LIVE TV StateNationalPoliticsInternationalCrimeEntertainmentSportsEducationFINANCE & TAXATION
National News

ಕೆಐಐಟಿ, ಕಿಸ್ಗೆ ಭೇಟಿ ನೀಡಿದ ಆಧ್ಯಾತ್ಮಿಕ ಗುರು ಸಾಧ್ವಿ ರಿತಂಬರ

ಭುವನೇಶ್ವರ: ಖ್ಯಾತ ಆಧ್ಯಾತ್ಮಿಕ ಸಾಧಕಿ ಸಾಧ್ವಿ ರಿತಂಬರಾ ಅವರು ಕಳಿಂಗ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಸ್ಟ್ರಿಯಲ್‌ ಟೆಕ್ನಾಲಜಿ (ಕೆಐಐಟಿ) ಮತ್ತು ಕಳಿಂಗ ಇನ್ಸ್‌ಟಿಟ್ಯೂಟ್‌ ಆಫ್‌ ಸೋಶಿಯಲ್‌ ಸೈನ್ಸಸ್‌ (ಕಿಸ್‌) ಕ್ಯಾಂಪಸ್‌ಗಳಿಗೆ ಮಂಗಳವಾರ ಭೇಟಿ ನೀಡಿದ್ದರು.

 

"ಶಿಕ್ಷಣ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದೇನೆ. ಶಿಕ್ಷಣ ತಜ್ಞ ಮತ್ತು ಸಮಾಜ ಸೇವಕ ಡಾ. ಅಚ್ಯುತ ಸಮಂತ ಅವರು ಸ್ಥಾಪಿಸಿದ 'ಕಿಸ್' ದೇಶದಲ್ಲೇ ಒಂದು‌ ಅಪೂರ್ವವಾದ  ಸಂಸ್ಥೆಯಾಗಿ ಹೊರಹೊಮ್ಮಿದೆ. ಈ ಸಂಸ್ಥೆಯು ಎಲ್ಲಾ ತೀರ್ಥಕ್ಷೇತ್ರಗಳ ಪಾವಿತ್ರ್ಯವನ್ನು ಮೈಗೂಡಿಸಿಕೊಂಡು 'ಅಸಾಧಾರಣ' ತಾಣ ಹಾಗೂ ಎಲ್ಲಾ ದೇವತೆಗಳ ದೈವತ್ವದ ಸಾಕಾರರೂಪ" ಎಂದು ಬಣ್ಣಿಸಿದರು. 

 

"ಇಂತಹ ವಿಶಿಷ್ಟವಾದ ಸಂಸ್ಥೆಗೆ ಬಂದಿರುವುದು ನನಗೆ ಎಲ್ಲಿಲ್ಲದ ಸಂತೋಷ ತಂದಿದೆ. ಇದನ್ನು ವರ್ಣಿಸಲು ಪದಗಳೇ ಇಲ್ಲ," ಎಂದು ಅವರು ಹೇಳಿದರು. 

 

ಸಮರ್ಪಣಾ ಭಾವ, ತಪಸ್ಸಿನ ಪ್ರತಿಬಿಂಬ

"ಕಿಸ್‌ ಸಂಸ್ಥೆ ಒಬ್ಬ ವ್ಯಕ್ತಿಯ ಸಮರ್ಪಣಾ ಭಾವ ಮತ್ತು ಅದಮ್ಯ ತಪಸ್ಸನ್ನು ಪ್ರತಿಬಿಂಬಿಸುತ್ತದೆ.  ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದ ನಿಜವಾದ ಅರ್ಥ ಏನು ಎಂಬುದನ್ನು ನಾನು ಇಂದು ಇಲ್ಲಿ  ಕಂಡೆ," ಎಂದು ಕೆಐಐಟಿ ಮತ್ತು ಕಿಸ್‌ ಸಂಸ್ಥಾಪಕರಾದ ಡಾ. ಅಚ್ಯುತ ಸಮಂತ ಅವರ ಅನನ್ಯ ಕಾರ್ಯವನ್ನು ಶ್ಲಾಘಿಸಿದರು.

 news_1788974685_3_614.webp

 

ಇದೇ ನಿಜವಾದ ಭಾರತ

ಇಲ್ಲಿನ ಮಕ್ಕಳ ಶಿಸ್ತು ಮತ್ತು ಮೌಲ್ಯಗಳನ್ನು ಗಮನಿಸಿದರೆ "ಇದೇ ನಿಜವಾದ ಭಾರತ" ಎಂದು   ಅನಿಸುತ್ತದೆ. ಡಾ. ಸಮಂತ ಅವರ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಹೆಮ್ಮೆಪಡಬೇಕು. ಇವರೆಲ್ಲರ ಮೇಲೆ ನನ್ನ ಆಶೀರ್ವಾದ ಸದಾ ಇರುತ್ತದೆ  ಎಂದರು.

