LIVE TV StateNationalPoliticsCrimeEntertainmentSportsEducationFINANCE & TAXATION
Districts

ಸರಿಯಾಗಿ ಗೊಬ್ಬರ ಪೂರೈಕೆ ಮಾಡಲು ಆಗ್ರಹ

ನಾಯಕನಹಟ್ಟಿ : ಸರಿಯಾದ ಗೊಬ್ಬರ ಪೂರೈಕೆ ಮಾಡದ ಸರ್ಕಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಡಾ. ವಾಸುದೇವ ಮೇಟಿ ಬಣದ ಹೋಬಳಿ ಅಧ್ಯಕ್ಷನಾದ ಡಾ. ನಾಗರಾಜ್ ಮೀಸೆ ಅವರು ಚೀಮಾರಿ ಹಾಕಿದರು.

ನಾಯಕನಹಟ್ಟಿ ಪಟ್ಟಣದ ನಮ್ಮ ಗ್ರೋಮ ರ್ ಗೊಬ್ಬರದ  ಅಂಗಡಿಗೆ ಯೂರಿಯಾ ಗೊಬ್ಬರ ಬಂದಿರುವ ಕಾರಣ ನೂರಾರು ರೈತರು ಊಟ ಉಪಚಾರವಿಲ್ಲದೆ  ಬೆಳಗಿನಿಂದಲೇ  ಸರತಿ ಸಾಲಿನಲ್ಲಿ ನಿಂತು ಸರ್ಕಾರಕ್ಕೆ ಕೃಷಿ ಅಧಿಕಾರಿ ಮಂಜುನಾಥ್ ರವರಿಗೆ  ಹಾಗೂ ಸ್ಥಳೀಯ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಅವರಿಗೆ ಇಡಿ ಶಾಪ ಹಾಕಿದರು.

 ಬಿಸಿಲಲ್ಲಿ ಸರತಿ ಸಾಲಿನಲ್ಲಿ ನಿಂತ ರೈತನಿಗೆ ಅಲ್ಲಿ ಕುಡಿಯುವ ನೀರಿನ ವ್ಯವಸ್ಥೆಯು ಸಹ ಇಲ್ಲ .  ಹೇಗೋ ಏನೋ ಗೊಬ್ಬರ ಸಿಕ್ಕಿದರೆ ಸಾಕೆನ್ನುವಷ್ಟು ರೈತ ನೊಂದು ಬೆಂದು ಹೋಗಿರುತ್ತಾನೆ. ರೈತರಿಗೆ ಸರಿಯಾದ ಸಮಯಕ್ಕೆ ಸರಿಯಾಗಿ ಗೊಬ್ಬರ  ಪೂರೈಕೆ  ಮಾಡದಿದ್ದ ಬಳಿಕ  ರಾಜೀನಾಮೆ ಕೊಟ್ಟು ಮನೆಗೆ ಹೋಗುವಂತೆ ನಾಗರಿಕರು ಸಾರ್ವಜನಿಕರು ರೈತರು ಆಕ್ರೋಶ ವ್ಯಕ್ತಪಡಿಸಿದರು.

 ಈ ಸಂದರ್ಭದಲ್ಲಿ  ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಡಾ. ವಾಸುದೇವ ಮೇಟಿ ಬಣದ ನಾಯಕನಹಟ್ಟಿ ಹೋಬಳಿ ಅಧ್ಯಕ್ಷ ಡಾ ನಾಗರಾಜ್ ಮೀಸೆ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಸಾಲ ಸೋಲ ಮಾಡಿ ಬೆಳೆದಂತಹ ಬೆಳೆಗಳಿಗೆ ಸರಿಯಾದ ಸಮಯಕ್ಕೆ ಇಂತಿಷ್ಟು ಪ್ರಮಾಣದ ಯೂರಿಯಾ  ಗೊಬ್ಬರವನ್ನು ಕೊಡದಿದ್ದ ಮೇಲೆ ಇಳುವರಿ ಕುಂಟಿತಗೊಂಡು ನಿರ್ದಿಷ್ಟ ಪ್ರಮಾಣದ ಬೆಳೆ ಆಗದ ಕಾರಣ ಸಾಲಗಾರನಾಗಿ ರೈತ ಸಾಯುವಂತ ಪರಿಸ್ಥಿತಿ ಎದುರಾಗುತ್ತಿದೆ.  ಇದಕ್ಕೆ ನೇರ ಹೊಣೆಗಾರರು ಸರ್ಕಾರ ಮತ್ತು ಸ್ಥಳೀಯ ಶಾಸಕರು ಆಗಿರುತ್ತಾರೆ. ಅದರಂತೆ 10 ಎಕರೆ ಜಮೀನು ಇದ್ದಂತವರಿಗೆ ಒಂದೇ ಪಾಕೆಟ್ ಗೊಬ್ಬರ,  ಒಂದು ಎಕರೆ ಜಮೀನು ಇದ್ದಂತವನಿಗೆ ಒಂದು ಪಾಕೆಟ್ ಗೊಬ್ಬರ ಇದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.



