ಹೊಸಪೇಟೆ : ವಿಜಯನಗರ ಕನ್ನಡಕಟ್ಟೆ ಸಾಹಿತಿ ಬಳಗದ ವತಿಯಿಂದ ಪ್ರತಿ ತಿಂಗಳ ಎರಡನೇ ಭಾನುವಾರದಂದು ಸಾಹಿತ್ಯ ಸಮ್ಮಿಲನ ಗೋಷ್ಠಿಯನ್ನು ಕೈಗೊಳ್ಳಲಾಗುತ್ತಿದೆ.
ಅದರಂತೆ ಇಂದು ಅ.11 ರ ಎರಡನೇ ಭಾನುವಾರದಂದು 12ನೆಯ ಸಾಹಿತ್ಯ ಸಮ್ಮಿಲನ ಗೋಷ್ಠಿಯನ್ನು ಮುನಿಸಿಪಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ಚಿತ್ತವಾಡಿಗಿಯಲ್ಲಿ ಕೈಗೊಳ್ಳಲಾಗಿತ್ತು.
ಈ ಗೋಷ್ಠಿಯಲ್ಲಿ ಹಿರಿಯ ಸಾಹಿತಿಗಳಾದ ಶ್ರೀಮತಿ ನೂರ್ ಜಹಾನ್ ಅವರ "ಕಾವ್ಯ ಗೊಂಚಲು" ಕವನ ಸಂಕಲನದ ಓದು ಮತ್ತು ವಿಮರ್ಶೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಡಾ ದಯಾನಂದ
ಕಿನ್ನಾಳ್ ಇವರು ಲೇಖಕರ ಅನುಭವಗಳ ಪದಗಳ ಗುಚ್ಛ ಕಥೆಗಳಾಗಿ ಕವನಗಳಾಗಿ ಹೊರಹೊಮ್ಮುತ್ತವೆ ಮತ್ತು ಇವುಗಳು ಲೇಖಕರ ಜೀವನ ಚರಿತ್ರೆಯನ್ನು ಬಿಂಬಿಸುವಂತಿರುತ್ತವೆ ಮತ್ತೊಮ್ಮೆ ಜೀವನ ಚರಿತ್ರೆಯನ್ನು ಬರೆಯುವ ಅವಶ್ಯಕತೆ ಇರುವುದಿಲ್ಲ. ಕಥೆ ಕವನ ಲೇಖನಗಳಲ್ಲಿ ನಿಜ ಜೀವನದ ಅಂಶಗಳೇ ಅಡಕವಾಗಿರುವುದರುತ್ತವೆ ಎಂದು ಹೇಳಿದರು.

ಈ ಗೋಷ್ಠಿಯಲ್ಲಿ ದೀಪಕ್ ಬಿಳ್ಳೂರ್, ವಾಲ್ಯಾ ನಾಯ್ಕ್, ಅನುಪಮಾ ಸುಲಾಖೆ, ಬಿ.ಎಂ ಬಸವರಾಜ್, ಕಣಿವೆ ಶಿವರಾಮಪ್ಪ, ಡಾ.ಕಿಚಡಿ ಚನ್ನಪ್ಪ, ಡಾ.ಭಾರತಿ ಮೂಲಿಮನಿ, ಡಾ ಸುಧಾ ಚಿದಾನಂದಗೌಡ, ವಿ. ನಾಗರಾಜ, ಕವಿತಾ ನಾಯ್ಡು, ಶೀಲಾ ಬಿಕೆ, ಜಂಬುನಾಥ ಎಚ್.ಎಂ, ಗೋವಿಂದಪ್ಪ, ಡಾ ಎ.ರಂಗನಾಥ. ಪಿ.ಭಾರತಿ ಮಲ್ಲಿಕಾರ್ಜುನ ಮುಂತಾದ ಇಪ್ಪತ್ತು ಜನ ಕವಿಗಳು ಕವಯಿತ್ರಿಯರು ವಿಮರ್ಶಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಾಹಿತಿ ಜಗದೀಶ ಬೆನ್ನೂರ್ ನಿರೂಪಿಸಿದರು. ಕಣಿವೆ ಶಿವರಾಮಪ್ಪ ಪ್ರಾರ್ಥಿಸಿದರು. ಲೇಖಕಿ ನೂರ್ ಜಾನ್ ಅವರು ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು.