LIVE TV StateNationalPoliticsCrimeEntertainmentSportsEducationFINANCE & TAXATION
National News

ಡಾ. ಅಚ್ಯುತ ಸಮಂತಗೆ ರೊಮೇನಿಯಾದ ವಿಶೇಷ ಗೌರವ

ಭುವನೇಶ್ವರ :  ಇಲ್ಲಿನ ಕಳಿಂಗ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಸ್ಟ್ರಿಯಲ್‌ ಟೆಕ್ನಾಲಜಿ (ಕೆಐಐಟಿ) ಮತ್ತು ಕಳಿಂಗ ಇನ್ಸ್‌ಟಿಟ್ಯೂಟ್‌ ಆಫ್‌ ಸೋಶಿಯಲ್‌ ಸೈನ್ಸಸ್‌ (ಕಿಸ್‌) ಸಂಸ್ಥಾಪಕರಾದ ಡಾ. ಅಚ್ಯುತ ಸಮಂತ ಅವರು ರೊಮಾನಿಯಾದ ನಗರಗಳಾದ ಮಿಲಿಸೌಟ್ಸಿ) ಮತ್ತು ಬಾರ್ಲಾಡ್ ನಿಂದ ಎರಡು ವಿಶೇಷ ಗೌರವಗಳಿಗೆ ಪಾತ್ರರಾಗಿದ್ದಾರೆ.

 

ಮಿಲಿಸೌಟ್ಸಿ ನಗರದ 'ಗೌರವ ಪೌರತ್ವ' ಹಾಗೂ ಬಾರ್ಲಾಡ್ ನಗರದ ಮುನ್ಸಿಪಾಲಿಟಿಯು 'ಕೀ ಟು ದಿ ಸಿಟಿ ಆಫ್ ಬಾರ್ಲಾಡ್' (ಬಾರ್ಲಾಡ್ ನಗರದ ಕೀಲಿ) ಎಂಬ ಪ್ರತಿಷ್ಠಿತ ಗೌರವವನ್ನು ನೀಡಿ ಗೌರವಿಸಲಾಗಿದೆ.

 

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಸಮಂತ ಅವರು, ಶಿಕ್ಷಣ, ಮಾನವೀಯತೆ ಮತ್ತು ಸಮಾಜಕ್ಕೆ ನಾನು ಸಲ್ಲಿಸಿದ ಜೀವಮಾನದ ಸೇವೆಯನ್ನು ಗುರುತಿಸಿ ಈ ಗೌರವಗಳನ್ನು ನೀಡಲಾಗಿದೆ. ನಾನು ಇವುಗಳನ್ನು ಅತ್ಯಂತ ವಿನಮ್ರತೆಯಿಂದ ಸ್ವೀಕರಿಸುತ್ತೇನೆ ಎಂದರು.

 news_1790098715_1_309.webp

 

ಬಾರ್ಲಾಡ್ ನಗರದ ಬಾಗಿಲುಗಳು ನನಗಾಗಿ ಯಾವಾಗಲೂ ತೆರೆದಿರುತ್ತವೆ ಎಂಬುದು ಅತ್ಯಂತ ಖುಷಿ ಮತ್ತು ಗೌರವವ ವಿಷಯ. ಕೌನ್ಸಿಲ್ ಸದಸ್ಯರು ಮತ್ತು ಅನೇಕ ಗಣ್ಯರ ಸಮ್ಮುಖದಲ್ಲಿ ಮೇಯರ್‌ಗಳಿಂದ ಈ ಗೌರವಗಳನ್ನು ಸ್ವೀಕರಿಸಿದ್ದು ವಿಶೇಷ ಕ್ಷಣ ಎಂದು ಅಭಿಪ್ರಾಯಪಟ್ಟರು.

 

ಮಿಲಿಸೌಟ್ಸಿ ಮತ್ತು ಬಾರ್ಲಾಡ್ ಪುರಸಭೆಗಳ ಮೇಯರ್‌ಗಳು ಹಾಗೂ ಎಲ್ಲಾ ಕೌನ್ಸಿಲ್ ಸದಸ್ಯರು ತೋರಿದ ಆತ್ಮೀಯತೆ, ವಾತ್ಸಲ್ಯ ಮತ್ತು ಗೌರವಕ್ಕಾಗಿ ಅವರಿಗೆ ನನ್ನ ಧನ್ಯವಾದಗಳು ಎಂದು ಹೇಳಿದರು.

 

ರೊಮೇನಿಯಾದ ಜನರು ನನಗೆ ನೀಡಿದ ಪ್ರೀತಿ ಮತ್ತು ಗೌರವವನ್ನು ನಾನು ಸದಾ ಸ್ಮರಿಸುತ್ತೇನೆ. ಈ ಎರಡೂ ಗೌರವ ಸ್ವೀಕಾರದ ವೇಳೆ ಹಾಜರಿದ್ದ ರೊಮೇನಿಯಾದಲ್ಲಿನ ಭಾರತದ ರಾಯಭಾರಿಗಳಿಗೆ ಕೃತಜ್ಞತೆಗಳು.

ಡಾ. ಅಚ್ಯುತ ಸಮಂತ

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯ ದಶಮಿಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ದಸರಾ ಹಾಗೂ ಆಯುಧ ಪೂಜೆಜಾತಿಭೇದವಿಲ್ಲದೆ ದಲಿತರ ಮನೆಯಲ್ಲಿ ಊಟ ಸವಿದ ಡಾ. ಬಿ. ಯೋಗೇಶ್ ಡಿಸ್ಕವರಿ ವಾಹಿನಿಯಲ್ಲಿ ಕೆಐಐಟಿ ಸಾಧನೆ ಬಣ್ಣನೆ ಕನ್ನಡಿಗರು ವಿಶಾಲತೆ, ಸಾಮರಸ್ಯ ಉಳ್ಳವರಾಗಿರುವುದರಿಂದಲೇ ಕನ್ನಡಕ್ಕೆ ಕಂಟಕ!ಹಾಡಿನ ಚಿತ್ರೀಕರಣದೊಂದಿಗೆ ‘ಚಂದ್ರಗಿರಿ’ ಚಿತ್ರೀಕರಣ ಮುಕ್ತಾಯಸರ್ವೋದಯ ಮಹಾವಿದ್ಯಾಲಯದ ಸೌಕರ್ಯ, ಶೈಕ್ಷಣಿಕ ಸಾಧನೆಗೆ ದಾವಣಗೆರೆ ವಿವಿ ಉಪಕುಲಪತಿ ಮೆಚ್ಚುಗೆಬಡತನ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನಾಚರಣೆ ಬೆಂಗಳೂರಿನಲ್ಲಿ ಐಸಿಎಸ್ಐ ಇನ್ವೆಸ್ಟ್ ಇಂಡಿಯಾ ಶೃಂಗಸಭೆ ಆಯೋಜನೆಎಚ್.ಡಿ. ಕುಮಾರಸ್ವಾಮಿ ವಿವಾದಾತ್ಮಕ ಮಾತುಗಳಿಗೆ ಖಂಡನೆ, ಕ್ಷಮೆಯಾಚನೆಗೆ ಆಗ್ರಹ: ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಅರ್ಜುನ್ ಗೋಪಾಲಯ್ಯ