LIVE TV StateNationalPoliticsInternationalCrimeEntertainmentSportsEducationFINANCE & TAXATION
Districts Bangalore

ಬೆಸ್ಟ್ ಟೀಚರ್ ಆಫ್ ಎಪಿಎಸ್ – 2026’ ಪ್ರಶಸ್ತಿ ಪ್ರಧಾನ

ಬೆಂಗಳೂರು :  ಶ್ರದ್ಧೆ, ಉತ್ಸಾಹದ ವಾತಾವರಣದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಆಡಳಿತ ಮಂಡಳಿ, ನಿವೃತ್ತ ಸಿಬ್ಬಂದಿ ಜೊತೆಗೂಡಿ ಎಪಿಎಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

 

 ಶಿಕ್ಷಣ ಸಂಸ್ಥೆಗಳ ಸಮೂಹವಾಗಿ ಎಪಿಎಸ್‌ ಅನ್ನು ರೂಪಿಸಿದ ಸಂಸ್ಥಾಪಕ ಪ್ರೊ. ಎನ್. ಅನಂತಾಚಾರ್ ಅವರ 116ನೇ ಜನ್ಮ ವಾರ್ಷಿಕೋತ್ಸವವನ್ನು ವಿಶೇಷವಾಗಿ ಸ್ಮರಿಸಲಾಯಿತು.

 

ರಾಮಕೃಷ್ಣ ಮಠದ ವೀರೇಶಾನಂದ ಸ್ವಾಮೀಜಿ ಮಾತನಾಡಿ, ಬೋಧನಾ ವೃತ್ತಿಯು ಅತ್ಯಂತ ಶ್ರೇಷ್ಠ ವೃತ್ತಿಗಳಲ್ಲಿ ಒಂದಾಗಿದೆ. ಶಿಕ್ಷಕರು ಪ್ರಾಮಾಣಿಕತೆ, ಸಮರ್ಪಣೆ ಮತ್ತು ಕರುಣೆಯಿಂದ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯ ಒಳಿತೇ ತಮ್ಮ ಪ್ರಮುಖ ಗುರಿಯಾಗಿರಬೇಕು. ಶಿಕ್ಷಕರ ಪ್ರಭಾವ ತರಗತಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಯುವ ಪೀಳಿಗೆಯ ವ್ಯಕ್ತಿತ್ವ ಹಾಗೂ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.

 ಎಪಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸಿಎ ಡಾ. ವಿಷ್ಣು ಭರತ್ ಅಲಂಪಳ್ಳಿ ಮಾತನಾಡಿ, ಶಿಕ್ಷಕರು ಎಪಿಎಸ್‌ನ ಆಧಾರಸ್ತಂಭ ಮತ್ತು ಶಕ್ತಿಯಾಗಿದ್ದಾರೆ. ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳನ್ನು ತರುತ್ತಿದ್ದರೂ, ಎಐ ಎಂದಿಗೂ ಶಿಕ್ಷಕರ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

news_1788710503_5_281.webp

 

ಈ ವಿಶೇಷ ಸಂದರ್ಭದಲ್ಲಿ ಸಿಎ ಡಾ. ವಿಷ್ಣು ಭರತ್ ಅಲಂಪಳ್ಳಿ ಅವರು ರಚಿಸಿರುವ “ಎಜುಕೇಶನ್ ಇಸ್ ಎ ಟೂಲ್ ಫಾರ್ ಸೆಕ್ಸಸ್” ಕೃತಿಯನ್ನು  ವೀರೇಶಾನಂದ ಸ್ವಾಮೀಜಿ ಅವರು ಬಿಡುಗಡೆ ಮಾಡಿದರು. ವ್ಯಕ್ತಿಗಳ ಸಬಲೀಕರಣ, ವ್ಯಕ್ತಿತ್ವ ನಿರ್ಮಾಣ ಹಾಗೂ ಯಶಸ್ಸಿನ ಹಾದಿ ರೂಪಿಸುವಲ್ಲಿ ಶಿಕ್ಷಣದ ಮಹತ್ವವನ್ನು ಈ ಕೃತಿ ಪ್ರತಿಬಿಂಬಿಸುತ್ತದೆ.

ಪ್ರೊ. ಅನಂತಾಚಾರ್ ಹೆಸರಿನಲ್ಲಿ ಶ್ರೇಷ್ಠ ಶಿಕ್ಷಕರ ಪೀಠ ಸ್ಥಾಪನೆ ಈ ವರ್ಷದ ಪ್ರಮುಖ ಆಕರ್ಷಣೆಯಾಗಿದೆ. ಎಪಿಎಸ್‌ನ ಇತಿಹಾಸದಲ್ಲೇ ಮೊದಲ ಬಾರಿಗೆ ‘ಪ್ರೊ. ಅನಂತಾಚಾರ್ ಚೇರ್ ಫಾರ್ ದಿ ಬೆಸ್ಟ್ ಟೀಚರ್’ ಎಂಬ ವಿಶೇಷ ಪೀಠವನ್ನು ಸ್ಥಾಪಿಸಲಾಗಿದೆ.

 

ಪ್ರೊ. ಆನಂದ್ ಅವರಿಗೆ ‘ಬೆಸ್ಟ್ ಟೀಚರ್ ಆಫ್ ಎಪಿಎಸ್ – 2026’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಿಜೆಪಿ ಬೃಹತ್ ಸಾರ್ವಜನಿಕ ಸಮಾವೇಶಕ್ಕೆ ಅನುಮತಿ : ಭರದ ಸಿದ್ದತೆವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ನಾರಾ ಭರತ್ ರೆಡ್ಡಿಸತತ ಪುನರ್ವಸತಿ ಮತ್ತು ಫಿಸಿಯೋಥೆರಪಿಯ ಮೂಲಕ ರೋಗಿ ಸಂಪೂರ್ಣ ಗುಣಮುಖಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯ. ಕಾಡಿನ ಜ್ಞಾನ ನಾಡಿಗೆ ಹಂಚಿದ ಕಾಡಿನ ಸಂತ ತೇಜಸ್ವಿ: ಗೊರೂರು ಶಿವೇಶ್ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ -2026 ಪಾದಯಾತ್ರೆ ಕೇವಲ ರಾಜಕೀಯ ಹೋರಾಟವಲ್ಲ; ಜನರ ಬದುಕಿನ ಪ್ರಶ್ನೆಗಳಿಗಾಗಿ ನಡೆಯುತ್ತಿರುವ ಜನಾಂದೋಲನ ವಿಜಯೇಂದ್ರ‘ಸಾಕ್ಷಿ ‘ ಕಿರುಚಿತ್ರ ಚಿತ್ರೀಕರಣ ಮುಕ್ತಾಯಮಲೆ ಮಾದೇಶ್ವರ ಬೆಟ್ಟದ ದೇವರ ದರ್ಶನ ಪಡೆದ ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷ ಸಿ. ನರೇಂದ್ರಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