ತತ್ ಕ್ಷಣವೇ ರೈತನಿಗೆ ಬೇಕಾಗುವಷ್ಟು ಗೊಬ್ಬರವನ್ನು ನೀಡಲೇಬೇಕು . ಇದರ ಬಗ್ಗೆ ಕೃಷಿ ಅಧಿಕಾರಿ ಮಂಜುನಾಥ್ ಬಹಳ ನಿರಾಸಕ್ತಿ ತೋರಿಸುತ್ತಿದ್ದು  ರೈತರ ಕೈಗೆ ಅವರು  ಸಿಗುತ್ತಿಲ್ಲ ರೈತರ ಸಮಸ್ಯೆಗಳನ್ನು ಕೇಳುವಷ್ಟು ತಾಳ್ಮೆ ಸಹ ಅವರಿಗಿಲ್ಲ.  ಮೂರು ದಿನ ನಾಯಕನಹಟ್ಟಿಯಲ್ಲಿ ಡ್ಯೂಟಿ ಮಾಡಿದರೆ ಇನ್ನು ಮೂರು ದಿನ ತಳಕಿನಲ್ಲಿ ಡ್ಯೂಟಿ ಮಾಡುವಂತಹ ಅಧಿಕಾರಿ  ನಮಗೆ ಬೇಡ. ಇದು ನಾಯಕನಹಟ್ಟಿ ಹೋಬಳಿ  ಪಟ್ಟಣ ಪಂಚಾಯಿತಿ ದೊಡ್ಡ ಹೋಬಳಿ ಆಗಿರುವುದರಿಂದ  ಕೃಷಿ ಅಧಿಕಾರಿ ಅವರು ಇಲ್ಲೇ ಇದ್ದು ಡ್ಯೂಟಿ ಮಾಡಬೇಕೆಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಬಂಗಾರದ ಒಡವೆಯನ್ನು ಒತ್ತೆ ಇಟ್ಟು ತಂದ ಚೀಟಿಯನ್ನು ತೋರಿಸುತ್ತ ಸಾಲವನ್ನು ತಂದಿರುವಂತಹ ರೈತ,  ವೋಟಿಗೆ ಮಾತ್ರ ರೈತ ಬೇಕು ರೈತರ ಸಮಸ್ಯೆಗೆ ರಾಜಕಾರಣಿಗಳು ಬೇಡವೇ ಎಂದು ಪ್ರಶ್ನೆ ಮಾಡಿದರು.

 ಈ ಸಂದರ್ಭದಲ್ಲಿ ನಗರ ಉಪಾಧ್ಯಕ್ಷ ಸಿಎಸ್ ರಾಘವೇಂದ್ರ, ಹೋಬಳಿ ಕಾರ್ಯದರ್ಶಿ ಕೆ.ಎಂ  ಮಂಜುನಾಥ್ ಕಂಠಪ್ಪ, ಹೋಬಳಿ ಗೌರವಾಧ್ಯಕ್ಷ ಮಂಜುನಾಥ್ ಗೌಡಗೆರೆ,  ಬಸವರಾಜ್ ಮಹದೇವಪುರ,  ಮಾನವ ಬಂದತ್ವ ವೇದಿಕೆ ಸಂಚಾಲಕರು ಎನ್ನಪ್ಪ , ಮಲ್ಲಿಕಾರ್ಜುನ, ಮಹೇಶ್ ಶಿವರಾಜ್, ನಾಗಪ್ಪ, ಬೋರಯ್ಯ, ಕಾಟಯ್ಯ, ಸಣ್ಣ ತಿಪ್ಪಯ್ಯ, ಬೋರಣ್ಣ, ತಿಪ್ಪೇಸ್ವಾಮಿ ಮಹಾಲಕ್ಷ್ಮಿ, ಗೌರಮ್ಮ ಸಾಕಮ್ಮ,  ಮಂಜುನಾಥ್, ಮಾರಣ್ಣ,  ಇನ್ನು ಅನೇಕ ರೈತರು ಭಾಗವಹಿಸಿದ್ದರು .

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