ಸುರಪುರ : ತಾಲೂಕಿನ ಕುರುಬನ ತಳ್ಳಳ್ಳಿ ಗ್ರಾಮದಲ್ಲಿ ಜಗದ್ಗುರು ರೇವಣಸಿದ್ದೇಶ್ವರ ಮಠದ ಕಟ್ಟಡಕ್ಕಾಗಿ ಪ್ರಥಮ ದರ್ಜೆ ಗುತ್ತಿಗೆದಾರರಾದ ಮಂಜುನಾಥ. ಎಸ್. ಅಂಗಡಿ(ಸಾಹುಕಾರ) ಯವರು 51,000 ರೂಪಾಯಿ ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಠ ಮಾನ್ಯಗಳಿಂದ ನಮ್ಮ ಪರಂಪರೆ ಇನ್ನೂ ಜೀವಂತವಾಗಿದೆ, ನಮ್ಮ ಕುಟುಂಬ ಯಾವತ್ತೂ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ಸಹಕಾರ ನೀಡುತ್ತ ಬಂದಿದ್ದು. ಮುಂದಿನ ದಿನಗಳಲ್ಲೂ ಕೂಡ ಸಹಕರಿಸುತ್ತೇವೆ, ಮಠದ ಕೆಲಸಗಳನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ನಿಂಗಣ್ಣ ಸಾಹುಕಾರ ಮಾಲಗತ್ತಿ,ರೇವಣಸಿದ್ದಯ್ಯ ಗುರುವಿನ, ರವೀಂದ್ರ ಸಾಹುಕಾರ ಅಂಗಡಿ,ಸೋಮಣ್ಣ ಮಾಲಗತ್ತಿ, ಗುರುಲಿಂಗಪ್ಪ ಸಾಹುಕಾರ ಯಾಳಗಿ, ಚನ್ನಪ್ಪ ಬೆಳ್ಳಿಕಟ್ಟಿ, ಸಾಹೇಬಗೌಡ ಕಾಕರಗಲ್ಲ, ದುರ್ಗಪ್ಪ ದೇವಿಕೇರಿ, ಬೈಲಪ್ಪ ಆಲಗೂರ,ಮಲ್ಲು ಮಾಲಗತ್ತಿ ಸೇರಿದಂತೆ ಇತರರು ಇದ್ದರು.