀವನವನ್ನೇ ಮುಡಿಪಾಗಿಟ್ಟವರು. ಅಯೋಧ್ಯೆಯ ತೇಧಿ ಬಜಾರ್‌ನಲ್ಲಿರುವ ಬೃಹಸ್ಪತಿ ಕುಂಡದಲ್ಲಿ ಕರ್ನಾಟಕದ ದಾಸಶ್ರೇಷ್ಠ ಪುರಂದರದಾಸರ ಪ್ರತಿಮೆಯನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅನಾವರಣಗೊಳಿಸಿದ್ದಾರೆ.



ದಕ್ಷಿಣ ಭಾರತದ ಇನ್ನಿಬ್ಬರು ವಾಗ್ಗೇಯಕಾರರಾದ ಸಂತ ತ್ಯಾಗರಾಜರು, ಆರುಣಾಚಲ ಕವಿಗಳ ಮೂರ್ತಿಗಳನ್ನೂ ಲೋಕಾರ್ಪಣಗೊಳಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್,ಪುರಂದದಾಸರು, ತ್ಯಾಗರಾಜರು ಅರುಣಾಚಲ ಕವಿಗಳು ಭಾರತೀಯ ಶಾಸ್ತ್ರೀಯ ಸಂಗೀತ, ಭಕ್ತಿ ಪರಂಪರೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದವರು. ಅವರ ಕೀರ್ತನೆ, ಕಾವ್ಯಗಳು ಪ್ರೀತಿ, ಭಕ್ತಿ, ಏಕತೆಯ ಬಟ್ಟೆಗೆ ಸಮಾಜವನ್ನು ನೇಯ್ಗೆ' ಮಾಡಿದ್ದವು ಎಂದು ಬಣ್ಣಿಸಿದ್ದಾರೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