 

ಕೇವಲ ಸಲಹೆಗಳನ್ನು ನೀಡಬೇಡಿ ಅದರ ಬದಲಿಗೆ ಜನರು ಇತರರಿಗೆ ಸಹಾಯಹಸ್ತ ಚಾಚಬೇಕು. ಈ ಸಂಸ್ಥೆ ಮಕ್ಕಳಲ್ಲಿ ಸ್ವಾಭಿಮಾನ ಕಲಿಸುತ್ತದೆ ಹಾಗೂ ಸ್ವಾವಲಂಬಿಗಳಾಗುವುದನ್ನೂ ತಿಳಿಸುತ್ತದೆ. ಒಬ್ಬ ವ್ಯಕ್ತಿ ಸ್ವಾವಲಂಬಿಯಾಗಿದ್ದಾಗ ಮಾತ್ರ ಸ್ವಾಭಿಮಾನಿಯಾಗಲು ಸಾಧ್ಯ ಎಂದು ಅವರು ನುಡಿದರು.

ಕಿಸ್‌ ಉಪಕುಲಪತಿ ಪ್ರೊ. ಸರನ್‌ಜಿತ್ ಸಿಂಗ್, ಖ್ಯಾತ ಶಿಕ್ಷಣ ತಜ್ಞ ಅಶೋಕ್ ಪಾಂಡೆ ಈ ವೇಳೆ ಉಪಸ್ಥಿತರಿದ್ದರು.

ಮಾತುಗಳು ಹೆಚ್ಚಿನ ಶಕ್ತಿ ನೀಡಿವೆ

ಮಕ್ಕಳು, ಮಹಿಳೆಯರು ಮತ್ತು ಸಮಾಜದ ಸೇವೆಗಾಗಿ ತಮ್ಮ ಜೀವನವನ್ನು ಮೀಸಲಿಟ್ಟಿರುವ ಪದ್ಮಭೂಷಣ ಪರಮ ಪೂಜ್ಯ ದೀದಿ ಮಾ ಸಾಧ್ವಿ ರಿತಂಬರಾ ಅವರು ನಮ್ಮ ಸಂಸ್ಥೆಗಳ ಕುರಿತು ಮಾತನಾಡಿರುವುದು ಕೇಳಿ ಅತೀವ ಖುಷಿಯಾಯಿತು. ಇವರ ಮೆಚ್ಚುಗೆ ಮಹತ್ವದಾಗಿದೆ. ಕಿಸ್‌ ಬಗ್ಗೆ ಕೇಳಿದ್ದ ಅವರು ಇಲ್ಲಿಗೆ ಖುದ್ದು ಆಗಮಿಸಿ ಮಕ್ಕಳನ್ನು ಭೇಟಿ ಮಾಡಿ ನಮ್ಮ ಕೆಲಸಗಳನ್ನು ಕಂಡಿದ್ದಾರೆ. ಅವರ ಮಾತುಗಳು ಹೃದಯಾಂತರಾಳದಿಂದ ಬಂದಿವೆ.  ದೀದಿ ಅವರ ಆಶೀರ್ವಾದ, ವಾತ್ಸಲ್ಯ ಮತ್ತು ಪ್ರೋತ್ಸಾಹಕ್ಕಾಗಿ ನಾನು ಅವರಿಗೆ ಸದಾ ಆಭಾರಿಯಾಗಿದ್ದೇನೆ. ಇನ್ನೂ ಹೆಚ್ಚು ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಸೇವೆಯನ್ನು ಮುಂದುವರಿಸಲು ಇವರ ಮಾತುಗಳು ನನಗೆ ಹೆಚ್ಚಿನ ಶಕ್ತಿಯನ್ನು ನೀಡಿವೆ.

ಡಾ. ಅಚ್ಯುತ ಸಮಂತ

ಸಂಸ್ಥಾಪಕರು, ಕೆಐಐಟಿ, ಕೆಐಎಂಎಸ್‌ ಹಾಗೂ ಕೆಐಎಸ್‌ಎಸ್‌,

ಲೋಕಸಭಾ ಮತ್ತು ರಾಜ್ಯಸಭಾ ಮಾಜಿ ಸದಸ್ಯರು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST