LIVE TV StateNationalPoliticsInternationalCrimeEntertainmentSportsEducationFINANCE & TAXATION
Districts Chitradurga

ಸರ್ಕಾರಿ ಶಾಲಾ ಆವರಣಗಳಲ್ಲಿ ಕಸ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿಸುತ್ತಿರುವ ಪಟ್ಟಣ ಪಂಚಾಯಿತಿ.

ಹರೀಶ್ ತಿಮ್ಮಪ್ಪಯ್ಯನಹಳ್ಳಿ

ನಾಯಕನಹಟ್ಟಿ : ಎಲ್ಲೆ0ದರಲ್ಲಿ ಕಸ ಚೆಲ್ಲಬಾರದು’ ಎಂದು ಶಾಲೆಯೊಳಗೆ ಪಾಠ ಕೇಳಿಸಿಕೊಂಡ ಮಕ್ಕಳು ಶಾಲೆ ಆವರಣದಿಂದ ಆಚೆ ಬಂದರೆ ಸುತ್ತ ಕಸದ ರಾಶಿಯಲ್ಲಿ ಓಡಾಡಬೇಕು. ಪಟ್ಟಣದ ಬಹುತೇಕ ಎಲ್ಲ ಶಾಲೆಗಳ ಸುತ್ತಮುತ್ತಲಿನ ಪರಿಸರ ಎಷ್ಟು ಕೆಟ್ಟದಾಗಿದೆ ಎಂದರೆ, ಶಾಲೆಯೊಳಗೆ ಕುಳಿತು ಮಕ್ಕಳಿಗೆ ಸ್ವಚ್ಛತೆಯ ಪಾಠ ಹೇಳುವಾಗ ಶಿಕ್ಷಕರಿಗೂ ಮುಜುಗರವಾಗುವಂತಿದೆ.

 

ನಾಯಕನಹಟ್ಟಿ ಪಟ್ಟಣಕ್ಕೂ ಕೊಳೆತು ನಾರುವ ಕಸಕ್ಕೂ ಅವಿನಾಭಾವ ಸಂಬAಧ ಎಂಬAತೆ ಪಟ್ಟಣದ ಸ್ಥಿತಿ ಇದೆ. ಬಹುತೇಕ ಎಲ್ಲಾ ಶಾಲೆಯ ಸುತ್ತಮುತ್ತಲೂ ಶುಚಿತ್ವ ಕಾಪಾಡಲು ಸಾಧ್ಯವಾಗದ ಸ್ಥಿತಿ ಪಟ್ಟಣಕ್ಕೆ ಬಂದೊದಗಿದೆ.

 

ಎಲ್ಲ ಶಾಲೆಗಳ ಸ್ಥಿತಿಯೂ ಹೀಗೇ ಇದೆ. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ  ಶಾಲೆಯ ಸುತ್ತಮುತ್ತಲಿನ ಪರಿಸರವೂ ಇದಕ್ಕೆ ಒಳ್ಳೆಯ ಉದಾಹರಣೆ. ಶಿಕ್ಷಕರು, ಮಕ್ಕಳು ಸೇರಿ ಶಾಲೆಯನ್ನು ಸ್ವಚ್ಛವಾಗಿಟ್ಟಿದ್ದಾರೆ. ಅದರ ಆಚೆ ಕಾಲಿಟ್ಟರೆ ಕಸದ ರಾಶಿ ಇದೆ.

 

ಶಾಲೆಯ ಮುಂದೆಯೇ ಅಕ್ಕಪಕ್ಕದ ಜನರು ದಿನನಿತ್ಯ ಕಸವನ್ನು ತಂದು ಸುರಿಯುತ್ತಾರೆ. ಅದರಲ್ಲಿ ಪ್ಲಾಸ್ಟಿಕ್ ಹಾಗೂ ಇತರ ಕೆಲವು ವಸ್ತುಗಳು ಗಾಳಿಗೆ ಹಾರಾಡಿ ಶಾಲೆಯೊಳಗೂ ಬರುತ್ತವೆ. ಇದರ ಪಕ್ಕಕ್ಕೆ ಬಿಸಿಯೂಟದ ಕೊಠಡಿ ಇದೆ. ಗೋಡೆಗಳು ಭದ್ರವಾಗಿದ್ದರೂ ಕಿಟಿಕಿಗಳ ಮೂಲಕ ಚರಂಡಿಯ ಕೆಟ್ಟ ವಾಸನೆಯಂತೂ ಕೊಠಡಿಯ ಒಳಗೆ ಬಂದೇ ಬರುತ್ತದೆ. ಎಲ್ಲ ಮಕ್ಕಳು ಈ ಕಸದ ರಾಶಿಯ ಮೂಲಕವೇ ಹೋಗಬೇಕು’ ಎಂದು ಸ್ಥಳೀಯರು ದೂರುತ್ತಾರೆ.

 news_1787160177_1_949.webp

 

ಪಟ್ಟಣ ಪಂಚಾಯಿತಿಯವರು ಈ ಕಸವನ್ನು ತೆಗೆಸಿಲ್ಲ ಎಂಬುದು ಒಂದು ಸಮಸ್ಯೆಯಾದರೆ, ಅಕ್ಕಪಕ್ಕದವರು ದಿನನಿತ್ಯ ಕಸವನ್ನು ತಂದು ಇಲ್ಲೇ ಸುರಿಯುವುದು ಇನ್ನೊಂದು ಬೇಸರ ತರುವ ವಿಚಾರ.

 

ಮುಂದೆ ಒಂದು ಶಾಲೆ ಇದೆ, ಮಕ್ಕಳು ಇಲ್ಲಿ ಓಡಾಡುತ್ತಾರೆ ಎಂಬ ಜ್ಞಾನವೂ ಇಲ್ಲದೆ ಅಕ್ಕಪಕ್ಕದ ಅಂಗಡಿಗಳವರು ಕಸವನ್ನು ತಂದು ಶಾಲೆ ಮುಂದೆ ಸುರಿಯುತ್ತಾರೆ. ಹೀಗೆ ಕಸ ತಂದು ಸುರಿಯುವವರೇ ಪಟ್ಟಣ ಪಂಚಾಯಿತಿಯವರನ್ನೂ ದೂರುತ್ತಾರೆ’ ಎಂಬುದು ವಿಪರ್ಯಾಸ. ಹಸಿಕಸ, ಒಣಕಸವನ್ನು ವಿಂಗಡಿಸಿ ಪ್ರತ್ಯೇಕಗೊಳಿಸಿ ಕಸವನ್ನು ನಿರ್ವಹಣೆ ಮಾಡಲು ದೊಡ್ಡದಾದ ಕಸದ ಬುಟ್ಟಿಗಳು ತುಂಬಾ ಅವಶ್ಯಕವಾಗಿವೆ ಆದರೆ ಪಟ್ಟಣ ಪಂಚಾಯಿತಿಯವರು ಇದರಲ್ಲಿ ನಿರ್ಲಕ್ಷö್ಯವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

ನಾಯಕನಹಟ್ಟಿ ಪಟ್ಟಣದ ತೇರುಬೀದಿ ಹೋಗುವ ರಸ್ತೆಯಲ್ಲಿ ಸರ್ಕಾರಿ ಮಾದರಿ ಶಾಲೆ ಇದ್ದು ಅದೇ ರಸ್ತೆ ಬದಿಯ ಅಂಗಡಿಯ ವ್ಯಾಪಾರಿಗಳು ಕಸವನ್ನು ಹಾಕುತ್ತಿರುವುದರಿಂದ ಈ ಭಾಗದಲ್ಲಿರುವ ಪ್ರಮುಖ ರಸ್ತೆಯು ದುರ್ವಾಸನೆ ಬೀರುತ್ತಿದೆ. ಸಂಬ0ಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸದ ಕಾರಣ ಪಟ್ಟಣ ಪಂಚಾಯಿತಿಯವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ರಸ್ತೆಯ ಪಕ್ಕದಲ್ಲಿ ಕಸವನ್ನು ತಂದು ಹಾಕುತ್ತಿದ್ದು ನಾಯಿ, ಬಿಡಾಡಿ ದನಗಳು ಅಲ್ಲಿಯ ಕಸವನ್ನು ರಸ್ತೆಗೆ ಎಳೆದು ಹಾಕುತ್ತಿದ್ದು ರಸ್ತೆಯ ತುಂಬೆಲ್ಲಾ ತ್ಯಾಜ್ಯದ ರಾಶಿಯೇ ಹರಡಿರುತ್ತದೆ ಕಸದ ರಾಶಿಯಿಂದ ವಿವಿಧ ಬಗೆಯ ಬ್ಯಾಕ್ಟಿರಿಯಾಗಳು ಮತ್ತು ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ಶಾಲಾ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚಾಗಿದೆ.

