ನಾಯಕನಹಟ್ಟಿ : ಆಗಸ್ಟ್ 15 ನಮ್ಮ ದೇಶಕ್ಕೆ ಐತಿಹಾಸಿಕ ಮಹತ್ವದ ದಿನವಾಗಿದೆ. 1947 ಆಗಸ್ಟ್ 15 ರಂದು ನಮಗೆ ಸ್ವಾತಂತ್ರ್ಯ ಸಿಕ್ಕಿತು. ಭಾರತವು 200 ವರ್ಷಗಳ ಬ್ರಿಟೀಷ್‌ರ ಆಳ್ವಿಕೆಯಿಂದ ಮುಕ್ತವಾಗಿ ಭಾರತದ ಪ್ರಜಾ ಸತ್ತಾತ್ಮಕ ರಾಷ್ಟ್ರವಾಯಿತು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳಶ್ರೀಕಾ0ತ್ ಹೇಳಿದರು.
ಪಟ್ಟಣ ಪಂಚಾಯಿತಿ ಆವರಣದ ಮುಂಭಾಗದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶನಿವಾರ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು ನಮ್ಮ ದೇಶವನ್ನು ಬ್ರಿಟೀಷ್‌ರ ದಾಸ್ಯತ್ವದಿಂದ ಮುಕ್ತಗೊಳಿಸುವ ಸಲುವಾಗಿ ಅದೆಷ್ಟೋ ವೀರ ಸ್ವತಂತ್ರ ಹೋರಾಟಗಾರರು ತಮ್ಮ ಪ್ರಾಣವನ್ನು ಪಣಕ್ಕಿಟ್ಟಿದ್ದರು ಇವರ ತ್ಯಾಗ ಹೋರಾಟದ ಫಲವಾಗಿಯೇ 1947ರ ಮದ್ಯ ರಾತ್ರಿ ಸ್ವಾತಂತ್ರ್ಯ ಗೊ0ಡಿತು ಆದ್ದರಿಂದ ವೀರ ಹೋರಾಟಗಾರರ ತ್ಯಾಗ ಬಲಿದಾನವನ್ನು ಸ್ಮರಿಸುವ ಸಲುವಾಗಿ ದೇಶಾದ್ಯಂತ ಪ್ರತೀ ವರ್ಷ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಬಹಳ ವಿಜೃಂಭಣೆಯಿ0ದ ಆಚರಿಸುತ್ತೇವೆ.
ಒಂದೆರಡು ದಶಕಗಳಲ್ಲ, ಬ್ರಿಟೀಷರು ಸುಮಾರು ಎರಡು ಶತಮಾನಗಳ ಕಾಲ ಭಾರತವನ್ನು ಆಳಿದರು. ಇವರ ದಬ್ಬಾಳಿಕೆ, ಅನ್ಯಾಯದ ವಿರುದ್ಧ ದೇಶವಾಸಿಗಳು ರೋಸಿಹೋಗಿದ್ದರು. ಬ್ರಿಟೀಷರ ಈ ಅಟ್ಟಹಾಸವನ್ನು ಮಟ್ಟ ಹಾಕುವ ಸಲುವಾಗಿ ನೇತಾಜಿ ಸುಭಾಸ್ ಚಂದ್ರ ಭೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಭಗತ್ ಸಿಂಗ್, ಬಾಲ ಗಂಗಾದರ್ ತಿಲಕ್, ಲಾಲಾ ಲಜಪತ್ ರಾಯ್‌ರಂತಹ ಅದೆಷ್ಟೋ ಧೀಮಂತ ನಾಯಕರು ಕೆಚ್ಚೆದೆಯಿಂದ ಹೋರಾಡಿದರು. ಅದೆಷ್ಟೋ ಸ್ವಾತಂತ್ರ‍್ಯ ಹೋರಾಟಗಾರರು ಭಾರತವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲು ಪ್ರಾಣವನ್ನೇ ತ್ಯಾಗ ಮಾಡಿದರು. ಇಂತಹ ಮಹಾನ್ ಸ್ವಾತಂತ್ರ‍್ಯ ಹೋರಾಟಗಾರರ ಸುದೀರ್ಘ ಹೋರಾಟದ ಫಲವಾಗಿಯೇ ಆಗಸ್ಟ್ 15 1947 ರಂದು ಭಾರತವು ಬ್ರಿಟೀಷರ ದಾಸ್ಯದಿಂದ ಮುಕ್ತವಾಗಿ ಸ್ವಾತಂತ್ರ‍್ಯವನ್ನು ಗಳಿಸಿತು. ಸುಮಾರು 200 ವರ್ಷಗಳ ನಂತರ ಭಾರತವು ಗುಲಾಮಗಿರಿಯ ಸಂಕೋಲೆಯಿಂದ ಮುಕ್ತವಾದ ದಿನ ಇದು. ಈ ದಿನದಂದು, ದೇಶವಾಸಿಗಳು ತಮ್ಮ ಧೈರ್ಯಶಾಲಿ ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗಗಳನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ದೇಶಕ್ಕೆ ಸಮರ್ಪಣಾ ಪ್ರತಿಜ್ಞೆಯನ್ನು ತೆಗೆದುಕೊಳ್ಳಲಾಗುತ್ತದೆ.
