LIVE TV StateNationalPoliticsCrimeEntertainmentSportsEducationFINANCE & TAXATION
Districts Bellary

ಬಳ್ಳಾರಿಯಲ್ಲಿ ಕುಶಾಲ್ಸ್ ಫ್ಯಾಷನ್ಸ್ ಮಳಿಗೆಗೆ ನಾರಾ ಭರತ್ರೆಡ್ಡಿ ಚಾಲನೆ

ಬಳ್ಳಾರಿ : ಕುಶಾಲ್ಸ್ ಫ್ಯಾಷನ್ ಜ್ಯುವೆಲ್ಲರಿಯ ದೇಶದ 132ನೇ ಮಳಿಗೆ ಬಳ್ಳಾರಿ ನಗರದ ಇನ್‌ಫ್ಯಾಂಟ್ರಿ ರಸ್ತೆಯಲ್ಲಿ ಸೋಮವಾರ ಆರಂಭಗೊಂಡಿದ್ದು, ಬಳ್ಳಾರಿ ನಗರ ಶಾಸಕ ನಾರಾ ಭರತ್‌ರೆಡ್ಡಿ ಅವರು ಮಳಿಗೆಗೆ ಚಾಲನೆ ನೀಡಿದರು.

ಸುಮಾರು 1700 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ನೂತನ ಮಳಿಗೆಯಲ್ಲಿ ವಿವಿಧ ಮಾದರಿಯ ಫ್ಯಾಷನ್ ಹಾಗೂ ಬೆಳ್ಳಿ ಆಭರಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಗಣ್ಯರು, ಗ್ರಾಹಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಮಳಿಗೆಯಲ್ಲಿ ನೆಕ್ಲೆಸ್, ಚೋಕರ್, ಕಿವಿಯೋಲೆ, ಉಂಗುರ, ಪೆಂಡೆಂಟ್, ಬ್ರೇಸ್ಲೆಟ್, ಕಡಾ, ಮಾಂಗ್ ಟಿಕ್ಕಾ ಹಾಗೂ ಬ್ರೂಚ್ ಸೇರಿದಂತೆ ವಿವಿಧ ಮಾದರಿಯ ಆಭರಣಗಳು ಲಭ್ಯವಿದ್ದು, ೧೦ ಸಾವಿರಕ್ಕೂ ಅಧಿಕ ವಿನ್ಯಾಸಗಳನ್ನು ಪರಿಚಯಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಸಾಂಪ್ರದಾಯಿಕ ವಿನ್ಯಾಸಗಳ ಜತೆಗೆ ಆಧುನಿಕ ಶೈಲಿಯ ಆಭರಣಗಳು, ಮದುವೆ ಹಾಗೂ ವಿಶೇಷ ಸಮಾರಂಭಗಳಿಗೆ ಮತ್ತು ದೈನಂದಿನ ಬಳಕೆಗೆ ಸೂಕ್ತವಾದ ವಿನ್ಯಾಸಗಳನ್ನು ಮಳಿಗೆಯಲ್ಲಿ ಒದಗಿಸಲಾಗಿದೆ ಎಂದು ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಕುಶಾಲ್ಸ್ ಫ್ಯಾಷನ್ ಜ್ಯುವೆಲ್ಲರಿಯ ನಿರ್ದೇಶಕ ಅಂಕಿತ್ ಗುಲೆಚ್ಛಾ, ಬಳ್ಳಾರಿಯಲ್ಲಿ ಮಳಿಗೆ ಆರಂಭಿಸಿರುವುದು ಸಂತಸ ತಂದಿದೆ. ಗ್ರಾಹಕರಿಗೆ ವಿವಿಧ ವಿನ್ಯಾಸಗಳು ಹಾಗೂ ಗುಣಮಟ್ಟದ ಆಭರಣಗಳನ್ನು ಒದಗಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಹೇಳಿದರು.

೨೦೦೬ರಲ್ಲಿ ಆರಂಭಗೊಂಡಿರುವ ಸಂಸ್ಥೆ ಪ್ರಸ್ತುತ ದೇಶದ ೪೦ಕ್ಕೂ ಹೆಚ್ಚು ನಗರಗಳಲ್ಲಿ ಮಳಿಗೆಗಳನ್ನು ಹೊಂದಿದ್ದು, ಬಳ್ಳಾರಿಯಲ್ಲಿ ೧೩೨ನೇ ಮಳಿಗೆ ಆರಂಭಿಸಿರುವುದಾಗಿ ಅವರು ತಿಳಿಸಿದರು. ಕರ್ನಾಟಕದಲ್ಲಿ ಸಂಸ್ಥೆಯ ವಿಸ್ತರಣೆಯ ಭಾಗವಾಗಿ ಬಳ್ಳಾರಿ ಮಳಿಗೆ ಆರಂಭಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ತಂನ್ಸುಕ್ ಜಿ. ಗೋಳೇಚ, ಸಿಇಒ ಮನೀಶ್ ಗೋಳೇಚ, ವಿನೋದ್ ಜೈನ್, ನರೇಶ್ ಕಂಕರಿಯಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯ ದಶಮಿಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ದಸರಾ ಹಾಗೂ ಆಯುಧ ಪೂಜೆಜಾತಿಭೇದವಿಲ್ಲದೆ ದಲಿತರ ಮನೆಯಲ್ಲಿ ಊಟ ಸವಿದ ಡಾ. ಬಿ. ಯೋಗೇಶ್ ಡಿಸ್ಕವರಿ ವಾಹಿನಿಯಲ್ಲಿ ಕೆಐಐಟಿ ಸಾಧನೆ ಬಣ್ಣನೆ ಕನ್ನಡಿಗರು ವಿಶಾಲತೆ, ಸಾಮರಸ್ಯ ಉಳ್ಳವರಾಗಿರುವುದರಿಂದಲೇ ಕನ್ನಡಕ್ಕೆ ಕಂಟಕ!ಹಾಡಿನ ಚಿತ್ರೀಕರಣದೊಂದಿಗೆ ‘ಚಂದ್ರಗಿರಿ’ ಚಿತ್ರೀಕರಣ ಮುಕ್ತಾಯಸರ್ವೋದಯ ಮಹಾವಿದ್ಯಾಲಯದ ಸೌಕರ್ಯ, ಶೈಕ್ಷಣಿಕ ಸಾಧನೆಗೆ ದಾವಣಗೆರೆ ವಿವಿ ಉಪಕುಲಪತಿ ಮೆಚ್ಚುಗೆಬಡತನ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನಾಚರಣೆ ಬೆಂಗಳೂರಿನಲ್ಲಿ ಐಸಿಎಸ್ಐ ಇನ್ವೆಸ್ಟ್ ಇಂಡಿಯಾ ಶೃಂಗಸಭೆ ಆಯೋಜನೆಎಚ್.ಡಿ. ಕುಮಾರಸ್ವಾಮಿ ವಿವಾದಾತ್ಮಕ ಮಾತುಗಳಿಗೆ ಖಂಡನೆ, ಕ್ಷಮೆಯಾಚನೆಗೆ ಆಗ್ರಹ: ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಅರ್ಜುನ್ ಗೋಪಾಲಯ್ಯ