LIVE TV StateNationalPoliticsInternationalCrimeEntertainmentSportsEducationFINANCE & TAXATION
Districts Bangalore | State News

ವಿಶ್ವದೀಪ ಟ್ರಸ್ಟ್ ವತಿಯಿಂದ ‘ನಾಟ್ಯೋತ್ಸವ ಪ್ರಸ್ತುತಿ-2’ ಸಾಂಸ್ಕೃತಿಕ ಸಂಭ್ರಮ

ಬೆಂಗಳೂರು: ವಿಶ್ವದೀಪ ಟ್ರಸ್ಟ್ (ರಿ) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ಸಹಯೋಗದೊಂದಿಗೆನಾಟ್ಯೋತ್ಸವ ಪ್ರಸ್ತುತಿ-2’ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ವೈಭವದಿಂದ ಬೆಂಗಳೂರಿನಲ್ಲಿ ಜರುಗಿತು. ನಾಗಸಂದ್ರ ಶ್ರೀ ಸಾಯಿಬಾಬಾ ದೇವಸ್ಥಾನ ಆವರಣದಲ್ಲಿ ನಡೆದ ನಾಟ್ಯೋತ್ಸವ ಕಾರ್ಯಕ್ರಮಕ್ಕೆ ವಿದುಷಿ ಎಂ.ಕೆ. ವಾಸವಿ ಅವರು ಚಾಲನೆ ನೀಡಿದರು.

  ಭವ್ಯ ಸಾಂಸ್ಕೃತಿಕ ವೇದಿಕೆಯಲ್ಲಿ ಮೃದಂಗ, ತಬಲ, ನೃತ್ಯ ಮತ್ತು ಸಂಗೀತ ಕ್ಷೇತ್ರದ ಹಲವು ಹೆಸರಾಂತ ಕಲಾಪ್ರತಿಭೆಗಳು ತಮ್ಮ ಅದ್ಭುತ ಪ್ರದರ್ಶನಗಳ ಮೂಲಕ ಪ್ರೇಕ್ಷಕರನ್ನು ಸೆಳೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜನಪದ ಕಲಾವಿದರಾದ ಗಂಗಣ್ಣ ಮತ್ತು ತಂಡದವರು ಸಾಂಪ್ರದಾಯಿಕ ಕಲೆಯ ಸೊಗಡನ್ನು ಪಸರಿಸಿದರು.  ಭರತನಾಟ್ಯ ನೆರೆದಿದ್ದವರ ಆಕರ್ಷಿಸಿತು.

news_1785518033_3_631.webp

 

ರಾಯರ ನೃತ್ಯ ಎಲ್ಲರನ್ನ ಮಂತ್ರ ಮುಗ್ಧರನ್ನಾಗಿಸ್ತು.  ವಿಶ್ವದೀಪ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ದೀಪಾ ಎಂ. ಹಾಗೂ ಕಾರ್ಯದರ್ಶಿಯಾದ ಶ್ರೀ ವಿಶ್ವನಾಥ್ ಕೆ. ಅವರು ಕಾರ್ಯಕ್ರಮದ ನೇತೃತ್ವ ವಹಿಸಿ, ಆಗಮಿಸಿದ್ದ ಕಲಾಭಿಮಾನಿಗಳನ್ನು ಹಾಗೂ ಗಣ್ಯರನ್ನು ಆದರದಿಂದ ಸ್ವಾಗತಿಸಿದರು. ತೋಟದಗುಡ್ಡದಹಳ್ಳಿಯ ನಾಗಸಂದ್ರ ಭಾಗದ ನೂರಾರು ಕಲಾ ಆಸಕ್ತರು ಸಾಂಸ್ಕೃತಿಕ ಹಬ್ಬದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
“ಅಮೋಘ” ಚಲನಚಿತ್ರದ ಹಾಡು ಬಿಡುಗಡೆಬಳ್ಳಾರಿ ಜಿಲ್ಲೆಯ ಎಸ್ಐಆರ್ ಕರಡು ಮತದಾರರ ಪಟ್ಟಿ ಪ್ರಕಟನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಗಳ ದರ್ಶನ ಪಡೆದ ಮಾಜಿ ಶಾಸಕ ಸುರೇಶ್ ಬಾಬುಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ, ಅದೊಂದು ವಿಚಾರಧಾರೆ: ಪ್ರೊ. ಎನ್.ಎಂ. ಸಾಲಿಸಾಂಸಾರಿಕ ಜೀವನ ಪ್ರವೇಶಿಸಿದ ಸ್ಪೈಡರ್ ಮ್ಯಾನ್ನಾಗೇಂದ್ರಗೆ ಮತ್ತೊಂದು ಮಹತ್ವದ ಹೊಣೆ: ಕಲ್ಯಾಣ ಕರ್ನಾಟಕ ಸಚಿವಾಲಯದ ಜವಾಬ್ದಾರಿಸಂಸ್ಕೃತ ವಿಶ್ವವ್ಯಾಪಿ ಜ್ಞಾನಭಾಷೆ, ಸಂಶೋಧನೆಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಲಿಕಲ್ಲೂರು- ಶಿಶು ಪಾಲನಾ ಕೇಂದ್ರದಲ್ಲಿ ತಾಯಂದಿರಿಗೆ ಜಾಗೃತಿ. ಹೊನ್ನಳ್ಳಿ ತಾಂಡಾದಲ್ಲಿ ಶ್ರೀಗುರು ಅಜ್ಜಯ್ಯನ ದ್ವಿತೀಯ ದಶಮಾನೋತ್ಸವ ವಿಶೇಷ ಪೂಜಾ ಕಾರ್ಯಕ್ರಮಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