ಬಳ್ಳಾರಿ : ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಸೆಪ್ಟೆಂಬರ್ 10 ರಂದು ಬಿಜೆಪಿ ಪಕ್ಷ ವತಿಯಿಂದ ಹಮ್ಮಿಕೊಳ್ಳಲಾಗಿರುವ ಸಾರ್ವಜನಿಕ ಸಮಾವೇಶದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ಕೈಗೊಂಡಿದೆ. ನಗರದಲ್ಲಿ ಸುಗಮ ಸಂಚಾರ ಕಾಪಾಡುವ ನಿಟ್ಟಿನಲ್ಲಿ ಸಂಚಾರ ಮಾರ್ಗ ಬದಲಾವಣೆ ಹಾಗೂ ವಾಹನ ನಿಲುಗಡೆಗೆ ಸಂಬAಧಿಸಿದAತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಸೂಚನೆಗಳನ್ನು ಹೊರಡಿಸಿದ್ದಾರೆ.
ಭದ್ರತೆಗೆ ಬೃಹತ್ ಪೊಲೀಸ್ ಪಡೆ ನಿಯೋಜನೆ:
ಸಮಾವೇಶವು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದೆ ಶಾಂತಿಯುತವಾಗಿ ನಡೆಯುವಂತೆ ಮಾಡಲು, ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದAತೆ ನೋಡಿಕೊಳ್ಳಲು ಭಾರಿ ಭದ್ರತೆ ಒದಗಿಸಲಾಗಿದೆ. ಬಂದೋಬಸ್ತ್ ಕರ್ತವ್ಯಕ್ಕಾಗಿ 03 ಜನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, 04 ಜನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, 12 ಜನ ಡಿವೈಎಸ್ಪಿ, 40 ಜನ ಸಿಪಿಐ/ ಪಿಐ, 63 ಜನ ಪಿಎಸ್‌ಐ, 120 ಜನ ಎಎಸ್‌ಐ, 960 ಜನ ಹೆಡ್ ಕಾನ್‌ಸ್ಟೆಬಲ್ / ಕಾನ್‌ಸ್ಟೆಬಲ್, 200 ಜನ ಹೋಂಗಾರ್ಡ್ಸ್, 12 ಐಆರ್‌ಬಿ/ಕೆಎಸ್‌ಆರ್‌ಪಿ ತುಕಡಿಗಳು, 06 ಡಿಎಆರ್ ತುಕಡಿಗಳು ಹಾಗೂ 01 ಕ್ಯೂಆರ್‌ಟಿ ತುಕಡಿಯನ್ನು ನಿಯೋಜಿಸಲಾಗಿದೆ.
ನಿರ್ಬಂಧಿತ/ಬದಲಾದ ಮಾರ್ಗಗಳು:
ಸಾರ್ವಜನಿಕರು ಗಡಿಗಿ ಚೆನ್ನಪ್ಪ ವೃತ್ತ, ಇಂದಿರಾ ವೃತ್ತ, ದುರ್ಗಮ್ಮ ದೇವಸ್ಥಾನ ಸರ್ಕಲ್, ಎಸ್.ಪಿ. ವೃತ್ತ ಹಾಗೂ ಹೆಚ್.ಆರ್.ಗವಿಯಪ್ಪ ವೃತ್ತದ ರಸ್ತೆಗಳನ್ನು ಬಳಸದೆ ಪರ್ಯಾಯ ರಸ್ತೆಗಳಲ್ಲಿ ಸಂಚರಿಸಬಹುದಾಗಿದೆ.
ಸಿರುಗುಪ್ಪ ಕಡೆಯಿಂದ ಬರುವ ವಾಹನಗಳು ವಾಲ್ಮೀಕಿ ವೃತ್ತ (ಎಸ್.ಪಿ. ಸರ್ಕಲ್), ದುರ್ಗಮ್ಮ ಗುಡಿ ಸರ್ಕಲ್ ಮಾರ್ಗವಾಗಿ ಮೋಕಾ ರಸ್ತೆಯನ್ನು ಬಳಸಬೇಕು. ಬೆಂಗಳೂರು ರಸ್ತೆಯಿಂದ ಬರುವ ವಾಹನಗಳು ಅನಂತಪುರ ಬೈಪಾಸ್ ರಸ್ತೆಯನ್ನು ಬಳಸಲು ತಿಳಿಸಲಾಗಿದೆ.
ಕಾರ್ಯಕರ್ತರ ವಾಹನಗಳ ನಿಲುಗಡೆಗೆ ವ್ಯವಸ್ಥೆ:
ಸಮಾವೇಶದಲ್ಲಿ ಭಾಗವಹಿಸಲು ಆಗಮಿಸುವವರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ಸ್ಥಳಗಳನ್ನು ನಿಗದಿಪಡಿಸಲಾಗಿದೆ.
ಬಸ್ಸುಗಳು: ಬಸ್ಸುಗಳಲ್ಲಿ ಬರುವ ಕಾರ್ಯಕರ್ತರನ್ನು ಸಂಗಮ್ ಸರ್ಕಲ್‌ನಲ್ಲಿ ಇಳಿಸಿ, ಬಸ್ಸುಗಳನ್ನು ಅನಂತಪುರ ರಸ್ತೆಯ ಬೈಪಾಸ್ ರಸ್ತೆ ಹಾಗೂ ಮೋಕಾ ರಸ್ತೆಯಲ್ಲಿ ನಿಲುಗಡೆ ಮಾಡಬೇಕು.
ಕಾರುಗಳು: ಕಾರುಗಳಲ್ಲಿ ಬರುವವರು ಸಂಗಮ್ ಸರ್ಕಲ್‌ನಿಂದ ಅನಂತಪುರ ರಸ್ತೆಯ ಬೈಪಾಸ್‌ವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ನಿಲುಗಡೆ ಮಾಡಬೇಕು.
ದ್ವಿಚಕ್ರ ವಾಹನಗಳು: ಸಂಗಮ್ ಸರ್ಕಲ್‌ನಿಂದ ಕೂಲ್ ಕಾರ್ನರ್‌ವರೆಗೆ ರಸ್ತೆಯ ಒಂದು ಬದಿಯಲ್ಲಿ ದ್ವಿಚಕ್ರ ವಾಹನಗಳನ್ನು ಹಾಗೂ ಮತ್ತೊಂದು ಬದಿಯಲ್ಲಿ ಕಾರುಗಳನ್ನು ಪಾರ್ಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರು ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.