ಈ ವರ್ಷ ಭಾರತಕ್ಕೆ 80 ನೇ ಸ್ವಾತಂತ್ರ‍್ಯೋತ್ಸವದ ಸಂಭ್ರಮ. ದೇಶದೆಲ್ಲೆಡೆ ಸ್ವಾತಂತ್ರ‍್ಯ ದಿನವನ್ನು ಬಹಳ ಸಂಭ್ರಮದಿAದ ಆಚರಿಸಲಾಗುತ್ತದೆ. ಈ ದಿನದಂದು, ಜೊತೆಗೆ ಈ ದಿನದಂದು ಸರ್ಕಾರಿ, ಸರ್ಕಾರೇತರ ಕಚೇರಿ, ಸಂಸ್ಥೆ, ಶಾಲಾ-ಕಾಲೇಜುಗಳಲ್ಲಿ ಧೈರ್ಯ, ತ್ಯಾಗ, ಬಲಿದಾನ, ಶಾಂತಿ ಮತ್ತು ಬಾಂಧವ್ಯವನ್ನು ಸಾರುವ ಸಂಕೇತವಾಗಿರುವ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ ಎಂದು ತಿಳಿಸಿದರು.
ಸ್ವಾತಂತ್ರ‍್ಯದ ನಿಜವಾದ ಅರ್ಥವೆಂದರೆ ಗುಲಾಮಗಿರಿಯಿಂದ ಮುಕ್ತಿ ಪಡೆಯುವುದು ಮಾತ್ರವಲ್ಲ, ನಮ್ಮ ಆಲೋಚನೆಗಳು, ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವುದಾಗಿದೆ. ಈ ದಿನದಂದು, ಸ್ವಾತಂತ್ರ‍್ಯೋತ್ಸವವನ್ನು ಆಚರಿಸುವು ಮಾತ್ರವಲ್ಲದೆ ದೇಶದ ಅಭಿವೃದ್ಧಿ, ಏಕತೆ ಮತ್ತು ಸಹೋದರತ್ವಕ್ಕೆ ಕೊಡುಗೆ ನೀಡುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್, ಉಪಾಧ್ಯಕ್ಷೆ ಬೋಸಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಅನ್ವರ್, ಸದಸ್ಯರಾದ ಎಂ.ಪಿ.ಮ0ಜುನಾಥ, ಮಹೇಶ್ವರಿ, ಗುರುಶಾಂತಮ್ಮ, ಸುನೀತಾ ಮುದಿಯಪ್ಪ, ಈರಮ್ಮ, ಕೆ.ಪಿ.ತಿಪ್ಪೇಸ್ವಾಮಿ, ಜಿ.ಆರ್.ರವಿಕುಮಾರ್, ಪಾಪಮ್ಮ, ತಿಪ್ಪೇಶ್, ಟಿ.ವಿನುತ, ಸರ್ವಮಂಗಳ ಉಮಾಪತಿ, ಓಬಯ್ಯದಾಸ್, ನಾಮನಿರ್ದೇಶನ ಸದಸ್ಯರಾದ ವಾಸೀಂ ಅಹಮದ್, ಮಹಂತಮ್ಮ, ಟಿ.ಓಬಳೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಓ.ಶ್ರೀನಿವಾಸ್, ಸಿಬ್ಬಂದಿಗಳು ವಿವಿಧ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕ, ಶಿಕ್ಷಕಿಯರು ಆಗಮಿಸಿದ್ದರು.