ಹರೀಶ್ ಟಿ.ಟಿ ತಿಮ್ಮಪ್ಪಯ್ಯನಹಳ್ಳಿ
ನಾಯಕನಹಟ್ಟಿ : ಅಧಿಕಾರಿಗಳ ನಿರ್ಲಕ್ಷದಿಂದ ಗ್ರಾಮೀಣ ಜನರಿಗೆ ಶುದ್ಧನೀರು ಸಿಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ತಳಕು ಹೋಬಳಿಯ ಮಹಾತ್ಮ ಗಾಂಧಿ ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬಂಜಿಗೆರೆ ಗ್ರಾಮ ಮೂಲಭೂತ ಸೌಕಾರ್ಯದಿಂದ ಬಹಳ ವಂಚಿತವಾಗಿದೆ. ಎಲ್ಲಿ ನೋಡಿದರು. ಚರಂಡಿಯಲ್ಲಿ ನೀರು ತುಂಬಿ ತುಳುಕುತ್ತಿದೆ. ಹಲವಾರು ಜನರಿಗೆ ಬಹಳ ತೊಂದರೆ ಉಂಟು ಆಗಿದೆ. ಬಂಜಿಗೆರೆ ಗ್ರಾಮದಲ್ಲಿ ಇಂತದೆ ಪರಿಸ್ಥಿತಿ ಇದೆ. ದುರಸ್ತಿ ಮಾಡುವವರು ಯಾರು? ಎಂಬ ಪ್ರಶ್ನೆಗೆ ಉತ್ತರವಿಲ್ಲವಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧಕುಡಿಯುವ ನೀರು ಸಿಗಬೇಕಾದರೆ ಘಟಕ ಕೆಟ್ಟು ಹೋಗಿ ನಿಂತಿದೆ. ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಸ್ಥಳೀಯರು ಪಂಚಾಯಿತಿಯವರು ದುರಸ್ತಿ ಮಾಡುತ್ತಿದ್ದರು ನಂತರ ಅವರು ಸಹ ಇತ್ತ ತಲೆ ಹಾಕುವುದನ್ನು ಬಿಟ್ಟರು. ಹಳ್ಳಿಗರ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಸ್ಥಾಪಿಸಿರುವ ನೀರಿನ ಘಟಕ ವಿವಿಧ ಕಾರಣಕ್ಕೆ ಸ್ಥಗಿತಗೊಂಡಿರುವ ಕುರಿತು ಸ್ಥಳಿಯ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರು ಸ್ಪಂದಿಸಿಲ್ಲ. ಇದೆ ಕಾರಣಕ್ಕೆ ಅವು ಹಾಳು ಬಿದ್ದ ಸ್ಥಿತಿಗೆ ತಲುಪಿದೆ ಎಂದ ಜನಾಕ್ರೋಶವು ವ್ಯಕ್ತವಾಗಿದೆ. ಪಂಚಾಯಿತಿ ಅಧಿಕಾರಿಗಳು ಸೇರಿದಂತೆ ವಿವಿಧ ಹಂತದ ಜನಪ್ರತಿನಿಧಿಗಳಿಗೆ ಮನವಿ ಮಾಡಿರುವ ಜನ ಕಡೆಗೆ ಬೇಸತ್ತು ಸುಮ್ಮನಾಗಿದ್ದಾರೆ. ಪಂಚಾಯಿತಿ ಅಧಿಕಾರಿಗಳು ಘಟಕ ದುರಸ್ತಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಹೇಳುತ್ತಾರೆ. ಕುಡಿಯುವ ನೀರು ಮತ್ತು ಗ್ರಾಮೀಣ ನೈರ್ಮಲ್ಯ ಇಲಾಖೆಗೆ ಅಧಿಕಾರಿಗಳಿಗೆ ಕೇಳಿದರೆ ಗ್ರಾಮ ಪಂಚಾಯಿತಿ ನಿರ್ವಹಣೆ ಮಾಡಲಿದೆ ಎಂದು ಹೇಳುತ್ತಾರೆ. ಆಗ ಪಂಚಾಯಿತಿಯವರು ಏಜೆನ್ಸಿ ನಿರ್ವಾಹಣೆ ಮಾಡಲಿದೆ ಎಂದು ಒಬ್ಬರ ಮೇಲೋಬ್ಬರು ಹಾಕಿಕೊಂಡು ಕಾಲಾಹರಣ ಮಾಡುತ್ತಲೆ ಬಂದಿದ್ದಾರೆ. ಒಂದು ವಾರ ಶುದ್ಧನೀರು ಬರದೆ ಇರುವುದರಿಂದ ಆ ಗ್ರಾಮಸ್ಥರು ಅಸಮದಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗದಲ್ಲಿ ಚರಂಡಿ ನೀರು ನಿಂತು ದುರ್ವಾಸನೆ ಬೀರುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಶಾಲೆ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶ ಸ್ವಚ್ಚವಾಗಿರಬೇಕಾದರೆ ಶಾಲೆಯ ಮುಂಭಾಗದ ಕೊಳಚೆ ನೀರು ಕೆರೆಯಂತೆ ನಿಂತಿರುವುದರಿಂದ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಶಾಲೆಯ ಮುಖ್ಯ ದ್ವಾರದ ಎದುರು ನೀರು ನಿಲ್ಲುತ್ತಿರುವುದಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದು. ಶಾಲೆ ಆವರಣದಲ್ಲಿ ದುರ್ವಾಸನೆ ವ್ಯಾಪಿಸಿದೆ. ನಿಂತ ನೀರಿನಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು. ಡೆಂಗ್ಯೂ, ಮಲೇರಿಯ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಬೀತಿ ಎದುರಾಗಿದೆ ಚಿಕ್ಕ ಮಕ್ಕಳು ಈ ನೀರಿನಲ್ಲಿ ಬಿದ್ದು ಅಪಾಯಕ್ಕೆಯಿಡಾಗುವ ಸಾಧ್ಯತೆ ಇರುವುದರಿಂದ ಸ್ಥಳಿಯರು ಕಳವಳ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ಬರುವುದು ಹೋಗುವುದು ದೊಡ್ಡ ಸಾಹಸದ ಕೆಲಸವಾಗಿದೆ. ಕೊಳಚೆ ನೀರು ಸೊಳ್ಳೆ ಕಾಟಕ್ಕೆ ಬೇಸತ್ತ ಮಕ್ಕಳು ಶಾಲೆಗೆ ಬರದೆ ಮನೆಯಲ್ಲಿ ಉಳಿಯುತ್ತಿದ್ದಾರೆ.
