LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಹಾಳಾಗಿರುವ ಮಾವಿನ ಹಣ್ಣಿನಿಂದ ಮಾಡಿದ ಜ್ಯೂಸ್ ಕುಡಿದರೆ ಏನಾಗಬಹುದು ?

ಮಾವಿನ ಹಣ್ಣು ಎಲ್ಲರಿಗೂ ಇಷ್ಟ. ಮಾವಿನ ಹಣ್ಣಿನ ಸೀಸನ್​​ ಬಂತು ಅಂದ್ರೆ ಸಾಕು ಎಲ್ಲರ ಮನೆಯಲ್ಲಿ ಮಾವು ಕಂಗೊಳಿಸುತ್ತದೆ.

ಸಿಹಿ, ಹುಳಿ ಮಿಶ್ರಿತ ಮಾವನ್ನು ತಿನ್ನುತ್ತಿದ್ದರೆ ಆಹಾ! ಅದೆಂತ ರುಚಿ, ಅದನ್ನು ಮಾತಲ್ಲಿ ಹೇಳಿದರೆ ಸಾಲದು. ಅದರಲ್ಲಿಯೂ ಕೆಲವರಿಗೆ ಮಾವಿನಹಣ್ಣಿನಿಂದ ತಯಾರಿಸಿದ ರಸ (ಜ್ಯೂಸ್)  ಎಂದರೆ ಬಲು ಇಷ್ಟ. ಆದರೆ ಹೊರಗಡೆ ಅಂಗಡಿಗಳಲ್ಲಿ ಸಿಗುವ ಜ್ಯೂಸ್ ಎಷ್ಟು ಆರೋಗ್ಯಕರ ಎಂದು ಯೋಚಿಸಿದ್ದೀರಾ? ಕೆಲವೊಮ್ಮೆ ನಿಮಗೆ ತಿಳಿಯದಂತೆ ಸ್ವಲ್ಪ ಕೊಳೆತ ಅಥವಾ ಮೇಲ್ನೋಟಕ್ಕೆ ಸ್ವಲ್ಪ ಚೆನ್ನಾಗಿರುವ ಮಾವಿನ ಹಣ್ಣುಗಳನ್ನು ಬಳಸಿ ಜ್ಯೂಸ್ ಮಾಡಿಕೊಡಬಹುದು. ರೀತಿ ಹಾಳಾಗಿರುವ ಹಣ್ಣಿನಿಂದ ಮಾಡಿದ ಜ್ಯೂಸ್ ಕುಡಿದರೆ  ನಿಮ್ಮ ಆರೋಗ್ಯಕ್ಕೆ ಹಾನಿಕಾರ. ಅಂತಹ ರುಚಿಕರವಾದ ಮಾವಿನ ಹಣ್ಣನ್ನು ಮಾರುಕಟ್ಟೆಯಿಂದ ಖರೀದಿಸಿ ತರುತ್ತೇವೆ. ಆದರೆ ನಾವು ತರುವ ಮಾವಿನ ಹಣ್ಣುಗಳು ರಾಸಾಯನಿಕವಾಗಳಿಂದ ಕೂಡಿರುತ್ತದೆಯೇ? ಅದನ್ನು ತಿಂದರೆ ನಿಮ್ಮ ಆರೋಗ್ಯಕ್ಕೆ ಯಾವೆಲ್ಲಾ ದುಷ್ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ತಿಳಿಯೋಣ ಬನ್ನಿ.

ಇತ್ತೀಚೆಗೆ ಗುಜರಾತ್ನಲ್ಲಿ ಹಾಳಾಗಿರುವ, ಹುಳ ಬಿದ್ದ ಮಾವಿನ ಹಣ್ಣುಗಳನ್ನು ಜ್ಯೂಸ್ ತಯಾರಿಕೆಗೆ ಬಳಸಲಾಗುತ್ತಿದ್ದ ಘಟನೆ ಬೆಳಕಿಗೆ ಬಂದಿತ್ತು. ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರದ (FSSAI) ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಹಾಳಾದ ಹಣ್ಣುಗಳನ್ನು ವಶಪಡಿಸಿಕೊಂಡಿದ್ದರು. ಘಟನೆ ಬಳಿಕ ಹೊರಗೆ ಸಿಗುವ ಜ್ಯೂಸ್ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಮತ್ತೆ ಈಗ ಚರ್ಚೆಗೆ ಬಂದಿದೆ. ಸ್ವಲ್ಪ ಹೆಚ್ಚು ಹಣ್ಣಾದದ್ದು ಸಾಮಾನ್ಯವಾಗಿ ದೊಡ್ಡ ಸಮಸ್ಯೆ ಉಂಟುಮಾಡದೇ ಇರಬಹುದು. ಆದರೆ ಕೊಳೆತ ಅಥವಾ ಸಣ್ಣ ಹುಳ ಇರುವ ಹಣ್ಣುಗಳಲ್ಲಿ ಬ್ಯಾಕ್ಟೀರಿಯಾ, ಫಂಗಸ್ ಮತ್ತು ಕೀಟಗಳು ವೇಗವಾಗಿ ಬೆಳೆಯುತ್ತವೆ. ಮೇಲ್ನೋಟಕ್ಕೆ ಸ್ವಲ್ಪ ಭಾಗದಲ್ಲಿ ಮಾತ್ರ ಕಾಣಿಸಿಕೊಂಡರೂ ಅದರ ವಿಷಕಾರಿ ಅಂಶ ಹಣ್ಣಿನ ಒಳಭಾಗಕ್ಕೂ ಹರಡಿರಬಹುದು. 

ಹಾಳಾದ ಜ್ಯೂಸ್ ಕುಡಿದರೆ ಏನಾಗಬಹುದು?

