ಬೆಂಗಳೂರು : ಮಲೈ ಮಹದೇಶ್ವರ ಎಂಟರ್ಪ್ರೈಸಸ್ ಅವರ ಎ.ಎಂ ಬಾಬು ನಿರ್ಮಾಣದ “ನಮ್ಮ ನಾಯಕ” ಚಲನಚಿತ್ರದ ಟೀಸರ್ನ್ನು ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಬಿಡುಗಡೆ ಮಾಡಿ ಚಿತ್ರಕ್ಕೆ ಮತ್ತು ಚಿತ್ರ ತಂಡಕ್ಕೆ ಶುಭ ಹಾರೈಸಿದರು.
ಕನ್ನಡ. ಹಿಂದಿ. ತಮಿಳು. ಮೂರು ಭಾಷೆಗಳಲ್ಲಿ ನಿರ್ಮಿಸಲಾಗುತ್ತಿರುವ ಚಲನಚಿತ್ರದ ಟೀಸರ್ ಬಿಡುಗಡೆ ಸಂದರ್ಭದಲ್ಲಿ ಕೆ ಪಿ ಸಿ ಸಿ ರಾಜ್ಯ ಸಂಚಾಲಕರು, ಮಲೈ ಮಹದೇಶ್ವರ ಗ್ರೂಪ್ ಆಫ್ ಇಂಡಸ್ಟ್ರಿ ಕಂಪನಿಯ ಮಾಲೀಕರು ಹಾಗೂ ಈ ಚಿತ್ರದ ನಿರ್ಮಾಪಕರಾದ ಎ ಎಂ ಬಾಬು, ನಿರ್ದೇಶಕರಾದ ಆರ್ ಜೆ ಮಂಜುನಾಥ್, ಸಂಕಲನಕಾರ ಆರ್ ಅನಿಲ್ ಕುಮಾರ್, ಸಂಗೀತ ನಿರ್ದೇಶಕ ವಿಜಯ್ ಹರಿತ್ಸ, ಕಲಾವಿದರಾದ ರಾಯ್ಯನ್ ಕುಶ್ , ಆಪ್ತರಾದ ಮನವಿ ಮತ್ತು ಚಿತ್ರ ತಂಡದವರು ಪಾಲ್ಗೊಂಡಿದ್ದರು.
ಯುವ ನಿರ್ದೇಶಕ ಅರ್.ಜೆ ಮಂಜುನಾಥ್ ಮೂಲತಃ ಬಾಗಲಕೋಟ ಜಿಲ್ಲೆಯ ಇಲಕಲ್ನವರಾಗಿದ್ದು ಚಿತ್ರಕ್ಕೆ ಕಥೆ-ಸಂಭಾಷಣೆ-ಚಿತ್ರಕಥೆ ಬರೆದು ನಿರ್ದೇಶನ ಹೊಣೆ ಹೊತ್ತಿದ್ದಾರೆ. ಅಸ್ಪೃಶ್ಯತೆಯ ವಿರುದ್ಧ ಹೋರಾಟದ ಬದುಕು ಹಾಗೂ ಭಾರತದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಕಥೆಯ ಎಳೆಯನ್ನು ಹೊಂದಿರುವ ಚಲನಚಿತ್ರವಾಗಿದೆ. ಚಿತ್ರದಲ್ಲಿ ರಾಯ್ಯಾನ್, ಭದ್ರಪ್ಪ, ಮಾ.ಪವನ್, ರಿಮೆಂಕ, ಮಾ.ಅಚಿಂತ್ಯ ಮೊದಲಾದವರು ಅಭಿನಯಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ.

ಬೆಂಗಳೂರು, ಕನಕಪುರ, ಮೈಸೂರು ಚಿತ್ರೀಕರಣ ನಡೆಸಲಾಗಿದೆ ಎಂದು ನಿರ್ದೇಶಕ ಮಂಜುನಾಥ್ ಹೇಳಿದರು. ಛಾಯಾಗ್ರಹಣ ಇನ್ಫಂಟ್ ಭರತ್, ಕಿರಣ ಗಜ ,ಸಾಹಿತ್ಯ ಆಕಾಶ ಎ.ಕೆ.೪೭, ಕಿನ್ನಾಳರಾಜ್, ಸಂಗೀತ ವಿಜಯ್ ಹರಿತ್ಸಾ , ಅಪ್ಪು ವೆಂಕಟೇಶ ಸಾಹಸ, ಪ್ರಸಾಧನ ಶಿವು, ಕಲೆ ಗಣೇಶ ದಾವಣಗೆರೆ, ವಸ್ತçವಿನ್ಯಾಸ ಚಿಕ್ಕೆಗೌಡ್ರು, ಆರ್ ಅನಿಲ್ ಕುಮಾರ ಡಿಐ, ಸಂಕಲನ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಪತ್ರಿಕಾಸಂಪರ್ಕ ಚಿತ್ರಕ್ಕಿದೆ. ಸದ್ಯ ಮಲೈ ಮಹದೇಶ್ವರ ಯೂಟ್ಯೂಬ್ನಲ್ಲಿ ಟೀಸರ್ ಬಿಡುಗಡೆಯಾಗಿದ್ದು ಚಿತ್ರವನ್ನು ಶೀಘ್ರದಲ್ಲೇ ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುವದೆಂದು ನಿರ್ಮಾಪಕ ಎ ಎಂ ಬಾಬು ತಿಳಿಸಿದ್ದಾರೆ.