ಅಂಬೆಡ್ಕರ್ ಕಾಲೋನಿಯಲ್ಲಿ ದೊಡ್ಡ ಚರಂಡಿ ಇದ್ದು, ಚರಂಡಿ ನೀರು ಹಳ್ಳಕ್ಕೆ ಹರಿದು ಹೋಗುವ ಮಾರ್ಗ ಮದ್ಯೆ ಗಿಡಗಂಟೆ ಬೆಳೆದು ಕಸ ತ್ಯಾಜ್ಯ ಕೊಳಚೆ ತುಂಬಿಕೊ0ಡಿದೆ. ಇದರಿಂದ ನೀರು ಹರಿಯದೆ ನೇರವಾಗಿ ಅಲ್ಲೆ ನಿಂತಿರುತ್ತವೆ. ಇದರಿಂದ ಹಾವು ಸೇರಿದಂತೆ ಕ್ರಿಮಿ ಕೀಟಗಳು ನಿವಾಸಿಗಳ ಮನೆಗೆ ನುಗ್ಗುತ್ತವೆ. ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರು ಸಮಸ್ಯೆ ಪರಿಹಾರವಾಗುತ್ತಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕೆಲವು ಹಳ್ಳಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನಾಂಗದವರು ಹಾಗೂ ಹಿಂದುಳಿದ ವರ್ಗದವರು ವಾಸಿಸುತ್ತಿದ್ದು ತಳಕು ಹೋಬಳಿಯ ಅನೇಕ ಗ್ರಾಮಗಳು ಸರ್ಕಾರಿ ಸೌಲಭ್ಯಗಲಾದ ಶುದ್ಧ ಕುಡಿಯುವ ನೀರಿನ ಘಟಕಗಳು ರಸ್ತೆ ಚರಂಡಿ ಬೀದಿ ದೀಪಗಳಿಂದ ವಂಚಿತರಾಗಿ ಕುಗ್ರಾಮಗಳಾಗಿ ಮಾರ್ಪಟ್ಟಿವೆ. ನಮ್ಮ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ಇಡೀ ರಾಜ್ಯದಲ್ಲಿಯೇ ಹಿಂದುಳಿದ ಪ್ರದೇಶವಾಗಿದ್ದು ಜಿಲ್ಲಾಡಳಿತ ಹಾಗೂ ತಾಲೂಕ ಆಡಳಿತ ಹಾಗೂ ಗ್ರಾಮ ಪಂಚಾಯತಿ ಮಟ್ಟಗಳಲ್ಲಿ ಗ್ರಾಮ ಸಭೆಗಳನ್ನು ಮಾಡುವ ಮೂಲಕ ಅಲ್ಲಿನ ಸಮಸ್ಯೆಗಳನ್ನು ಆಲಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸುತ್ತಿದ್ದೇವೆ ಇಂತಹ ಸರ್ಕಾರಿ ಸೌಲಭ್ಯ ವಂಚಿತ ಹಲವು ಗ್ರಾಮಗಳಲ್ಲಿ ವಾಸಿಸುವಂತಹ ನಾಗರಿಕರು ಹಾಗೂ ಸಾರ್ವಜನಿಕರು ನೊಂದು ಬೆಂದು ಬೇಸತ್ತು ಹೋಗಿದ್ದಾರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ನಾಗರಿಕನಿಗೆ ಸಿಗಬೇಕಾದಂತಹ ಕನಿಷ್ಠ ಸೌಲಭ್ಯಗಳು ಸಿಗದೇ ಕುರುವ ಪರಿಸ್ಥಿತಿ ಎದುರಾಗಿದೆ ಎಂದು ಇಲ್ಲಿನ ನಾಗರಿಕರು ಅಳಲನ್ನು ತೋಡಿಕೊಂಡರು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಡಾ. ವಾಸುದೇವ ಮೇಟಿ ಬಣದ ಹೋಬಳಿ ಅಧ್ಯಕ್ಷ ಡಾ.ನಾಗರಾಜ್ ಮೀಸೆ, ಚಿತ್ರದುರ್ಗ ಜಿಲ್ಲಾ ಕಾರ್ಯದರ್ಶಿ ನವೀನ್ ಮದಕರಿ, ಕಾರ್ಯದರ್ಶಿ ಮಂಜುನಾಥ ಕೆ ಎಂ. ಉಪಾಧ್ಯಕ್ಷ ಸಿ.ಎಸ್.ರಾಘವೇಂದ್ರ, ಮಹದೇವಪುರ ಬಸವರಾಜ್, ಬಂಜಿಗೆರೆ ಗ್ರಾಮದ ಹರೀಶ್ ಯಾದವ್ ಹಾಗೂ ಬಂಜಿಗೆರೆ ಗ್ರಾಮಸ್ಥರು ಇನ್ನು ಅನೇಕ ರೈತ ಮುಖಂಡರು ಹಾಗೂ ಮಹಿಳೆಯರು ಭಾಗವಹಿಸಿದ್ದರು.