 ಬೆಂಗಳೂರಿನ ಆಯುಷ್  ಆರೋಗ್ಯ ತಜ್ಞರಾದ  Dr.ಅನುರಾಧ  ಪ್ರಕಾರ, ನೈಸರ್ಗಿಕವಾಗಿ ಹಣ್ಣಾದ ಮಾವಿನಹಣ್ಣು ರುಚಿಕರವಾಗಿರುವುದಲ್ಲದೆ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ, ಆದರೆ ಮಾವಿನಹಣ್ಣನ್ನು ಬೇಗನೆ ಹಣ್ಣಾಗಿಸಲು, ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಹಣ್ಣಾಗಿಸಲಾಗುತ್ತದೆ, ಇದು ಅನೇಕ ಅನಾನುಕೂಲಗಳನ್ನು ಹೊಂದಿದೆ. ಇದು ಹಣ್ಣಿನೊಳಗೆ ಶಾಖವನ್ನು ಉತ್ಪಾದಿಸುವ ರಾಸಾಯನಿಕವಾಗಿದ್ದು, ಅದು ವೇಗವಾಗಿ ಹಣ್ಣಾಗಲು ಕಾರಣವಾಗುತ್ತದೆ. ರಾಸಾಯನಿಕವು ಈಥೈಲ್ ಎಂಬ ಅನಿಲವನ್ನು ಉತ್ಪಾದಿಸುತ್ತದೆ, ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಹಣ್ಣಾದ ಮಾವಿನಹಣ್ಣುಗಳನ್ನು ತಿನ್ನುವುದರಿಂದ ನಿಮ್ಮ ಯಕೃತ್ತು ಮತ್ತು ಮೂತ್ರಪಿಂಡಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು, ಇದು ಅಂಗಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು. 

 ಇನ್ನೂ ಸ್ವಲ್ಪ ಹಾಳಾದ ಹಣ್ಣುಗಳಿಂದ ತಯಾರಿಸಿದ ಜ್ಯೂಸ್ ಕುಡಿದರೂ ಕೂಡ ದೇಹಕ್ಕೆ ಹಾನಿಕರ ಬ್ಯಾಕ್ಟೀರಿಯಾ ಮತ್ತು ವಿಷಕಾರಿ ಅಂಶಗಳು ದೇಹದೊಳಗೆ ಹೋಗಬಹುದು. ಜೊತೆಗೆ ಹೊಟ್ಟೆನೋವು, ವಾಂತಿ, ಹೊಟ್ಟೆ ಉಬ್ಬರ, ಜ್ವರ, ಫುಡ್ ಪಾಯ್ಸನಿಂಗ್ ಹೀಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಫಂಗಸ್ನಿಂದ ಕಂಡುಬರುವಮೈಕೋಟಾಕ್ಸಿನ್ಎಂಬ ವಿಷಕಾರಿ ಅಂಶ ಯಕೃತ್ ಮತ್ತು ಮೂತ್ರಪಿಂಡಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ಮಕ್ಕಳಿಗೆ ಮತ್ತು ವೃದ್ಧರಿಗೆ ಹೆಚ್ಚು ಅಪಾಯ

ಹುಳು ಬಿದ್ದ ಹಣ್ಣುಗಳಲ್ಲಿ ಅಪಾಯಕಾರಿ ಕೀಟಾಣುಗಳು ಇರುವ ಸಾಧ್ಯತೆ ಹೆಚ್ಚು. ವಿಶೇಷವಾಗಿ ಮಕ್ಕಳು, ಗರ್ಭಿಣಿಯರು, ವೃದ್ಧರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಇದು ಹೆಚ್ಚು ಅಪಾಯಕಾರಿಯಾಗಿದೆ.

 

ರಾಸಾಯನಿಕಗಳಿಂದ ಹಣ್ಣನ್ನು ಗುರುತಿಸುವುದು ಹೇಗೆ?

ಕೆಲ ವ್ಯಾಪಾರಿಗಳುಕ್ಯಾಲ್ಸಿಯಂ ಕಾರ್ಬೈಡ್ಬಳಸಿ ಕೃತಕವಾಗಿ ಹಣ್ಣಾಗಿಸುತ್ತಾರೆ. ಇಂತಹ ಹಣ್ಣುಗಳಲ್ಲಿ ಒಂದೇ ತರದ ಗಾಢ ಹಳದಿ ಬಣ್ಣ, ರುಚಿಯಲ್ಲಿ ಅಸಹಜತೆ, ಕಡಿಮೆ ರಸ, ನೀರಿನಲ್ಲಿ ತೇಲುವ ಗುಣ ಕಾಣಿಸಬಹುದು.

ಜ್ಯೂಸ್ ಕುಡಿಯುವಾಗ ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು?

ನಿಮ್ಮ ಎದುರಲ್ಲೇ ಹಣ್ಣು ಕತ್ತರಿಸಿ ಜ್ಯೂಸ್ ಮಾಡಿಸಿಕೊಳ್ಳಿ

ಮುಂಚಿತವಾಗಿ ತಯಾರಿಸಿದ ಪಲ್ಪ್ ಅಥವಾ ಜ್ಯೂಸ್ ಕುಡಿಯುವುದನ್ನು ತಪ್ಪಿಸಿ

ಹಣ್ಣುಗಳನ್ನು ಚೆನ್ನಾಗಿ ತೊಳೆದು ಬಳಸಿ ಸಾಧ್ಯವಾದರೆ ಮನೆಯಲ್ಲೇ ತಾಜಾ ಜ್ಯೂಸ್ ತಯಾರಿಸಿ ಕುಡಿಯಿರಿ

·         ಸಂಧ್ಯಾ ಪ್ರಸಾದ್ ಪಿ ವಿ

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST