LIVE TV StateNationalPoliticsCrimeEntertainmentSportsEducationFINANCE & TAXATION
Districts Yadagiri

19 ದಿನಗಳ ಮೌನ ತಪೋ ಅನುಷ್ಠಾನ ಮಂಗಲ ಕಾರ್ಯಕ್ರಮ

ಸುರಪುರ : ತಾಲೂಕಿನ  ಕಚಕನೂರ ಗ್ರಾಮದ ಸಿದ್ಧರಾಮಯ್ಯ ಸ್ವಾಮಿ ಕನ್ನೆಳ್ಳಿಮಠ ರವರು ದಿನಾಂಕ 07-09-2026 ರಿಂದ 25-09-2026 ರವರೆಗೆ ಸುಮಾರು 19 ದಿನಗಳ ಕಾಲ ಲೋಕ ಕಲ್ಯಾಣಾರ್ಥವಾಗಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸುಕ್ಷೇತ್ರ ಸಿದ್ದ ಪರ್ವತ  ಶ್ರೀ ಅಂಬಾ ಮಠದಲ್ಲಿ ಲಿಂಗೈಕ್ಯ ಶ್ರೀ ಸಿದ್ದಪ್ಪ ತಾತನವರ ಗವಿಯಲ್ಲಿ ಎರಡನೇ ವರ್ಷದ ಮೌನ ಅನುಷ್ಠಾನ ಹಮ್ಮಿಕೊಂಡಿದ್ದರು.

 

ಶುಕ್ರವಾರ ದಿನದಂದು ಅಂಬಾ ಮಠದಲ್ಲಿ ಜರುಗಿದ ಮೌನಾನುಷ್ಟಾನ ಮುಕ್ತಾಯ ಸಮಾರಂಭದಲ್ಲಿ ಅವಿರಳ ತಪೋನಿಧಿ ಶ್ರೀ ಷ.ಬ್ರ ಕೆಂಚ ವೃಷಭೇಂದ್ರ ಶಿವಾಚಾರ್ಯರು ಸಂಸ್ಥಾನ ಹಿರೇಮಠ ಆಲೂರು ಹಾಗೂ ಕಾಸರಬೋಸಗಾ ಪೂಜ್ಯರು ಮತ್ತು ಉಪಾಚಾರ್ಯ ರತ್ನ ಶ್ರೀ ಷ.ಬ್ರ ತಪೋ ರತ್ನ ಬಾಲ ತಪಸ್ವಿ ದ್ವಿತೀಯ ಸಾಂಬ ಶಿವಾಚಾರ್ಯರು, ಸಾಂಬ ಶಿವಯೋಗೇಶ್ವರ ಸಂಸ್ಥಾನ ಹಿರೇಮಠ ಕೇಸರಿ ಬೆಟ್ಟ, ಜೇವರ್ಗಿ ರಸ್ತೆ ಕಲಬುರಗಿ ಉಬಯ ಪೂಜ್ಯರ ಸಮ್ಮುಖದಲ್ಲಿ ಮೌನಾನುಷ್ಟಾನ ಮಹಾಮಂಗಲ ಕಾರ್ಯಕ್ರಮ ಜರುಗಿತು.

 news_1790447470_0_829.webp

 

ಉಭಯ ಶ್ರೀ ಗಳನ್ನು ಅಂಬಾದೇವಿ ದೇವಸ್ಥಾನದಿಂದ ಸಿದ್ದಪ್ಪ ತಾತನವರ ಗವಿಯವರೆಗೆ ಕುಂಭ, ಕಳಸ, ಹಾಗೂ ಬಾಜಾ ಭಜಂತ್ರಿಗಳೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು.

 news_1790447470_1_896.webp

 

ಕಾರ್ಯಕ್ರಮದಲ್ಲಿ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ, ದೀಕ್ಷಾ ಕಾರ್ಯಕ್ರಮ, ಉಬಯ ಶ್ರೀ ಗಳ ಪಾದ ಪೂಜೆ, ಜೊತೆಗೆ ಮೌನಾನುಷ್ಟಾನದ ಗುರುಗಳ ಮಾತೋಶ್ರೀಯವರಿಗೆ ಪಾದ ಪೂಜೆ ಮತ್ತು ತುಲಾಭಾರ ಕಾರ್ಯಕ್ರಮ ಜರುಗಿತು.

 

ಈ ಸಂದರ್ಭದಲ್ಲಿ ಕಚಕನೂರ, ತಳ್ಳಳ್ಳಿ, ಕಾಳಗಿ ಸೇರಿದಂತೆ ವಿವಿಧ ಹಳ್ಳಿಗಳ ನೂರಾರು ಜನ ಭಕ್ತರು ಉಪಸ್ಥಿತರಿದ್ದು ಗುರುಗಳ ಆಶೀರ್ವಾದ ಪಡೆದರು.

 

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯ ದಶಮಿಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ದಸರಾ ಹಾಗೂ ಆಯುಧ ಪೂಜೆಜಾತಿಭೇದವಿಲ್ಲದೆ ದಲಿತರ ಮನೆಯಲ್ಲಿ ಊಟ ಸವಿದ ಡಾ. ಬಿ. ಯೋಗೇಶ್ ಡಿಸ್ಕವರಿ ವಾಹಿನಿಯಲ್ಲಿ ಕೆಐಐಟಿ ಸಾಧನೆ ಬಣ್ಣನೆ ಕನ್ನಡಿಗರು ವಿಶಾಲತೆ, ಸಾಮರಸ್ಯ ಉಳ್ಳವರಾಗಿರುವುದರಿಂದಲೇ ಕನ್ನಡಕ್ಕೆ ಕಂಟಕ!ಹಾಡಿನ ಚಿತ್ರೀಕರಣದೊಂದಿಗೆ ‘ಚಂದ್ರಗಿರಿ’ ಚಿತ್ರೀಕರಣ ಮುಕ್ತಾಯಸರ್ವೋದಯ ಮಹಾವಿದ್ಯಾಲಯದ ಸೌಕರ್ಯ, ಶೈಕ್ಷಣಿಕ ಸಾಧನೆಗೆ ದಾವಣಗೆರೆ ವಿವಿ ಉಪಕುಲಪತಿ ಮೆಚ್ಚುಗೆಬಡತನ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನಾಚರಣೆ ಬೆಂಗಳೂರಿನಲ್ಲಿ ಐಸಿಎಸ್ಐ ಇನ್ವೆಸ್ಟ್ ಇಂಡಿಯಾ ಶೃಂಗಸಭೆ ಆಯೋಜನೆಎಚ್.ಡಿ. ಕುಮಾರಸ್ವಾಮಿ ವಿವಾದಾತ್ಮಕ ಮಾತುಗಳಿಗೆ ಖಂಡನೆ, ಕ್ಷಮೆಯಾಚನೆಗೆ ಆಗ್ರಹ: ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಅರ್ಜುನ್ ಗೋಪಾಲಯ್ಯ