ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರ ಹಾಗೂ ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.
ಶ್ರೀ ನಾಗಯ್ಯ ಜ್ಞಾನ ವೃಕ್ಷ ಫೌಂಡೇಶನ್ ಅಧ್ಯಕ್ಷರು ಹಾಗೂ ಹೆಸರಾಂತ ಸಮಾಜ ಸೇವಕರಾದ ಎನ್. ಶಿವಕುಮಾರ್ ಮಾತನಾಡಿದ ಅವರು, ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು. ಬಡತನ ಅಥವಾ ಸೌಲಭ್ಯಗಳ ಕೊರತೆ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಬಾರದು. ಸ್ವಾತಂತ್ರ್ಯ ಯೋಧರು ನಮಗೆ ತಂದುಕೊಟ್ಟ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿಸಲು ಪ್ರತಿಯೊಬ್ಬ ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗುವುದು ಅಗತ್ಯ ಎಂದರು.
ನಂತರ ಜ್ಞಾನಕ್ಕೆ ಆಸರೆಯಾದ ಸಮಾಜಮುಖಿ ಕೊಡುಗೆ ಹೆಗ್ಗನೂರು ದೊಡ್ಡಿಯ ಶ್ರೀ ನಾಗಯ್ಯ ಜ್ಞಾನಕ್ಷ ಫೌಂಡೇಶನ್ ವತಿಯಿಂದ ಶಾಲೆಯ 250ಕ್ಕೂ ಹೆಚ್ಚು ಬಡ, ಪ್ರತಿಭಾವಂತ ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗ್‌ಗಳನ್ನು ವಿತರಿಸಿದ ಶುಭ ಹಾರೈಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ಮಾತಾಡಿ, ಶಾಲೆಯ ಮೂಲಭೂತ ಸೌಕರ್ಯ ಹಾಗೂ ಮಕ್ಕಳ ಶಿಕ್ಷಣದ ಬೆಳವಣಿಗೆಗೆ ಶ್ರಮಿಸುತ್ತಿರುವ ಇವರು, ಫೌಂಡೇಶನ್‌ನ ಈ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್ ಮಾತನಾಡಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ, ತ್ಯಾಗ-ಬಲಿದಾನಗಳ ಮಹತ್ವವನ್ನು ಸರಳವಾಗಿ ವಿವರಿಸಿ, ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಲು ಕರೆ ನೀಡಿದರು.

ಕೊನೆಯಲ್ಲಿ ಮಕ್ಕಳ ಮುಖದಲ್ಲಿ ಅರಳಿದ ಮಂದಹಾಸ
ಸರ್ಕಾರಿ ಶಾಲೆಯ 250 ಮಕ್ಕಳು ಹೊಸ ಬ್ಯಾಗ್‌ಗಳನ್ನು ಪಡೆದು ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿ ಮತ್ತು ಪ್ರೇರಣಾದಾಯಿ ನುಡಿಗಳು ಈ ಸುಂದರ ಕಾರ್ಯಕ್ರಮಕ್ಕೆ ಹಲವು ಸ್ಥಳೀಯ ಮುಖಂಡರು ಹಾಗೂ ಹಿರಿಯರು ಸಾಕ್ಷಿಯಾದರು.
ಇದೇ ಸಂದರ್ಭದಲ್ಲಿ ಶ್ರೀ ನಾಗಯ್ಯ ಜ್ಞಾನ ವೃಕ್ಷ ಫೌಂಡೇಶನ್ ಅಧ್ಯಕ್ಷರು ಹಾಗೂ ಹೆಸರಾಂತ ಸಮಾಜ ಸೇವಕ ಎನ್. ಶಿವಕುಮಾರ್, ಮುಖ್ಯ ಶಿಕ್ಷಕ ಸಿದ್ದರಾಜು, ಸಂತೋಷ್, ಸಿದ್ದರಾಜು ಸಾತನೂರು, ನಾಗಾರಸನ ಕೋಟೆ ಸಂತೋಷ್, ಅರಣ್ಯ ಅಧಿಕಾರಿ ಗೋಪಾಲ್, ಎಸ್‌ಡಿಎಂಸಿ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು, ಬೆಂವಿವಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಶೇಷಾದ್ರಿ ಜಿ.ಸಿ, ಶಿಕ್ಷಕ ವೃಂದ, ಗ್ರಾಮಸ್ಥರು ಮತ್ತು ಪೋಷಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮಕ್ಕಳ ಮುಖದಲ್ಲಿ ಅರಳಿದ ಮಂದಹಾಸವು ಸರ್ಕಾರಿ ಶಾಲೆಯ 250 ಮಕ್ಕಳು ಹೊಸ ಬ್ಯಾಗ್‌ಗಳನ್ನು ಪಡೆದು ಸಂಭ್ರಮಿಸಿ, ದೇಶಪ್ರೇಮದ ಕಂಪು ಪಸರಿಸಿದ್ದ ಈ ಶುಭ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ಶ್ಲಾಘನೀಯ ಸಮಾಜಮುಖಿ ಕಾರ್ಯಕ್ರಮವಾಗಿತ್ತು.