ಮುಂಡರಗಿ : ತಾಲೂಕು ವ್ಯಾಪ್ತಿಯ ಡಂಬಳ ಗ್ರಾಮದಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ (ಡಿ.ಪಿ.ಇ.ಪಿ) ಶಾಲೆಯಲ್ಲಿ ಸುರಕ್ಷಿತ ಬಚಪನ್ ಅಭಿಯಾನ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು . ಇದೇ ಸಮಯಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶಾಂತಪ್ಪ ಕಂಬಳಿ ಅವರು ಮಾತನಾಡಿ ಮಕ್ಕಳ ಹಕ್ಕುಗಳ ಕುರಿತು ಶಾಲಾ ಮಕ್ಕಳೊಂದಿಗೆ ಚರ್ಚಿಸಿದರು.
ಶಾಲೆಯ ಹಿರಿಯ ಶಿಕ್ಷಕಿಯರಾದ ರಿಹಾನ ಬೇಗಂ ಅಕ್ಕಿ ಅವರು ಮಾತನಾಡಿ ಮಕ್ಕಳಿಗೆ ಒಳ್ಳೆಯ ನಡವಳಿಕೆ, ಗುಡ್ ಟಚ್ ಬ್ಯಾಡ್ ಟಚ್ ಹಾಗೂ ಪೋಕ್ಸೋ ಕಾಯ್ದೆ ಕುರಿತು ಮಕ್ಕಳಿಗೆ ವಿವರವಾಗಿ ತಿಳಿಸಿದರು. ಮತ್ತೋರ್ವ ಶಿಕ್ಷಕಿಯರಾದ ಪ್ರೇಮಾ ಲಮಾಣಿ ಅವರು ಮಾತನಾಡಿ ಬಾಲ್ಯ ವಿವಾಹ ಆಗುವುದು ತಪ್ಪು ಅದರಿಂದ ಆಗುವ ತೊಂದರೆಗಳ ಕುರಿತು ಮಾತನಾಡಿದರು, ಸಮಾಜ ವಿಜ್ಞಾನ ಶಿಕ್ಷಕಿಯರಾದ ಶಾಂತಾ ಲಮಾಣಿ ಮಾತನಾಡಿ ಮಕ್ಕಳ ಹಕ್ಕುಗಳಾದ ಓದುವ ಹಕ್ಕು, ಮಾತನಾಡುವ ಹಕ್ಕು, ಆಡುವ ಹಕ್ಕು, ಸುರಕ್ಷತೆಯ ಹಕ್ಕು, ಆರೋಗ್ಯದ ಹಕ್ಕು, ತಪ್ಪು ಮಾಡುವ ಹಕ್ಕು,ಮತ್ತು ಅವುಗಳ ಜವಾಬ್ದಾರಿ ಕುರಿತು ಮಾತನಾಡಿ ನನ್ನ ಬಾಲ್ಯ ನನ್ನ ಅಧಿಕಾರ ಎನ್ನುವ ಕವನ ಪಠಿಸಿದರು. ಗಣಿತ ಶಿಕ್ಷಕಿಯರಾದ ಚೈತ್ರಾ ವಾಲ್ಮೀಕಿ ಅವರು ಮೊಬೈಲ್ ಗಳಲ್ಲಿ ಸುರಕ್ಷಿತ ಆ್ಯಪ್ ಗಳನ್ನು ಬಳಸಬೇಕು ಮತ್ತು ಯಾವುದೇ ವಯಕ್ತಿಕ ಮಾಹಿತಿಯನ್ನು ನೀಡಬಾರದು ಎಂದು ಮಕ್ಕಳಿಗೆ ತಿಳಿ ಹೇಳಿದರು

ಇದೇ ಸಂಧರ್ಭದಲ್ಲಿ ಶಾಲೆಯ ವಿವಿಧ ವಿಷಯಗಳ ಶಿಕ್ಷಕರಾದ ವೀಣಾ ಅಥಣಿ ಮತ್ತು ಅತಿಥಿ ಶಿಕ್ಷಕರಾದ ಸಾವಿತ್ರಿ ಮಾಳೆಕೊಪ್ಪ, ಪ್ರಿಯಾಂಕಾ ಮೇಗೂರ,ಬೋಧಕೇತರ ಸಿಬ್ಬಂದಿ ವರ್ಗದವರು, ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.