LIVE TV StateNationalPoliticsCrimeEntertainmentSportsEducationFINANCE & TAXATION
Districts

ವಾಸವಿ ಜ್ಞಾನ ಪೀಠ ಪ್ರಥಮ ದರ್ಜೆ ಕಾಲೇಜು: ಗ್ರಾಜುಯೇಷನ್ ಡೇ

ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು; ವಿದ್ಯಾವಂತ ಸಮಾಜ ದೇಶಕ್ಕೆ ಗೌರವ-ಡಿ.ಆರ್.ವಿಜಯಸಾರಥಿ

 

ವಿಜಯನಗರ: ವಾಸವಿ ಜ್ಞಾನ ಪೀಠ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಾಜುಯೇಷನ್ ಡೇ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಾಸವಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಆರ್.ವಿಜಯಸಾರಥಿ, ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟಾರ್ ಡಾ||ಸಿ.ಎಸ್.ಕರಿಗಾರ್, ಪ್ರಾಂಶುಪಾಲರುಗಳಾದ ಪದ್ಮ ವಿ, ಡಾ||ರಂಗಸ್ವಾಮಿ ಬಿ.ವಿ. ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.



ಕಾರ್ಯದರ್ಶಿ ಡಿ.ಆರ್.ವಿಜಯಸಾರಥಿ ಮಾತನಾಡಿ, ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು, ಪ್ರತಿಯೊಬ್ಬ  ಮಕ್ಕಳಿಗೆ  ಶಿಕ್ಷಣ ದೊರೆಯಬೇಕು. ವಿದ್ಯಾವಂತ ಸಮಾಜ ಇದ್ದಾಗ ದೇಶಕ್ಕೆ ಗೌರವ. ಪದವಿ ಪೂರೈಸಿದವರಿಗೆ ಉದ್ಯೋಗ ಅವಕಾಶಕ್ಕಾಗಿ ನಮ್ಮಲ್ಲಿ ಉದ್ಯೋಗಮೇಳ ಆಯೋಜಿಸಿ, ನಿರುದ್ಯೋಗ ನಿವಾರಣೆಗಾಗಿ ನಮ್ಮ ಸಂಸ್ಥೆ ಶ್ರಮಿಸುತ್ತಿದೆ.

ಪ್ರತಿವರ್ಷ ನಡೆಯುವ ಉದ್ಯೋಗಮೇಳದಿಂದ ಇದುವರಗೆ  5000ಸಾವಿರಕ್ಕೂ ಹೆಚ್ಚು ಪದವಿ ಪೂರೈಸಿದರಿಗೆ ಪ್ರತಿಷ್ಟಿತ ಕಂಪನಿಗಳಲ್ಲಿ ಉದ್ಯೋಗ ಲಭಿಸಿದೆ ಎಂದರು.

 

ವಿದ್ಯಾಭ್ಯಾಸ ಪಡೆಯುವ ಹಕ್ಕು ನಿರಾಕರಿಸಲು ಸಾಧ್ಯವಿಲ್ಲ. ವಿದ್ಯೆಯನ್ನು ಯಾರು ಕದಿಯಲಾಗದು. ಆಸ್ತಿ, ಸಂಪತ್ತು ನಾಶವಾಗಬಹುದು. ನಾವು ಕಲಿತ ವಿದ್ಯೆ ಎಂದು ನಶಿಸುವುದಿಲ್ಲ ಎಂದು ಹೇಳಿದರು.

 

ರಿಜ್ಜಿಸ್ಟಾರ್ ಡಾ||ಸಿ.ಎಸ್.ಕರಿಗಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕೌಶಲ್ಯ ಕಲಿಸಿದರ ಉದ್ಯೋಗ ಸಿಗುತ್ತದೆ. ಕ್ಯಾಂಪಸ್ ಸಂದರ್ಶನದಿಂದ ಕಾಲೇಜು ವಿದ್ಯಾಭ್ಯಾಸ ಮುಗಿಸಿದ ತಕ್ಷಣ ಉತ್ತಮ ಉದ್ಯೋಗ ಲಭಿಸಲಿದೆ. ಶಿಕ್ಷಣದಿಂದ ಉತ್ತಮ ಪ್ರಜೆಯಾಗಿ ಒಳ್ಳೆಯ  ಜೀವನ ಸಾಗಿಸಬಹುದು. ಮಾದಕವಸ್ತು ಸೇವನೆ ಮಾಡಬೇಡಿ ಎಂದು ಹೇಳಿದರು.



 350 ವಿದ್ಯಾರ್ಥಿ, ವಿದ್ಯಾರ್ಥಿಗಳಿಗೆ  ಪದವಿ ಮತ್ತು ಮಾಸ್ಟರ್ ಪದವಿ  ಪ್ರಮಾಣ ಪತ್ರ ವಿತರಿಸಲಾಯಿತು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಮ್ಮ ರಾಜ್ಯಕ್ಕೆ ಬರಗಾಲ ಬಂದರೂ ರೈತರ ಮೇಲೆ ಕಾಳಜಿ ಇಲ್ಲದ ರಾಜ್ಯ ಸರ್ಕಾರ : ನೇಮಿರಾಜ್ ನಾಯ್ಕ.ಆರ್ ಟಿ ಐ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆಕಿಲಾರಿ ಪರಂಪರೆಯಂತೆ ಡಾ.ಬಿ.ಯೋಗೇಶ್ ಬಾಬು ಅವರಿಗೆ ಸನ್ಮಾನಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