 

ಪಟ್ಟಣ ಪಂಚಾಯಿತಿಯವರು ಈ ಕಸವನ್ನು ತೆಗೆಸಿಲ್ಲ ಎಂಬುದು ಒಂದು ಸಮಸ್ಯೆಯಾದರೆ, ಅಕ್ಕಪಕ್ಕದ ಜನರೂ ದಿನನಿತ್ಯ ಕಸವನ್ನು ತಂದು ಇಲ್ಲೇ ಸುರಿಯುವುದು ಇನ್ನೊಂದು ಬೇಸರ ತರುವ ವಿಚಾರ.

ಮುಂದೆ ಒಂದು ಶಾಲೆ ಇದೆ, ಮಕ್ಕಳು ಇಲ್ಲಿ ಓಡಾಡುತ್ತಾರೆ ಎಂಬ ಜ್ಞಾನವೂ ಇಲ್ಲದೆ ಅಕ್ಕಪಕ್ಕದ ಮನೆಯವರು, ಅಂಗಡಿಗಳವರು ಕಸವನ್ನು ತಂದು ಶಾಲೆ ಮುಂದೆ ಸುರಿಯುತ್ತಾರೆ. ಹೀಗೆ ಕಸ ತಂದು ಸುರಿಯುವವರೇ ಪಟ್ಟಣ ಪಂಚಾಯಿತಿಯವರನ್ನೂ ದೂರುತ್ತಾರೆ’ ಎಂಬುದು ವಿಪರ್ಯಾಸ. ಹಸಿಕಸ, ಒಣಕಸವನ್ನು ವಿಂಗಡಿಸಿ ಪ್ರತ್ಯೇಕಗೊಳಿಸಿ ಕಸವನ್ನು ನಿರ್ವಹಣೆ ಮಾಡಲು ದೊಡ್ಡದಾದ ಕಸದ ಬುಟ್ಟಿಗಳು ತುಂಬಾ ಅವಶ್ಯಕವಾಗಿವೆ ಆದರೆ ಪಟ್ಟಣ ಪಂಚಾಯಿತಿಯವರು ಇದರಲ್ಲಿ ನಿರ್ಲಕ್ಷö್ಯವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗೇಂದ್ರಗೆ ಮತ್ತೊಂದು ಮಹತ್ವದ ಹೊಣೆ: ಕಲ್ಯಾಣ ಕರ್ನಾಟಕ ಸಚಿವಾಲಯದ ಜವಾಬ್ದಾರಿಸಂಸ್ಕೃತ ವಿಶ್ವವ್ಯಾಪಿ ಜ್ಞಾನಭಾಷೆ, ಸಂಶೋಧನೆಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಲಿಕಲ್ಲೂರು- ಶಿಶು ಪಾಲನಾ ಕೇಂದ್ರದಲ್ಲಿ ತಾಯಂದಿರಿಗೆ ಜಾಗೃತಿ. ಹೊನ್ನಳ್ಳಿ ತಾಂಡಾದಲ್ಲಿ ಶ್ರೀಗುರು ಅಜ್ಜಯ್ಯನ ದ್ವಿತೀಯ ದಶಮಾನೋತ್ಸವ ವಿಶೇಷ ಪೂಜಾ ಕಾರ್ಯಕ್ರಮಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆಬಳ್ಳಾರಿಯಲ್ಲಿ ದಿವಂಗತ ಡಿ.ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆಬಳ್ಳಾರಿಯಲ್ಲಿ ರಾಜ್ಯ ಮಟ್ಟದ ಪರಿಷತ್ ಸಭೆ ಹಾಗೂ ನಶಾಮುಕ್ತ ಭಾರತ ಅಭಿಯಾನಕರ್ನಾಟಕ ಸೇರಿ ದಕ್ಷಿಣ ಭಾರತಕ್ಕೆ ನ್ಯಾಯಯುತ ಅನುದಾನ ನೀಡಿ: ಸಿಎಂ ಡಿ ಕೆ ಶಿವಕುಮಾರ್ ಒತ್ತಾಯಯಾರಿಗೆ ಒಲೆಯುತ್ತೆ ಬಿಜೆಪಿ ಟಿಕೆಟ್ ರಾಜೀವ್ ಗಾಂಧಿ ಹಾದಿಯಲ್ಲಿ ರಾಹುಲ್ ಗಾಂಧಿ